ಭಾರತದಲ್ಲಿ ವಿವಾಹದ ಅಂತರ್ಗತ ಬಲಾತ್ಕಾರಕ್ಕೆ ಶಿಕ್ಷೆ ಇಲ್ಲ ! – ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಂ (ಕೇರಳ) – ಭಾರತದಲ್ಲಿ ವಿವಾಹದ ಅಂತರ್ಗತ ಬಲಾತ್ಕಾರಕ್ಕೆ ಶಿಕ್ಷೆ ಇಲ್ಲದಿದ್ದರೂ ಆ ಸಂದರ್ಭದಲ್ಲಿ ವಿವಾಹ ವಿಚ್ಛೇದನೆಗಾಗಿ ಖಚಿತವಾಗಿಯೂ ಅವಕಾಶ ನೀಡಬಹುದಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ಹೇಳಿದೆ. ಇದೇ ವೇಳೆಗೆ ವಿವಾಹ ಕಾನೂನಿನಲ್ಲಿ ಸುಧಾರಣೆ ಮಾಡುವ ಆವಶ್ಯಕತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹೆಂಡತಿಯ ಸ್ವಾಂತಂತ್ರ್ಯವನ್ನು ನಿರ್ಲಕ್ಷಿಸುವ ಗಂಡನ ಸ್ವಭಾವ ‘ವಿವಾಹದ ಅಂತರ್ಗತ ಬಲಾತ್ಕಾರ’ ಎನ್ನಲಾಗಿದೆ; ಆದರೆ ಅಂತಹ ವರ್ತನೆಗೆ ಶಿಕ್ಷೆಯನ್ನು ನೀಡಲಾಗುವುದಿಲ್ಲ. ಇಂತಹ ವರ್ತನೆ ಶಾರೀರಿಕ ಮತ್ತು ಮಾನಸಿಕ ಹಿಂಸೆಯಾಗಿದೆ. ವಿವಾಹದಲ್ಲಿ ಸಂಗಾತಿಗಳಿಗೆ ಸಮನಾಗಿ ನೋಡಿಕೊಳ್ಳಬೇಕು. ಗಂಡನು ಹೆಂಡತಿಯ ಶರೀರದ ಮೇಲೆ ಅಧಿಕಾರವನ್ನು ತೋರಿಸಬಾರದು.

ಪ್ರಕರಣವೊಂದರಲ್ಲಿ ಹೆಂಡತಿಯು ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನೆಗಾಗಿ ಪ್ರಯತ್ನಿಸಿದ್ದಳು. ಆಗ ಹೆಂಡತಿಗೆ ಹಿಂಸೆ ಮಾಡಿದ ಆಧಾರದ ಮೇರೆಗೆ ಅನುಮತಿ ನೀಡಲಾಗಿತ್ತು. ಈ ತೀರ್ಪಿನ ವಿರುದ್ಧ ಗಂಡನು ಕೇರಳದ ಉಚ್ಚ ನ್ಯಾಯಾಲಯದಲ್ಲಿ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದನು; ಆದರೆ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.