ಕಾಶ್ಮೀರದಲ್ಲಿ ಕಳೆದ ೨೪ ಗಂಟೆಯಲ್ಲಿ ೫ ಭಯೋತ್ಪಾದಕರ ಸಾವು

ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದಕರ ಸಂಹಾರ ಮಾಡಲಾಗುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ನಾಶವಾಗುತ್ತಿಲ್ಲ; ಇದಕ್ಕೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಯವು ಪಾಕ್‍ನಿಂದ ನಿರಂತರವಾಗಿ ನಡೆಯುತ್ತದೆ. ಅದನ್ನು ನಿಲ್ಲಿಸಲು ಪಾಕ್‍ಅನ್ನು ನಾಶ ಮಾಡುವುದು ಅಗತ್ಯವಿದೆ !

‘ಶ್ರೀ ಸತ್ಯನಾರಾಯಣ ಕಥೆ ಮತ್ತು ಭಾಗವತ ಕಥೆಗಳು ಅವೈಜ್ಞಾನಿಕ !'(ವಂತೆ)

ಆಮ್ ಆದ್ಮಿ ಪಕ್ಷದ ಗುಜರಾತನ ಅಧ್ಯಕ್ಷ ಗೋಪಾಲ ಇಟಾಲಿಯಾ ಇವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಬಗ್ಗೆ ಅವರ ಮೇಲೆ ದೂರು ದಾಖಲಿಸಲಾಗಿದೆ. ‘ಹಿಂದೂ ಐಟಿ ಸೆಲ್’ನ ಅನುಜ್ ಮಿಶ್ರಾ ಇವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.

ಕೇರಳದ ಮಾಕಪ್‍ನ ಯುವ ಶಾಖೆಯ ಕಾರ್ಯಕರ್ತನಿಂದ ೬ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ

ರಾಜ್ಯದ ಇಡುಕಿ ಜಿಲ್ಲೆಯಲ್ಲಿನ ಕಮ್ಯುನಿಸ್ಟ ಪಕ್ಷದ ಡೆಮೊಕ್ರೆಟಿಕ ಯುಥ ಫೆಡರೆಶನ್ ಆಫ್ ಇಂಡಿಯಾ ಈ ಯುವ ಶಾಖೆಯ ೨೨ ವರ್ಷದ ಕಾರ್ಯಕರ್ತ ಅರ್ಜುನ ಇವನನ್ನು ೬ ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಜೈಪುರದಲ್ಲಿ ಹಸುವಿನ ಸೆಗಣಿಯಿಂದ ಬಣ್ಣ ನಿರ್ಮಿಸುವ ಪ್ರಕಲ್ಪದ ಉದ್ಘಾಟನೆ

ಸಗಣಿಯಿಂದ ನಿರ್ಮಿಸಿದ ಬಣ್ಣವು ವಿಷರಹಿತವಾಗಿದ್ದು ಹಾಗೂ ಇಕೋ ಫ್ರೆಂಡ್ಲಿ(ಪರಿಸರಕ್ಕೆ ಪೂರಕ)ವಾಗಿದೆ. ಈ ಬಣ್ಣದಲ್ಲಿ ಗಾಜು, ಪಾದರಸ, ಕ್ರೊಮೊಯಮ್, ಆರ್ಸೆನಿಕ್ ಮತ್ತು ಕಾಡಮಿಯಮ್‍ಅನ್ನು ಉಪಯೋಗಿಸಲಾಗಿದೆ. ಈ ಸಗಣಿಯಿಂದ ನಿರ್ಮಿಸಿದ ಬಣ್ಣಗಳ ಮಾರಾಟ ಹೆಚ್ಚಾದರೆ ರೈತರಲ್ಲಿನ ಸಗಣಿಯ ಖರೀದಿಯು ಹೆಚ್ಚಾಗುವುದು.

ಎಲ್ಲಾ ಟ್ವೀಟ್‍ಗಳನ್ನು ‘ಡಿಲಿಟ್’ ಮಾಡಿದ ಕೇಂದ್ರದ ರಾಜ್ಯಸಚಿವ ಹಾಗೂ ಪ್ರಖರ ಹಿಂದುತ್ವನಿಷ್ಠ ಶೋಭಾ ಕರಂದ್ಲಾಜೆಯವರು !

ಜುಲೈ ೭ ರಂದು ಸಂಜೆ ಪ್ರಮಾಣವಚನ ಸಮಾರಂಭದ ಕೆಲವು ಗಂಟೆಗಳ ಹಿಂದೆ ಕರಂದ್ಲಾಜೆ ತಮ್ಮ ಟ್ವಿಟರ್ ಖಾತೆಯ ಎಲ್ಲಾ ಟ್ವೀಟ್ಸ್‍ಗಳನ್ನು ‘ಡಿಲಿಟ್’ ಮಾಡಿರುವುದು ಬೆಳಕಿಗೆ ಬಂದಿದೆ. ಕರಂದ್ಲಾಜೆ ಇವರು ಗೋಹತ್ಯೆ, ಲವ್ ಜಿಹಾದ್, ಹಿಂದೂಗಳ ಹತ್ಯೆ ಇತ್ಯಾದಿ ಘಟನೆಗಳ ಬಗ್ಗೆ ಟ್ವೀಟ್‍ನ ಮೂಲಕ ತುಂಬಾ ಕ್ರಿಯಾಶೀಲರಾಗಿದ್ದರು.

ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶ ದೊರಕಿರುವುದು ನನ್ನ ಭಾಗ್ಯ!- ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಇಂದು ‘ಹಿಂದೂ ಇಕೋಸಿಸ್ಟಂ’ ಸಂಘಟನೆಯು ರಾಷ್ಟ್ರ ಮತ್ತು ಧರ್ಮಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶವನ್ನು ನನಗೆ ಲಭಿಸಿದೆ ಮತ್ತು ಅವರು ಮಾಡಿರುವ ಕಾರ್ಯಗಳನ್ನು ಅರಿಯಲು ನನಗೆ ಸಾಧ್ಯವಾಗಿರುವುದು ನನ್ನ ಭಾಗ್ಯವೆಂದು ತಿಳಿಯುತ್ತೇನೆ ಎಂದು ಕೇಂದ್ರ ಸಚಿವಗಿರಿರಾಜ್ ಸಿಂಗ್ ಇವರು ಪ್ರತಿಪಾದಿಸಿದರು.

ದರೋಡೆಯ ಉದ್ದೇಶದಿಂದ ಕೇಂದ್ರದ ಮಾಜಿ ಸಚಿವ ದಿವಂಗತ ಪಿ. ರಂಗರಾಜನ್ ಕುಮಾರಮಂಗಲಮ್ ಅವರ ಪತ್ನಿಯ ಕೊಲೆ

ಮಾಜಿ ಕೇಂದ್ರ ಸಚಿವ ದಿವಂಗತ ಪಿ. ರಂಗರಾಜನ್ ಕುಮಾರಮಂಗಲಮ್ ಅವರ ಪತ್ನಿ ಕಿಟ್ಟಿ ಕುಮಾರಮಂಗಲಮ್ (೬೭) ಅವರನ್ನು ಜುಲೈ ೬ ರ ರಾತ್ರಿ ವಸಂತ್ ವಿಹಾರದ ಮನೆಯೊಳಗೆ ನುಗ್ಗಿದ ದರೋಡೆಕೋರರು ಹತ್ಯೆ ಮಾಡಿದ್ದಾರೆ.

ಮತಾಂತರಕ್ಕಾಗಿ ನ್ಯಾಯಾಲಯದ ಚೇಂಬರ್ ಬಳಸುತ್ತಿದ್ದ ಮತಾಂಧ ನ್ಯಾಯವಾದಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ ದೆಹಲಿ ಬಾರ್ ಕೌನ್ಸಿಲ್ !

ಕಡಕಡುಮಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿ ಇಕ್ಬಾಲ್ ಮಲಿಕ್ ಅವರ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಪರಿಣಾಮವಾಗಿ, ಅವನ ಪರವಾನಗಿ ರದ್ದಾಗಿರುವ ತನಕ ಅವನಿಗೆ ಕಾನೂನು ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ

ಐಎಸ್‌ಐಗೆ ಗೌಪ್ಯ ದಾಖಲೆಗಳನ್ನು ಒದಗಿಸಿದ್ದಕ್ಕಾಗಿ ಭಾರತೀಯ ಸೇನೆಯ ಇಬ್ಬರು ಸೈನಿಕರ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ್ದ ಆರೋಪದ ಮೇಲೆ ಪಂಜಾಬ್ ಪೊಲೀಸರು ಸೇನೆಯ ಹರಪ್ರೀತ್ ಸಿಂಗ್ (೨೩) ಮತ್ತು ಗುರ್ಭೇಜ್ ಸಿಂಗ್ (೨೩) ಇವರಿಬ್ಬರನ್ನು ಬಂಧಿಸಿದ್ದಾರೆ.

ಉನ್ನಾವ (ಉತ್ತರಪ್ರದೇಶ)ದಲ್ಲಿ ಗೋ ಕಳ್ಳಸಾಗಾಟಗಾರರನ್ನು ಹಿಡಿಯಲು ಹೋಗಿದ್ದ ಪೊಲೀಸರ ಮೇಲೆ ಗುಂಡುಹಾರಾಟ

ಲಕ್ಷ್ಮಣಪುರಿ-ಬಾಂಗರಮವು ಮಾರ್ಗದ ಮುರವ್ವತಪುರದಲ್ಲಿ ಗೋಹತ್ಯೆ ಮಾಡಿ ಗೋ ಮಾಂಸದ ವ್ಯಾಪಾರ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದನಂತರ ರಾತ್ರಿ ೩ ಗಂಟೆ ಸುಮಾರಿಗೆ ಪೊಲೀಸರು ಅಲ್ಲಿಗೆ ತಲುಪಿದಾಗ, ಅವರ ಮೇಲೆ ಗೋ ಕಳ್ಳಸಾಗಾಣಿಕೆದಾರರು ಗುಂಡು ಹಾರಿಸಿದರು.