ಪೊಲೀಸರ ಗುಂಡು ಹಾರಾಟದಲ್ಲಿ ಓರ್ವ ಕಳ್ಳಸಾಗಾಟಗಾರ ಗಾಯಾಳು !
* ಉತ್ತರಪ್ರದೇಶ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಇದ್ದರೂ ಅಲ್ಲಿ ಗೋಹತ್ಯೆ ಆಗುತ್ತದೆ ಮತ್ತು ಗೋಕಳ್ಳಸಾಗಾಣಿಕೆ ಆಗುತ್ತದೆ, ಇದು ಪೊಲೀಸರಿಗೆ ನಾಚಿಕೆಯ ಸಂಗತಿ ! * ಪೊಲೀಸರ ಮೇಲೆ ಗುಂಡು ಹಾರಾಟ ಮಾಡುವ ಕಳ್ಳಸಾಗಾಟಗಾರರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಸರಕಾರವು ಪ್ರಯತ್ನಿಸಬೇಕು ! |
ಉನ್ನಾವ (ಉತ್ತರಪ್ರದೇಶ) – ಇಲ್ಲಿಯ ಲಕ್ಷ್ಮಣಪುರಿ-ಬಾಂಗರಮವು ಮಾರ್ಗದ ಮುರವ್ವತಪುರದಲ್ಲಿ ಗೋಹತ್ಯೆ ಮಾಡಿ ಗೋ ಮಾಂಸದ ವ್ಯಾಪಾರ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದನಂತರ ರಾತ್ರಿ ೩ ಗಂಟೆ ಸುಮಾರಿಗೆ ಪೊಲೀಸರು ಅಲ್ಲಿಗೆ ತಲುಪಿದರು, ಆಗ ಅವರ ಮೇಲೆ ಗೋ ಕಳ್ಳಸಾಗಾಣಿಕೆದಾರರು ಗುಂಡು ಹಾರಿಸಿದರು. ಅದಕ್ಕೆ ಪ್ರತ್ಯುತ್ತರ ನೀಡಿದ ಪೊಲೀಸರು ಮಜಿದ ಹೆಸರಿನ ಗೋವು ಕಳ್ಳನನ್ನು ಗಾಯಗೊಳಿಸಿದರು, ಇತರ ನಾಲ್ಕು ಜನರು ಪರಾರಿಯಾದರು. ಮಜಿದ್‍ನಿಂದ ಒಂದು ದೇಶಿ ಕಟ್ಟೆಯನ್ನು ವಶಪಡಿಸಿಕೊಳ್ಳಲಾಯಿತು. ನಂತರ ಪೊಲೀಸರು ಮಜಿದ್‍ನ ಮನೆಯಿಂದ ದೊಡ್ಡ ಪ್ರಮಾಣದಲ್ಲಿ ಗೋಮಾಂಸವನ್ನು ವಶಪಡಿಸಿಕೊಂಡರು.