ಎಲ್ಲಾ ಟ್ವೀಟ್‍ಗಳನ್ನು ‘ಡಿಲಿಟ್’ ಮಾಡಿದ ಕೇಂದ್ರದ ರಾಜ್ಯಸಚಿವ ಹಾಗೂ ಪ್ರಖರ ಹಿಂದುತ್ವನಿಷ್ಠ ಶೋಭಾ ಕರಂದ್ಲಾಜೆಯವರು !

ಕರಂದ್ಲಾಜೆಯವರು ಈಗ ಕೃತಿಯ ಸ್ತರದಲ್ಲಿ ತಮ್ಮ ಹಿಂದೂಗಳ ಮೇಲಿನ ನಿಷ್ಠೆಯನ್ನು ತೋರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ದೆಹಲಿ – ಕೇಂದ್ರದ ನೂತನ ಮಂತ್ರಿಮಂಡಳಿಯಲ್ಲಿ ಬಿಜೆಪಿಯ ಪ್ರಖರ ಹಿಂದುತ್ವನಿಷ್ಠ ಶಾಸಕಿ ಶೋಭಾ ಕರಂದ್ಲಾಜೆ ಇವರಿಗೆ ಕೃಷಿ ರಾಜ್ಯಮಂತ್ರಿ ಎಂದು ಹುದ್ದೆಯನ್ನು ನೀಡಲಾಗಿದೆ. ಜುಲೈ ೭ ರಂದು ಸಂಜೆ ಪ್ರಮಾಣವಚನ ಸಮಾರಂಭದ ಕೆಲವು ಗಂಟೆಗಳ ಹಿಂದೆ ಕರಂದ್ಲಾಜೆ ತಮ್ಮ ಟ್ವಿಟರ್ ಖಾತೆಯ ಎಲ್ಲಾ ಟ್ವೀಟ್ಸ್‍ಗಳನ್ನು ‘ಡಿಲಿಟ್’ ಮಾಡಿರುವುದು ಬೆಳಕಿಗೆ ಬಂದಿದೆ. ಕರಂದ್ಲಾಜೆ ಇವರು ಗೋಹತ್ಯೆ, ಲವ್ ಜಿಹಾದ್, ಹಿಂದೂಗಳ ಹತ್ಯೆ ಇತ್ಯಾದಿ ಘಟನೆಗಳ ಬಗ್ಗೆ ಟ್ವೀಟ್‍ನ ಮೂಲಕ ತುಂಬಾ ಕ್ರಿಯಾಶೀಲರಾಗಿದ್ದರು. ಅವರ ಟ್ವೀಟ್ ತೀಕ್ಷ್ಣವಾಗಿದ್ದರಿಂದ ಹಾಗೂ ಹಿಂದೂ ವಿರೋಧಿಗಳಿಗೆ ನೇರವಾಗಿ ಚುಚ್ಚುತ್ತಿದ್ದರಿಂದ ಹಿಂದೂಗಳಿಗೆ ಅವರ ಆಧಾರವಾಗಿದ್ದರು. ಆದ್ದರಿಂದ ಟ್ವಿಟರ್ ಮೇಲಿನ ಟ್ವೀಟ್ಸ್ ಅಳಿಸಿರುವುದು ಅವರ ಈ ಕೃತಿಯ ಬಗ್ಗೆ ಎಲ್ಲಾ ಕಡೆಗಳಲ್ಲಿ ಆಶ್ಚರ್ಯವ್ಯಕ್ತಪಡಿಸಲಾಗುತ್ತಿದೆ. ಕರಂದ್ಲಾಜೆ ಇವರು ಉಡುಪಿ-ಚಿಕ್ಕಮಗಳೂರು ಇಲ್ಲಿಂದ ಇಲ್ಲಿಯವರೆಗೆ ೨ ಸಲ ಶಾಸಕಿಯಾಗಿ ಆಯ್ಕೆಯಾಗಿದ್ದರು.