ವಕ್ಫ್ ಕಾಯಿದೆಯಲ್ಲಿ ತಿದ್ದುಪಡಿ ತಂದರೆ ವಕ್ಫ್ ಭೂಮಿ ಸರಕಾರದ ಹಿಡಿತಕ್ಕೆ ಬರುವ ಆತಂಕ
ಉಡುಪಿ: ವಕ್ಫ್ ಗೆ ಭೂಮಿ ದಾನ ಮಾಡುವ ಮುಸಲ್ಮಾನರು ವಕ್ಫ್ ಬಗ್ಗೆ ಆಗುತ್ತಿರುವ ವಿವಾದಗಳ ನಂತರ ಭೂಮಿ ನೀಡುವ ಮುಸ್ಲಿಮರು ಹಿಂದೇಟು ಹಾಕುತ್ತಿದ್ದಾರೆ. ದಾನವಾಗಿ ನೀಡಿದ ಭೂಮಿಯನ್ನು ಸರಕಾರ ಉದ್ದೇಶಿತ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ‘ಮುಸ್ಲಿಂ ಬಾಂಧವ್ಯ ವೇದಿಕೆ’ ಆತಂಕ ವ್ಯಕ್ತಪಡಿಸಿದೆ.
ಮುಸ್ಲಿಂ ಬಾಂಧವ್ಯ ವೇದಿಕೆಯ ಅನಿಸ್ ಪಾಷಾ ಮಾತನಾಡಿ, ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಇದರಿಂದ ಮುಸ್ಲಿಂ ಸಮುದಾಯದಲ್ಲಿ ಅಶಾಂತಿ ಉಂಟಾಗಿದೆ. ಮುಸ್ಲಿಮರು ದಾನವಾಗಿ ನೀಡಿದ ಸಂಪತ್ತು ಅವರ ಹೆಸರಿನಲ್ಲಿ ಇರುವುದಿಲ್ಲ. ದಾನ ಮಾಡಿದ ಭೂಮಿ ವಕ್ಫ್ ಬೋರ್ಡ್ ಹೆಸರಿನಲ್ಲಿರುತ್ತದೆ. ದಾನ ಮಾಡಿದ ನಂತರ, ಈ ಸಂಪತ್ತು ಸರಕಾರದ ವಶಕ್ಕೆ ಹೋಗುತ್ತದೆ ಎಂದು ಜನರು ಭಯಪಡುತ್ತಾರೆ. ದಾನವಾಗಿ ನೀಡಿದ ಭೂಮಿಯನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಲಾಗುತ್ತದೆಯೋ ಅಥವಾ ಇಲ್ಲವೇ ಎಂಬ ಚಿಂತೆ ಮುಸ್ಲಿಮರನ್ನೂ ಕಾಡುತ್ತಿದೆ. ಈ ಮನಃಸ್ಥಿತಿಯನ್ನು ಸರಕಾರವೇ ಸೃಷ್ಟಿಸಿದೆ. ಹಾಗಾಗಿ ಕೇಂದ್ರ ಸರಕಾರ 2024ರಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸುಧಾರಣೆಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಮೂಲದಲ್ಲಿ ವಕ್ಫ್ ಕಾನೂನಿನಲ್ಲಿ ಸುಧಾರಣೆ ಅಲ್ಲ. ಅದನ್ನು ರದ್ದುಗೊಳಿಸುವುದೇ ಆವಶ್ಯಕವಾಗಿದೆ. ವಕ್ಫಗೆ ದಾನವೆಂದು ಸಿಕ್ಕ ಭೂಮಿಗಿಂತ ಅದು ನುಂಗಿದ ಭೂಮಿಯೇ ಅಧಿಕವಾಗಿರುವುದರಿಂದ, ಅದು ಸರಕಾರಕ್ಕೆ ಜಮೆಯಾಗುವುದೇ ಆವಶ್ಯಕವಾಗಿದೆ ! |