‘ಶ್ರೀ ಸತ್ಯನಾರಾಯಣ ಕಥೆ ಮತ್ತು ಭಾಗವತ ಕಥೆಗಳು ಅವೈಜ್ಞಾನಿಕ !'(ವಂತೆ)

ಗುಜರಾತ್ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಗೋಪಾಲ ಇಟಾಲಿಯಾ ಅವರ ಬೌದ್ಧಿಕ ದಿವಾಳಿತನ !

* ಇಟಾಲಿಯಾ ಇತರ ಧರ್ಮಗಳ ಶ್ರದ್ಧೆಯ ಬಗ್ಗೆ ಅಂತಹ ಹೇಳಿಕೆ ನೀಡಿದ್ದರೆ, ಏನಾಗಬಹುದೆಂದು ಇದರ ಕಲ್ಪನೆಯನ್ನು ಮಾಡಬಹುದು !

* ಹಿಂದೂಗಳಲ್ಲಿ ಧರ್ಮಾಭಿಮಾನವು ಶೂನ್ಯವಾಗಿರುವುದರಿಂದ ಹಿಂದೂ ಧರ್ಮದ ಬಗ್ಗೆ ಅವರು ಏನು ಬೇಕಾದರೂ ಹೇಳುತ್ತಾರೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರಕ್ಕೆ ಬೇರೆ ಪರ್ಯಾಯವಿಲ್ಲ !

ಕರ್ಣಾವತಿ (ಗುಜರಾತ) – ಆಮ್ ಆದ್ಮಿ ಪಕ್ಷದ ಗುಜರಾತನ ಅಧ್ಯಕ್ಷ ಗೋಪಾಲ ಇಟಾಲಿಯಾ ಇವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಬಗ್ಗೆ ಅವರ ಮೇಲೆ ದೂರು ದಾಖಲಿಸಲಾಗಿದೆ. ‘ಹಿಂದೂ ಐಟಿ ಸೆಲ್’ನ ಅನುಜ್ ಮಿಶ್ರಾ ಇವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಈ ಸೆಲ್ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಲಾಗಿತ್ತು. ಇಟಾಲಿಯಾ ಇವರು `ಶ್ರೀ ಸತ್ಯನಾರಾಯಣ ಕಥೆ ಮತ್ತು ಭಾಗವತ ಕಥೆಗಳು ಅವೈಜ್ಞಾನಿಕವಾಗಿವೆ’ ಎಂದು ಹೇಳಿದ ವಿಡಿಯೊ ಪ್ರಸಾರವಾಗಿದೆ. ಈ ಮೂಲಕ ಅಪರಾಧವನ್ನು ನೋಂದಾಯಿಸಲಾಗಿದೆ.

. ಈ ದೂರಿನಲ್ಲಿ, ಇಟಾಲಿಯಾ ಇವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಹಿಂದೂ ದೇವತೆ, ಪದ್ಧತಿ ಮತ್ತು ಸಂಪ್ರದಾಯಗಳನ್ನು ಅವಮಾನಿಸಿದ್ದಾರೆ ಈ ವೀಡಿಯೊವನ್ನು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲು ಮಾತ್ರ ಮಾಡಲಾಗಿದೆ. ಈ ಕಾರಣದಿಂದ ಹಿಂದೂಗಳ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

೨. ಇಟಾಲಿಯಾ ಅವರ ಹೇಳಿಕೆಯನ್ನು ಸಹ ವಿರೋಧಿಸಲಾಗುತ್ತಿದೆ. ಇತ್ತೀಚೆಗೆ, ಇಟಾಲಿಯಾ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಜನರು ಅವನನ್ನು ವಿರೋಧಿಸಿದ್ದರಿಂದ ಅವರು ಹಿಂದೆ ಸರಿಯಬೇಕಾಗಿ ಬಂದಿತ್ತು.

ಇಟಾಲಿಯಾ ವಿಡಿಯೋದಲ್ಲಿ ಹೇಳಿದ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹ ಹೇಳಿಕೆಗಳು !

. ಜನರು ಸತ್ಯನಾರಾಯಣ ಕಥೆಗಳು ಮತ್ತು ಭಾಗವತ ಕಥೆಗಳಂತಹ ಅನಗತ್ಯ ವಿಷಯಗಳಿಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಈ ಎಲ್ಲ ವಿಷಯಗಳು ಯಾವುದಕ್ಕೂ ಉಪಯೋಗವಿಲ್ಲ ಮತ್ತು ಅವುಗಳು ಅವೈಜ್ಞಾನಿಕವಾಗಿವೆ.

೨. ಇದೆಲ್ಲವನ್ನೂ ಮಾಡುವುದರಿಂದ ಏನು ಪ್ರಯೋಜನ ಎಂದು ಜನರಿಗೆ ಇನ್ನೂ ತಿಳಿದಿಲ್ಲ. ಇದೆಲ್ಲವನ್ನೂ ಮಾಡುವ ಮೂಲಕ ಅವರು ಇತರರ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಂತಹ ವಿಷಯಗಳಿಗೆ ನಾವು ೫ ಪೈಸೆ ಖರ್ಚು ಮಾಡಿದರೂ, ಮನುಷ್ಯರಂತೆ ಬದುಕುವ ಹಕ್ಕು ನಮಗಿಲ್ಲ.

. ಅಂತಹ ಜನಗಳ ಬಗ್ಗೆ ನನಗೆ ನಾಚಿಕೆ ಆಗುತ್ತದೆ. ನನಗೆ ಅವರ ಮೇಲೆ ಕೋಪವೂ ಬರುತ್ತದೆ. ರೂಢಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಪುಂಸಕರಂತೆ ಚಪ್ಪಾಳೆ ತಟ್ಟುವವರು ನಮಗೆ ಅಗತ್ಯವಿಲ್ಲ.

೪. ಸಾಧು ವೇದಿಕೆಯಿಂದ ಏನನ್ನಾದರೂ ಹೇಳಿದರೆ, ನಾವು ನಪುಂಸಕರಂತೆ ಚಪ್ಪಾಳೆ ತಟ್ಟ ಬೇಕೆ ?

‘ಕಥಾವಾಚಕರು ಮತ್ತು ಅರ್ಚಕರು ಜನರನ್ನು ಮೋಸ ಮಾಡುತ್ತಾರೆ !'(ಅಂತೆ)

ಇಟಾಲಿಯಾ ಇವರು ‘ಆಪ್’ನ ಪ್ರದೇಶಾಧ್ಯಕ್ಷರಾಗುವ ಮೊದಲೇ ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅದರ ವಿಡಿಯೋ ಕೂಡ ಪ್ರಸಾರವಾಗಿತ್ತು. ಅದರಲ್ಲಿ ಅವರು, ಸಾಮಾನ್ಯ ಜನರು ಶ್ರಮದಿಂದ ಬದುಕುತ್ತಾರೆ; ಆದರೆ ಅರ್ಚಕರು, ಕಥಾವಾಚಕರು, ಭವಿಷ್ಯ ಹೇಳುವವರು ಜನರನ್ನು ಮೋಸ ಮಾಡುತ್ತಾರೆ. ಅವರು ಧರ್ಮವನ್ನು ತಮ್ಮ ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾರೆ. ಅವರು ಜನರಿಗೆ ಧರ್ಮದ ಬಗ್ಗೆ ಭಯ ತೋರಿಸಿ ಅವರಿಂದ ಹಣವನ್ನು ಸುಲಿಗೆ ಮಾಡುತ್ತಾರೆ. ಈ ಕಥಾವಾಚಕರು ಸೂರತ್‍ನಲ್ಲಿ ಮಾತ್ರ ಕಥೆಗಳನ್ನು ಏಕೆ ಮಾಡುತ್ತಾರೆ ? ಅವರು ತುಂಬಾ ದೊಡ್ಡವರಾಗಿದ್ದರೆ, ಅವರು ಗಡಿಗೆ ಹೋಗಿ ಕಥೆಗಳನ್ನು ಏಕೆ ಹೇಳುವುದಿಲ್ಲ ? ಅವರು ಪಾಕಿಸ್ತಾನ-ಬಾಂಗ್ಲಾದೇಶ ಗಡಿಗೆ ಹೋಗಿ ಕಥೆಗಳನ್ನು ಹೇಳಬೇಕು.