|
ನವ ದೆಹಲಿ – ಶ್ಯಾಮಪ್ರಸಾದ ಮುಖರ್ಜಿಯವರ ಜಯಂತಿ ನಿಮಿತ್ತ ‘ಸಂವಿಧಾನ್ ಕೆ ರಕ್ಷಕ್’ (ಸಂವಿಧಾನದ ರಕ್ಷಕ) ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮುಖರ್ಜಿಯವರು ‘ಒಂದು ದೇಶ, ಒಂದು ಗುರುತು ಮತ್ತು ಒಂದು ಸಂವಿಧಾನ’ದ ಪರಿಕಲ್ಪನೆಯನ್ನು ಮಂಡಿಸಿದ್ದರು. ಇದಕ್ಕಾಗಿ ಹೋರಾಡುತ್ತಾ ಅವರು ಪ್ರಾಣತ್ಯಾಗವನ್ನು ಮಾಡಿದರು. ಇಂದು ‘ಹಿಂದೂ ಇಕೋಸಿಸ್ಟಂ’ ಸಂಘಟನೆಯು ರಾಷ್ಟ್ರ ಮತ್ತು ಧರ್ಮಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶವನ್ನು ನನಗೆ ಲಭಿಸಿದೆ ಮತ್ತು ಅವರು ಮಾಡಿರುವ ಕಾರ್ಯಗಳನ್ನು ಅರಿಯಲು ನನಗೆ ಸಾಧ್ಯವಾಗಿರುವುದು ನನ್ನ ಭಾಗ್ಯವೆಂದು ತಿಳಿಯುತ್ತೇನೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇವರು ಪ್ರತಿಪಾದಿಸಿದರು. ಅವರು ಗಿರಿರಾಜ್ ಸಿಂಗ್ ಇವರ ನಿವಾಸಸ್ಥಾನದಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ‘ಹಿಂದೂ ಇಕೋಸಿಸ್ಟಂ’ ವತಿಯಿಂದ ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಗಾಗಿ ಗಮನಾರ್ಹ ಕಾರ್ಯವನ್ನು ಮಾಡುವ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಮತ್ತು ನ್ಯಾಯವಾದಿ ಅಶ್ವನಿ ದುಬೆ ಇವರಿಗೆ ‘ಸಂವಿಧಾನ್ ಕೆ ರಕ್ಷಕ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಇವರಿಗೆ ‘ಶ್ಯಾಮಪ್ರಸಾದ ಮುಖರ್ಜಿ’ ಪ್ರಶಸ್ತಿಯಿಂದ ಗೌರವಿಸಲಾಯಿತು. ಪ್ರಶಸ್ತಿಯನ್ನು ನೀಡುವಾಗ ಕೇಂದ್ರ ಸಚಿವ ಸಿಂಗ್ ಇವರು ಮೇಲಿನ ವಿಚಾರಗಳನ್ನು ಮಂಡಿಸಿದರು.
ಈ ಕಾರ್ಯಕ್ರಮಕ್ಕೆ ಭಾಜಪದ ಮುಖಂಡರು ಮತ್ತು `ಹಿಂದೂ ಇಕೋಸಿಸ್ಟಂ’ನ ಅಧ್ಯಕ್ಷರಾದ ಕಪಿಲ ಮಿಶ್ರಾ, ರಾಜೇಶ ಗೋಯಲ; ಮುಂಬಯಿಯ ಧರ್ಮಪ್ರೇಮಿ ಉದ್ಯಮಿ ದಿನೇಶ ಮೆಹತಾ; ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶ್ರೀರಾಮ ಲುಕತುಕೆ ಮತ್ತು ಸನಾತನ ಸಂಸ್ಥೆಯ ದೆಹಲಿಯ ವಕ್ತಾರರಾದ ಕು. ಕೃತಿಕಾ ಖತ್ರಿ ಉಪಸ್ಥಿತರಿದ್ದರು. ನ್ಯಾಯವಾದಿ ಮೋನಿಕಾ ಅರೋಡಾ ಇವರಿಗೂ ‘ಸಂವಿಧಾನ್ ಕೆ ರಕ್ಷಕ್’ ಈ ಪ್ರಶಸ್ತಿವನ್ನು ಘೋಷಿಸಲಾಯಿತು. ಆದರೆ ಅವರು ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಉಪಸ್ಥಿತ ಇರದ ಕಾರಣ ಶ್ರೀ. ಮಿಶ್ರಾ ಇವರು ಅವರ ನಿವಾಸಕ್ಕೆ ಹೋಗಿ ಅವರಿಗೆ ಪ್ರಶಸ್ತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಹಿಂದುತ್ವನಿಷ್ಠ ನ್ಯಾಯವಾದಿಗಳು ಮಂಡಿಸಿದ ವಿಚಾರಗಳು !
‘ಹಿಂದೂ ಇಕೊಸಿಸ್ಟಂ’ ಇದು ವೈಚಾರಿಕ ಭಯೋತ್ಪಾದನೆಯನ್ನು ನಾಶಗೊಳಿಸಬೇಕು!- ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ
ನಗರ ನಕ್ಸಲವಾದಿ ಫಾದರ ಸ್ಟ್ಯಾನ ಸ್ವಾಮಿಯವರ ಪ್ರಕರಣ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಹಿಂದೂಗಳು ಏನನ್ನು ಸಹಿಸುತ್ತಿದ್ದಾರೆಯೋ, ಅದು ವೈಚಾರಿಕ ಭಯೋತ್ಪಾದನೆಯ ಪರಿಣಾಮವಾಗಿದೆ. ಸಾಮ್ಯವಾದಿ ವಿಚಾರಸರಣಿಯ ೮-೧೦ ಜನರು ಪ್ರಶಸ್ತಿವನ್ನು ಮರಳಿಸಿ, ಗಾಂಧಿ ಹತ್ಯೆಯ ಬಳಿಕ ದೇಶದಲ್ಲಿ ಶಾಂತಿಯಿತ್ತು ಮತ್ತು ದಾಭೋಲಕರ-ಪಾನಸರೆಯವರ ಹತ್ಯೆಯ ಬಳಿಕ ವಾತಾವರಣ ಹದಗೆಟ್ಟಿದೆಯೆನ್ನುವಂತಹ ವಾತಾವರಣವನ್ನು ನಿರ್ಮಿಸಿದರು. ಈ ಜನರು ನಕ್ಸಲವಾದಿಗಳು ಮಾಡಿರುವ ೧೪ ಸಾವಿರ ಹತ್ಯೆಗಳ ವಿಷಯದಲ್ಲಿ ಏನೂ ಮಾತನಾಡುವುದಿಲ್ಲ. ನಾವು ನಮ್ಮ ಮನಸ್ಸಿನ ಸಂವೇದನಾಶೀಲತೆಯನ್ನು ಕಳೆದುಕೊಂಡಿರುವುದರಿಂದ ನಕ್ಸಲವಾದಿಗಳು ಮಾಡಿರುವ ಹತ್ಯೆಯ ಸುದ್ದಿಯನ್ನು ಓದಿದರೂ ನಮಗೆ ಏನೂ ಅನಿಸುವುದಿಲ್ಲ. ನಾವು ಈಗ ವೈಚಾರಿಕವಾಗಿ ಹೋರಾಡಿ ಇದನ್ನು ನಿಲ್ಲಿಸಬೇಕಾಗಿದೆ ಎಂದು ಹಿಂದೂ ವಿಧಿಜ್ಞ ಪರಿಷದ್‍ನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು ಕರೆ ನೀಡಿದರು.
माननीय केंद्रीय मंत्री श्री. गिरिराज सिंह जी @girirajsinghbjp द्वारा
“संविधान के रक्षक” सम्मान –
श्री वीरेंद्र इचलकरंजीकर जी @ssvirendra को प्रदान किया गया#HinduEcosystem @KapilMishra_IND pic.twitter.com/v2Nb3bHh49
— HJS_Delhi-NCR (@HJS_Delhi) July 6, 2021
‘ಹಿಂದೂ ಇಕೊಸಿಸ್ಟಂ’ ಸಾರ್ವಜನಿಕ ಹಿತಾಸಕ್ತಿ ದಾಖಲಿಸುವ ಕಾರ್ಯವನ್ನು ಮಾಡಬೇಕು- ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ
ಸರ್ವೋಚ್ಚ ನ್ಯಾಯಾಲಯದಲ್ಲಿ ೧೦೦ ಕ್ಕಿಂತ ಅಧಿಕ ಸಾರ್ವಜನಿಕ ಹಿತಾಸಕ್ತಿ ದೂರನ್ನು ದಾಖಲಿಸುವ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಇವರು ಮಾತನಾಡುತ್ತಾ, ಸಾರ್ವಜನಿಕ ಹಿತಾಸಕ್ತಿ ದೂರನ್ನು ದಾಖಲಿಸುವಲ್ಲಿ ಅಧಿಕ ಜನರು ಮುಂದಾಗಬೇಕು. ಯಾವುದೇ ದೂರು ದಾಖಲಾದಾಗ ನನ್ನೊಂದಿಗೆ ಇತರ ನ್ಯಾಯವಾದಿಗಳು ಕೈಜೋಡಿಸಿದಾಗ ಅದರಿಂದ ಖಂಡಿತವಾಗಿಯೂ ಪ್ರಯೋಜನವಾಗುವುದು ಎಂದು ಹೇಳಿದರು. `ಹಿಂದೂ ಇಕೊಸಿಸ್ಟಂ’ ಇಂತಹ ಕಾರ್ಯವನ್ನು ಮಾಡಬೇಕು. ಸದ್ಯ ನಾನು ಖಾಸಗಿ ಉದ್ಯೋಗವನ್ನು ಮಾಡುತ್ತಿಲ್ಲ. ಇದರಿಂದ ಪ್ರಶಸ್ತಿ ಮತ್ತು ಅದರೊಂದಿಗೆ ದೊರಕಿರುವ ಮೊತ್ತ ಇವೆರಡೂ ವಿಷಯಗಳು ನನ್ನ ಮನೋಬಲವನ್ನು ಮತ್ತಷ್ಟು ಹೆಚ್ಚಿಸುವಂತಹದ್ದಾಗಿದೆ.
ಫಾದರ ಸ್ಟ್ಯಾನ ಸ್ವಾಮಿಯವರು ಪ್ರಧಾನಿ ಮೋದಿಯವರ ಹತ್ಯೆಯ ಸಂಚು ರಚಿಸಿದ ಆರೋಪಿಯಾಗಿದ್ದರು ಎನ್ನುವುದನ್ನು ಮರೆಯದಿರಿ !- ನ್ಯಾಯವಾದಿ ಅಶ್ವನಿ ದುಬೆ
ಸರ್ವೋಚ್ಚ ನ್ಯಾಯಾಲಯದಲ್ಲಿ ವಕಾಲತ್ತು ಮಾಡುವ ನ್ಯಾಯವಾದಿ ಅಶ್ವನಿ ದುಬೆಯವರು ಮಾತನಾಡುತ್ತಾ ‘ಹಿಂದೂ ಇಕೊಸಿಸ್ಟಂ’ ಮಾಧ್ಯಮದಿಂದ ಭಾಜಪದ ಮುಖಂಡರಾದ ಕಪಿಲ ಮಿಶ್ರಾ ಮಾಡುತ್ತಿರುವ ಕಾರ್ಯವು ಅತ್ಯಂತ ಮಹತ್ವದ್ದಾಗಿದೆ ಮತ್ತು ನಾನು ಅವರೊಂದಿಗೆ ಈ ಕಾರ್ಯದಲ್ಲಿ ಪ್ರಾರಂಭದಿಂದಲೂ ಇದ್ದೇನೆ. ಫಾದರ ಸ್ಟ್ಯಾನ ಸ್ವಾಮಿಯವರ ನಿಧನವೆಂದರೆ ‘ನ್ಯಾಯಾಲಯ ಮಾಡಿದ ಹತ್ಯೆಯಾಗಿದೆ’, ಎಂದು ಆರೋಪಿಸಲಾಗುತ್ತಿದೆ. ಇದು ಸರಿಯಲ್ಲ. ಮೂಲದಲ್ಲಿ ಫಾದರ ಸ್ಟ್ಯಾನ ಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚು ರಚಿಸಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಇದರ ಗಂಭೀರತೆಯನ್ನು ತಾವು ಗಮನಿಸಬೇಕಾಗಿದೆ.
‘ಹಿಂದೂ ಇಕೊಸಿಸ್ಟಂ’ ಸಂಸ್ಥೆಯ ಉದ್ದೇಶ !
‘ಧರ್ಮನಿಷ್ಠ ಮತ್ತು ರಾಷ್ಟ್ರವಾದಿ ವಿಚಾರಗಳ ಲೇಖಕ, ಬ್ಲಾಗರ, ನ್ಯಾಯವಾದಿ, ಉದ್ಯಮಿ ಮುಂತಾದವರ ದೇಶವ್ಯಾಪಿ ಸಂಘಟನೆಗಳಾಗಬೇಕು ಮತ್ತು ಇದರಿಂದ ಸನಾತನ ಧರ್ಮದ ರಕ್ಷಣೆಯಾಗಬೇಕು, ಎನ್ನುವುದೇ ‘ಹಿಂದೂ ಇಕೋಸಿಸ್ಟಂ’ ನ ಉದ್ದೇಶವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿಯೇ `ಹಿಂದೂ ಇಕೋಸಿಸ್ಟಂ’ನ ೧೦ ಲಕ್ಷಕ್ಕಿಂತ ಅಧಿಕ ಜನರು ಸದಸ್ಯರಾಗಿದ್ದಾರೆ.