ಜೈಪುರದಲ್ಲಿ ಹಸುವಿನ ಸೆಗಣಿಯಿಂದ ಬಣ್ಣ ನಿರ್ಮಿಸುವ ಪ್ರಕಲ್ಪದ ಉದ್ಘಾಟನೆ

ಇದು ಒಂದು ಒಳ್ಳೆಯ ಪ್ರಕಲ್ಪವಾಗಿದ್ದು ಇದರಿಂದ ಹಸುವಿನ ಮಹತ್ವವು ಸಮಾಜಕ್ಕೆ ತಿಳಿಯಲಿದೆ; ಆದರೆ ಇದರ ಜೊತೆಗೆ ಗೋಹತ್ಯಾ ನಿಷೇಧ ಕಾನೂನನ್ನು ಎಲ್ಲಾ ಕಡೆಗಳಲ್ಲಿ ಹಮ್ಮಿಕೊಂಡು ಗೋಹತ್ಯೆಯನ್ನು ತಡೆಯುವುದು ಅಗತ್ಯವಿದೆ !

ಜೈಪುರ (ರಾಜಸ್ಥಾನ) – ಇಲ್ಲಿ ಹಸುವಿನ ಸಗಣಿಯಿಂದ ಬಣ್ಣಗಳನ್ನು ನಿರ್ಮಿಸುವ ಪ್ರಕಲ್ಪವನ್ನು ಆರಂಭಿಸಲಾಗಿದೆ. ಇಲ್ಲಿ ಸಗಣಿಯಿಂದ ಬಣ್ಣ ನಿರ್ಮಿಸುವ ಸ್ವಯಂಚಾಲಿತ ಯಂತ್ರವನ್ನು ಉದ್ಘಾಟಿಸಲಾಯಿತು. ಈ ಸಮಯದಲ್ಲಿ ಕೇಂದ್ರ ಸಚಿವ ನಿತಿನ ಗಡಕರಿ ಇವರು ಆನ್‍ಲೈನ್‍ನಿಂದ ಹಾಜರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ಸಂಪೂರ್ಣ ಭಾರತದಲ್ಲಿ ಹಸುವಿನ ಸಗಣಿಯಿಂದ ನಿರ್ಮಿಸಿರುವ ‘ವೆದಿಕ್’ ಬಣ್ಣಗಳನ್ನು ಉಪಯೋಗಿಸುವಂತೆ ಪ್ರೋತ್ಸಾಹಿಸಲು ಹಾಗೂ ಯುವ ಉದ್ಯಮಿಗಳನ್ನು ಈ ಕ್ಷೇತ್ರದಲ್ಲಿ ಕರೆ ತರಲು ನಾನು ಪ್ರಯತ್ನಿಸುವೆ’, ಎಂದು ನಿತಿನ್ ಗಡಕರಿ ಇವರು ಹೇಳಿದರು. ಸಗಣಿಯಿಂದ ನಿರ್ಮಿಸಿದ ಬಣ್ಣವು ವಿಷರಹಿತವಾಗಿದ್ದು ಹಾಗೂ ಇಕೋ ಫ್ರೆಂಡ್ಲಿ(ಪರಿಸರಕ್ಕೆ ಪೂರಕ)ವಾಗಿದೆ. ಈ ಬಣ್ಣದಲ್ಲಿ ಗಾಜು, ಪಾದರಸ, ಕ್ರೊಮೊಯಮ್, ಆರ್ಸೆನಿಕ್ ಮತ್ತು ಕಾಡಮಿಯಮ್‍ಅನ್ನು ಉಪಯೋಗಿಸಲಾಗಿದೆ. ಈ ಸಗಣಿಯಿಂದ ನಿರ್ಮಿಸಿದ ಬಣ್ಣಗಳ ಮಾರಾಟ ಹೆಚ್ಚಾದರೆ ರೈತರಲ್ಲಿನ ಸಗಣಿಯ ಖರೀದಿಯು ಹೆಚ್ಚಾಗುವುದು. ಇದರಿಂದ ರೈತರ ಉತ್ಪನ್ನದ ಮೇಲೆ ಏರಿಕೆಯಾಗಿ ವರ್ಷಕ್ಕೆ ಕಡಿಮೆ ಪಕ್ಷ ೩೦ ಸಾವಿರ ರೂಪಾಯಿಯು ಈ ಸಗಣಿಯ ಮಾರಾಟದಿಂದ ಸಿಗಬಹುದು.