ದರೋಡೆಯ ಉದ್ದೇಶದಿಂದ ಕೇಂದ್ರದ ಮಾಜಿ ಸಚಿವ ದಿವಂಗತ ಪಿ. ರಂಗರಾಜನ್ ಕುಮಾರಮಂಗಲಮ್ ಅವರ ಪತ್ನಿಯ ಕೊಲೆ

ದೇಶದ ರಾಜಧಾನಿಯಲ್ಲಿ ಇಂತಹ ಹತ್ಯೆಗಳಾಗುವುದು ಪೊಲೀಸರಿಗೆ ಲಜ್ಜಾಸ್ಪದ !

ಕಿಟ್ಟಿ ಕುಮಾರಮಂಗಲಮ್

ನವ ದೆಹಲಿ : ಮಾಜಿ ಕೇಂದ್ರ ಸಚಿವ ದಿವಂಗತ ಪಿ. ರಂಗರಾಜನ್ ಕುಮಾರಮಂಗಲಮ್ ಅವರ ಪತ್ನಿ ಕಿಟ್ಟಿ ಕುಮಾರಮಂಗಲಮ್ (೬೭) ಅವರನ್ನು ಜುಲೈ ೬ ರ ರಾತ್ರಿ ವಸಂತ್ ವಿಹಾರದ ಮನೆಯೊಳಗೆ ನುಗ್ಗಿದ ದರೋಡೆಕೋರರು ಹತ್ಯೆ ಮಾಡಿದ್ದಾರೆ. ರಾತ್ರಿ ೯ ಗಂಟೆಗೆ ಕಿಟ್ಟಿ ಕುಮಾರಮಂಗಲಮ್ ಅವರೊಂದಿಗೆ ಮನೆಗೆಲಸದವರು ಇದ್ದರು. ಮನೆಗೆಲಸದವಳು ಈ ಬಗ್ಗೆ ಹೇಳುತ್ತಾ ‘ರಾತ್ರಿಯಲ್ಲಿ ದೋಭಿಯು ಬಂದಿದ್ದನು. ಆಗ ಕುಮಾರಮಂಗಲಮ್ ಬಾಗಿಲು ತೆರೆದರು. ನಂತರ ದೋಭಿಯು ಕುಮಾರಮಂಗಲಮ್‌ರನ್ನು ಮುಂದಿನ ಕೋಣೆಗೆ ಎಳೆದುಕೊಂಡು ಹೋಗಿ ಕಟ್ಟಿಹಾಕಿದ. ಅನಂತರ ಇಬ್ಬರು ಯುವಕರು ಮನೆಯೊಳಗೆ ನುಗ್ಗಿ ದಿಂಬಿನಿಂದ ಕುಮಾರಮಂಗಲಮ್ ಇವರ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ. ಪೊಲೀಸರು ದೋಭಿ ರಾಜುನನ್ನು ಬಂಧಿಸಿದ್ದಾರೆ. ರಂಗರಾಜನ್ ಕುಮಾರಮಂಗಲಮ್ ಅವರು ಅಟಲ್‌ಬಿಹಾರಿ ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದರು.