Bangladesh Complaint In ICC : ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲು

ಅನ್ವರುಜ್ಜಮಾನ್ ಚೌದರಿ (ಎಡಬದಿ), ಮೊಹಮ್ಮದ್ ಯುನೂಸ್ (ಬಲಬದಿ)

ನವ ದೆಹಲಿ – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ ಯೂನಸ್ ಸೇರಿದಂತೆ 62 ಜನರ ವಿರುದ್ಧ ನವೆಂಬರ್ 8 ರಂದು ನೆದರ್ ಲ್ಯಾಂಡ್ ನ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಸಧ್ಯಕ್ಕೆ ಲಂಡನ್‌ನಲ್ಲಿ ನೆಲೆಸಿರುವ ಸಿಲ್ಹೆಟ್ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅನ್ವರುಜ್ಜಮಾನ್ ಚೌಧರಿ ಅವರು ಈ ದೂರು ದಾಖಲಿಸಿದ್ದಾರೆ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

ತಸ್ಲೀಮಾ ನಸ್ರೀನ್ ಮಾತು ಮುಂದುವರಿಸುತ್ತಾ, ಈ ದೂರಿನಲ್ಲಿ ಆಗಸ್ಟ್ 5 ರಿಂದ 8, 2024 ರ ಅವಧಿಯಲ್ಲಿ ಬಾಂಗ್ಲಾದೇಶದ ವಿದ್ಯಾರ್ಥಿ ಆಂದೋಲನದ ಹೆಸರಿನಲ್ಲಿ ಅವಾಮಿ ಲೀಗ್ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರ ವಿರುದ್ಧ ಹಿಂಸಾಚಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ, ಎಂದು ಹೇಳಿದ್ದಾರೆ.