ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುವಿನ ಸಹಚರ
ಬ್ರಾಂಪ್ಟನ್ (ಕೆನಡಾ) – ಹಿಂದೂ ಸಭಾ ಮಂದಿರದ ಮೇಲಿನ ದಾಳಿಯ ಮುಖ್ಯ ಸೂತ್ರಧಾರ ಇಂದ್ರಜಿತ್ ಗೋಸಲ್ (ವಯಸ್ಸು 35) ನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಿತು. ಅವನ ವಿರುದ್ಧ ಮಾರಕಾಸ್ತ್ರಗಳಿಂದ ಹಿಂದೂಗಳ ಮೇಲೆ ಹಲ್ಲೆ ನಡೆಸಿದ ಆರೋಪವಿದೆ. ಈ ಹಿಂದೆ ಪೊಲೀಸರು ದೇವಸ್ಥಾನದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದರು.
ಇಂದ್ರಜಿತ್ ಗೊಸಲ್ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟೀಸ್’ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ ನಿಕಟವರ್ತಿಯಾಗಿದ್ದಾನೆ. ಗ್ರೇಟರ್ ಟೊರೊಂಟೊದಲ್ಲಿರುವ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸುವ ಷಡ್ಯಂತ್ರವನ್ನು ಇಂದ್ರಜಿತ್ ಗೋಸಲ್ ಇವನೇ ರೂಪಿಸಿದ್ದನು.
ಸಂಪಾದಕೀಯ ನಿಲುವುಇಂತಹವರನ್ನು ಶಿಕ್ಷಿಸಲು ಕೆನಡಾದ ಟ್ರುಡೊ ಸರಕಾರ ಪ್ರಯತ್ನಿಸುವುದೇ ? |