ಮತಾಂತರಕ್ಕಾಗಿ ನ್ಯಾಯಾಲಯದ ಚೇಂಬರ್ ಬಳಸುತ್ತಿದ್ದ ಮತಾಂಧ ನ್ಯಾಯವಾದಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ ದೆಹಲಿ ಬಾರ್ ಕೌನ್ಸಿಲ್ !

ದೆಹಲಿಯ ಕಡಕಡುಮಾ ನ್ಯಾಯಾಲಯದಲ್ಲಾದ ಘಟನೆ

* ಬಾರ್ ಕೌನ್ಸಿಲ್ ಇದು ತಾತ್ಕಾಲಿಕ ಪರವಾನಗಿ ರದ್ದು ಪಡಿಸಿ ಸುಮ್ಮನಾಗದೇ ಇಂತಹವರನ್ನು ಜೈಲಿಗೆ ಅಟ್ಟಲು ಪ್ರಯತ್ನಿಸಬೇಕು!

* ಇಂತಹ ಘಟನೆಗಳು ಇತರ ನ್ಯಾಯಾಲಯಗಳಲ್ಲಿ ನಡೆಯುತ್ತಿದೆಯೇ? ಇದನ್ನು ಈಗ ಸ್ಥಳೀಯ ಬಾರ್ ಕೌನ್ಸಿಲ್ ಕೂಡ ಪರಿಶೀಲಿಸಬೇಕು!

* ನ್ಯಾಯಾಲಯದ ಅಂಗಳದಲ್ಲಿರುವ ಚೇಂಬರ್‌ಅನ್ನು ಅಯೋಗ್ಯ ಕೆಲಸಗಳಿಗೆ ಬಳಸಲಾಗುತ್ತಿರುವ ಅನೇಕ ಉದಾಹರಣೆಗಳಿವೆ. ಈ ಹಿಂದೆ ಕಾಂಗ್ರೆಸ್ ಮುಖಂಡರೊಬ್ಬರು ಮಹಿಳಾ ನ್ಯಾಯವಾದಿಗೆ ತಮ್ಮ ಚೇಂಬರ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು, ಬಾರ್ ಕೌನ್ಸಿಲ್ ದೇಶದ ಎಲ್ಲ ನ್ಯಾಯಾಲಯಗಳ ಚೇಂಬರ್‌ಗಳನ್ನು ಸಮಾಜವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿಲ್ಲ ಎಂಬ ಅಂಶದ ಬಗ್ಗೆ ಗಮನ ಹರಿಸಬೇಕು.

ನವ ದೆಹಲಿ : ಕಡಕಡುಮಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿ ಇಕ್ಬಾಲ್ ಮಲಿಕ್ ಅವರ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಪರಿಣಾಮವಾಗಿ, ಅವನ ಪರವಾನಗಿ ರದ್ದಾಗಿರುವ ತನಕ ಅವನಿಗೆ ಕಾನೂನು ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ. ಇಕ್ಬಾಲ್ ತನ್ನ ಚೇಂಬರ್ ಅನ್ನು (ನ್ಯಾಯಾಲಯದ ಆವರಣದಲ್ಲಿ ಕಚೇರಿ ಕೆಲಸಕ್ಕಾಗಿ ವಕೀಲರಿಗೆ ನೀಡಲಾದ ಸಣ್ಣ ಕೋಣೆ) ಮತಾಂತರಿಸಲು ಮತ್ತು ಮದುವೆಗಾಗಿ ಬಳಸಿದ ಆರೋಪವಿದೆ. (ಲವ್ ಜಿಹಾದ್‌ಅನ್ನು ಪ್ರೊತ್ಸಾಹಿಸುವ ಮತಾಂಧ ನ್ಯಾಯವಾದಿ ! ದೇಶಾದ್ಯಂತ ಲವ್ ಜಿಹಾದ್‌ವಿರೋಧಿ ಕಾನೂನುಗಳನ್ನು ಏಕೆ ಜಾರಿಗೊಳಿಸಬೇಕಾಗಿದೆ ಎಂಬುದನ್ನು ಇದರಿಂದ ಕಂಡು ಬರುತ್ತದೆ! – ಸಂಪಾದಕರು) ‘ಆತ ತನ್ನ ಚೇಂಬರ್‌ಅನ್ನು ಮಸೀದಿಯನ್ನಾಗಿಸಿದ್ದನು’, ಎಂದು ಹೇಳಲಾಗುತ್ತದೆ. ವಿವಿಧ ಕಾರ್ಯಕ್ರಮಗಳನ್ನು ಸಹ ಇಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಗ್ಗೆ ತನಿಖೆ ನಡೆಸಲು ಇಕ್ಬಾಲ್ ಅವರ ಚೇಂಬರ್‌ಗಳನ್ನು ಸೀಲ್ ಮಾಡುವಂತೆಯೂ ಕೌನ್ಸಿಲ್ ಪೊಲೀಸರಿಗೆ ಆದೇಶಿಸಿದೆ. ಪರಿಷತ್ತಿನ ಶಿಸ್ತು ಸಮಿತಿಗೆ ಏಳು ದಿನಗಳಲ್ಲಿ ಉತ್ತರಿಸುವಂತೆ ಕೌನ್ಸಿಲ್ ಇಕ್ಬಾಲ್ ಅವರಿಗೆ ತಿಳಿಸಿದೆ. ಈ ಸಮಯದಲ್ಲಿ ಅವರು ಪ್ರತಿಕ್ರಿಯಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗುತ್ತಿದೆ.