ಧಾರವಾಡದಲ್ಲಿ ಮುಸಲ್ಮಾನರ ಧಾರ್ಮಿಕ ಮುಖಂಡರ ಜಮೀನು ಈಗ ‘ವಕ್ಫ್ ಭೂಮಿ’ ಎಂದು ನೊಂದಣಿ !

ಧಾರವಾಡ – ವಿಜಯಪುರ ನಂತರ ಧಾರವಾಡ ಜಿಲ್ಲೆಯಲ್ಲೂ ಹಿಂದೂ ರೈತರ ಜಮೀನಿನ ದಾಖಲೆಗಳಲ್ಲಿ ವಕ್ಫ್ ಬೋರ್ಡ್ ಹೆಸರಿರುವ ವಿಚಾರ ಚರ್ಚೆಗೆ ಬಂದಿದೆ. ಆರಂಭದಲ್ಲಿ ಈ ಅಂಶವು ಹಿಂದೂ ರೈತರಿಗಷ್ಟೇ ಇತ್ತು. ಈಗ ಮುಸಲ್ಮಾನ ರೈತರ ಜಮೀನುಗಳಿಗೂ ವಿಸ್ತರಿಸಿದೆ. ಈಗ ಮುಸಲ್ಮಾನ ಸಮುದಾಯದ ಮಾರ್ಗದರ್ಶಕರಾಗಿರುವ ಧಾರ್ಮಿಕ ಮುಖಂಡರ ಭೂಮಿಯ ದಾಖಲೆಗಳಲ್ಲಿಯೂ ವಕ್ಫ್ ಬೋರ್ಡ ನ ಹೆಸರು ನಮೂದಿಸಲಾಗಿದೆ. ಅವರಿಗೆ ಸಿಕ್ಕಿರುವುದು ಇನಾಂ ಭೂಮಿ ಇದ್ದರೂ, ಇನಾಂ ಕಾಯಿದೆಯಲ್ಲಿ ತಿದ್ದುಪಡಿಯ ನಂತರ ಅವರಿಗೆ ಮಾಲೀಕತ್ವದ ಹಕ್ಕು ಸಿಗುತ್ತಿತ್ತು; ಆದರೆ ಈಗ ನೂರಾರು ಧಾರ್ಮಿಕ ಮುಸಲ್ಮಾನ ಮುಖಂಡರ ಸಾವಿರಾರು ಎಕರೆ ಜಮೀನಿನ ದಾಖಲೆಗಳಲ್ಲಿ ವಕ್ಫ್ ಹೆಸರು ದಾಖಲಾಗಿದೆ. ಇವರೆಲ್ಲರ ಭೂಮಿಯನ್ನು ವಕ್ಫ್ ಬೋರ್ಡ್ ಸ್ವಾಧೀನಪಡಿಸಿಕೊಳ್ಳಲು ಮುಂದೆ ಬರುತ್ತಿರುವುದರಿಂದ ಈ ಮುಖಂಡರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಈಗ ಈ ಮುಸಲ್ಮಾನರು ವಕ್ಫ್ ಕಾಯ್ದೆಯನ್ನು ವಿರೋಧಿಸುವರೇ ? ಅಥವಾ ಅವರು ಈ ಕಾನೂನನ್ನು ರದ್ದು ಮಾಡುವಂತೆ ಬೇಡಿಕೆ ಮಾಡುವರೇ ?