ರಾಜ್ಯದಲ್ಲಿ ಮಹಾಂತೇಶ್ವರ ಮಠದ ಜಮೀನನ್ನು ‘ವಕ್ಫ್ ಭೂಮಿ’ ಎಂದು ನೋಂದಣಿ ಮಾಡಿರುವುದರ ವಿರುದ್ಧ ಪ್ರತಿಭಟನೆ !

ಬೆಂಗಳೂರು – ಸೇಡಂ ತಾಲೂಕಿನ ತೋಟನಳ್ಳಿ ಗ್ರಾಮದಲ್ಲಿ ಮಹಾಂತೇಶ್ವರ ಮಠದ ಶ್ರೀ (ಡಾ.) ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಅವರ 5.24 ಎಕರೆ ಜಮೀನಿನ ನೋಂದಣಿಯಲ್ಲಿ ವಕ್ಫ್ ಹೆಸರು ಕಂಡುಬಂದಿದೆ. ಇದರಿಂದ ಆಕ್ರೋಶಗೊಂಡ ಭಕ್ತರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಆನಂತರ ಈ ಭೂಮಿಯನ್ನು ವಕ್ಫ್ ನ ದಾಖಲೆಗಳಿಂದ ತೆಗೆಯಲಾಯಿತು.

1. ಶ್ರೀ (ಡಾ.) ಶಿವಮೂರ್ತಿ ಸ್ವಾಮಿಗಳು ತೋಟನಳ್ಳಿ ಗ್ರಾಮದಿಂದ ಸೇಡಂನ ಸಹಾಯಕ ಆಯುಕ್ತರ ಕಚೇರಿಯ ತನಕ, ಪಾದಯಾತ್ರೆ ಮೂಲಕ ಅಂದರೆ ಅಂದಾಜು 20 ಕಿ.ಮೀ.ನಷ್ಟು ಪಾದಯಾತ್ರೆ ಮಾಡಿದರು. ಕಛೇರಿಯ ಬಳಿ ಪಾದಯಾತ್ರೆ ತಲುಪಿದ ನಂತರ ಆಡಳಿತ ಮಂಡಳಿಯಿಂದ ವಕ್ಫ್ ಹೆಸರನ್ನು ದಾಖಲೆಯಿಂದ (ರಿಜಿಸ್ಟರ್‌ನಿಂದ) ತೆಗೆಯಲಾಗಿದೆ ಎಂಬ ಮಾಹಿತಿಯನ್ನು ಸ್ವಾಮೀಜಿಯವರಿಗೆ ತಿಳಿಸಲಾಯಿತು. ಆದ್ದರಿಂದ ಎಲ್ಲರಿಗೂ ಆಶ್ಚರ್ಯವಾಯಿತು.

2. ಈ ಬಗ್ಗೆ ಸ್ವಾಮೀಜಿ ಮಾತನಾಡಿ, ತಮ್ಮ ಮಠದ ಜಮೀನಿನ ದಾಖಲಾತಿಯಿಂದ ವಕ್ಫ್ ನ ಹೆಸರು ತೆಗೆದರೆ ಸಾಲದು. ತಾಲೂಕಿನಲ್ಲಿ ಯಾವ ರೈತರುಗಳ ಜಮೀನಿನಲ್ಲಿ ವಕ್ಫ ಹೆಸರನ್ನು ದಾಖಲಾಗಿಸಿದೆಯೋ, ಆ ರೈತರುಗಳ ಹೆಸರನ್ನೂ ವಕ್ಫ್ ನಿಂದ ಅಳಿಸಬೇಕು ಎಂದು ಹೇಳಿದರು.

3. ಈ ಬಗ್ಗೆ ಅಧಿಕಾರಿಗಳು ಮಾತನಾಡಿ, ನಿಯಮಾನುಸಾರ ಅವರಿಗೆ ಶಾಶ್ವತವಾಗಿ ತೆಗೆಯಬೇಕಿದ್ದರೆ, ನಾವು ವಕ್ಫ್ ಅದಾಲತ್ ಆಯೋಜಿಸುವೆವು ಮತ್ತು ವಕ್ಫ್ ನ ಹೆಸರು ತೆಗೆದು ಹಾಕುತ್ತೇವೆ ಎಂದರು. ಈ ಪ್ರಕ್ರಿಯೆಯು 20 ದಿನಗಳು ಅಥವಾ ಒಂದು ತಿಂಗಳೊಳಗೆ ಪೂರ್ಣಗೊಳ್ಳುತ್ತದೆ. ಈ ಭರವಸೆ ನೀಡಿದ ನಂತರ ಪ್ರತಿಭಟನೆ ನಿ್ಲಿಸುವುದಾಗಿ ಸ್ವಾಮೀಜಿ ಘೋಷಿಸಿದರು.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಇರುವುದರಿಂದ ಹಿಂದೂಗಳ ಮಠ-ಮಂದಿರಗಳ ಜಮೀನುಗಳನ್ನು ‘ವಕ್ಫ್ ಭೂಮಿ’ ಎಂದು ಮಾಡಲಾಗುತ್ತಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸುವುದು ಅವಶ್ಯಕವಾಗಿದೆ !