ತಮಿಳುನಾಡು ಸರಕಾರವು ಅನಧಿಕೃತ ಮಸೀದಿಯ ಮೇಲೆ ಕ್ರಮ ಜರುಗಿಸದೇ ಇದ್ದರೆ ಆಂದೋಲನ ಮಾಡಲಾಗುವುದು ! – ಭಾರತ ಹಿಂದೂ ಮುನ್ನಾನಿ

ಯಾವುದೇ ಅನುಮತಿಯನ್ನು ಪಡೆಯದೇ ಚೆನ್ನೈನ ಪೆರಂಬೂರ ಬ್ರೆಕ್ಸ್ ರಸ್ತೆಗೆ ತಗುಲಿದಂತಿರುವ ಅರಬಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ಒಂದು ಕಟ್ಟಡವನ್ನು ಕಟ್ಟಲಾಗಿದ್ದು, ಅದು ನಿಧಾನವಾಗಿ ಮಸೀದಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ.

ಸೂರತ (ಗುಜರಾತ) ಇಲ್ಲಿಯ ಮಹಾನಗರಪಾಲಿಕೆಯ ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಿರುವುದನ್ನು ಹಿಂದೂ ಸಂಘಟನೆಯು ಅಳಿಸಿತು !

‘ಕಪೋದರಾ ಕ್ರಾಸಿಂಗ್’ ಹತ್ತಿರ ಇರುವ ಒಂದು ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಲಾಗಿತ್ತು. ಅದಕ್ಕೆ ಹಿಂದುತ್ವನಿಷ್ಠ ಸಂಘಟನೆಯು ವಿರೋಧ ವ್ಯಕ್ತಪಡಿಸಿದನಂತರ ಅದರ ಮೇಲೆ ಬಿಳಿಯ ಬಣ್ಣ ಹಚ್ಚಿ ಅದನ್ನು ಅಳಿಸಲಾಯಿತು.

ಮಥುರಾ(ಉತ್ತರಪ್ರದೇಶ)ದಲ್ಲಿ ಗೋಹತ್ಯೆಯನ್ನು ತಡೆಯಲು ಹೋದಂತಹ ಗೋರಕ್ಷಕರ ಮೇಲೆ ಮತಾಂಧರಿಂದ ಆಕ್ರಮಣ

ಗೋರಕ್ಷಕರು ಇಲ್ಲಿನ ಗೋವಿಂದನಗರದಲ್ಲಿನ ಕಸಾಯಿಪಾಡಾದ ಒಂದು ಮನೆಯಲ್ಲಿ ಗೋವಂಶದ ಹತ್ಯೆ ನಡೆಸಲಾಗುತ್ತಿರುವ ಮಾಹಿತಿ ದೊರೆತಾಗ ಅಲ್ಲಿ ತಲುಪಿದರು. ಆಗ ಮತಾಂಧ ಕಟುಕ ಮತ್ತು ಗೋರಕ್ಷಕರ ನಡುವೆ ವಾದ ನಿರ್ಮಾಣವಾಗಿ ಕಟುಕ ಹಾಗೂ ಅಲ್ಲಿನ ಇತರ ಮತಾಂಧರು ಗೋರಕ್ಷಕರ ಮೇಲೆ ಕಲ್ಲುತೂರಾಟ ನಡೆಸಿದರು.

‘ದ ಕಾಶ್ಮೀರ ಫೈಲ್ಸ್’ ಈ ಚಲನಚಿತ್ರದ ಪ್ರಸಿದ್ಧಿಗಾಗಿ ‘ದ ಕಪಿಲ್ ಶರ್ಮಾ ಶೋ’ ಈ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮ ಇವರ ನಿರಾಕರಣೆ

ವಿವೇಕ್ ಅಗ್ನಿಹೋತ್ರಿ ಇವರು ನಿರ್ದೇಶಿಸಿರುವ ‘ದ ಕಾಶ್ಮೀರ ಫೈಲ್’ ಚಲನಚಿತ್ರದ ಪ್ರಸಿದ್ಧಿಗಾಗಿ ‘ದ ಕಪಿಲ್ ಶರ್ಮಾ ಶೋ’ ಈ ‘ರಿಯಾಲಿಟಿ ಶೋ’ನಲ್ಲಿ (ಪ್ರತ್ಯಕ್ಷ ಭೇಟಿ ಮಾಡುವ ಕಾರ್ಯಕ್ರಮ) ಕಪಿಲ್ ಶರ್ಮ ಇವರು ನಿರಾಕರಿಸಿದ್ದಾರೆ, ಎಂದು ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮಾರ್ಚ್ ೨೦೨೨ ರಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆ !

ಗ್ರಹ ಮತ್ತು ನಕ್ಷತ್ರಗಳ ಸ್ಥಿತಿಗಳಿಂದಾಗಿ ಮಾರ್ಚ್ ೨೦೨೨ರ ತಿಂಗಳಲ್ಲಿ ದೇಶದಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆಯನ್ನು ‘ಜ್ಯೋತಿಷ್ಯ ಜ್ಞಾನ’ ಈ ತ್ರೈಮಾಸಿಕದಲ್ಲಿ ಜ್ಯೋತಿಷಿ ಸಿದ್ಧೆಶ್ವರ ಮಾರಟಕರ ಇವರು ಭವಿಷ್ಯ ನುಡಿದಿದ್ದಾರೆ.

ಶ್ರೀನಗರದಲ್ಲಿ ಗ್ರಾನೈಡ್ ಮೂಲಕ ನಡೆದ ದಾಳಿಯಲ್ಲಿ ಓರ್ವ ಸಾವು ಮತ್ತು ೩೪ ಜನರಿಗೆ ಗಾಯ

ಹರಿ ಸಿಂಹ ಹಾಯ್ ಸ್ಟ್ರೀಟ್ ಪ್ರದೇಶದಲ್ಲಿ ಮಾರ್ಚ್ ೬ ರಂದು ಸಂಜೆ ಜಿಹಾದಿ ಉಗ್ರರಿಂದ ಸುರಕ್ಷಾ ದಳದ ಮೇಲೆ ಗ್ರಾನೈಟ್ ಮೂಲಕ ನಡೆಸಿದ ದಾಳಿಯಲ್ಲಿ ಓರ್ವನು ಸಾವನ್ನಪ್ಪಿದ್ದರೇ ೩೪ ಜನರು ಗಾಯಗೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರೊಂದಿಗೆ ೩೫ ನಿಮಿಷಗಳ ವರೆಗೆ ಮಾತುಕತೆ ನಡೆಸಿದರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೊದಿಮಿರ ಝೆಲೆಂಸ್ಕಿಯವರೊಂದಿಗೆ ದೂರವಾಣಿ ಮುಖಾಂತರ ೩೫ ನಿಮಿಷಗಳ ವರೆಗೆ ಚರ್ಚಿಸಿದರು. ಇಬ್ಬರೂ ಮುಖಂಡರು ಉಕ್ರೇನನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದರು.

ದೆಹಲಿಯಲ್ಲಿ ಮೂರ್ತಿ ವಿಸರ್ಜನೆಯ ಸಮಯದಲ್ಲಿ ನಡೆದಿರುವ ವಾಗ್ವಾದದಲ್ಲಿ ಓರ್ವನ ಹತ್ಯೆ

ಯಮುನಾ ದಡದಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುವಾಗ ನಡೆದ ವಾಗ್ವಾದದಲ್ಲಿ ರಮಝಾನಿ ಎಂಬ ಅಪ್ರಾಪ್ತ ಹುಡುಗನಿಗೆ ಇನ್ನೊಬ್ಬ ಅಪ್ರಾಪ್ತ ಹುಡುಗನಿಂದ ಚಾಕುಯಿಂದ ಇರಿದು ಹತ್ಯೆ ಮಾಡಿದನು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಬಂಧನ

ರಾಷ್ಟ್ರೀಯ ಶೇರು ಮಾರುಕಟ್ಟೆ(‘ಎನ್.ಎಸ್.ಇ.’ನ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಚಿತ್ರಾ ರಾಮಕೃಷ್ಣ ಇವರನ್ನು ಕೇಂದ್ರ ತನಿಖಾದಳ(ಸಿಬಿಐ) ಬಂದಿಸಿತು. ಬಂಧಿಸುವ ಮೊದಲು ಅವರನ್ನು ನಿರಂತರವಾಗಿ ೩ ದಿನಗಳ ವರೆಗೆ ವಿಚಾರಣೆ ನಡೆಸಲಾಯಿತು.

ದೇವಸ್ಥಾನದ ಪಾವಿತ್ರತೆಯನ್ನು ಕಾಪಾಡಲು ಭಕ್ತರಿಗೆ ಸೂಕ್ತವಾದ ಉಡುಪು ಧರಿಸಿಯೇ ದೇವಸ್ಥಾನಕ್ಕೆ ಪ್ರವೇಶಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯದ ನಿರ್ಣಯ

ದೇವಸ್ಥಾನಗಳ ಪಾವಿತ್ರ ಕಾಪಾಡಲು ಭಕ್ತರು ಸೂಕ್ತವಾದ ಉಡುಪನ್ನು ಧರಿಸಿಯೇ ದೇವಸ್ಥಾನಕ್ಕೆ ಪ್ರವೇಶಿಸಬೇಕು. ನ್ಯಾಯಾಲಯ ತನ್ನ ಅಭಿಪ್ರಾಯ ಸಮಾಜದ ಮೇಲೆ ಹೇರಲು ಸಾಧ್ಯವಿಲ್ಲ. ಪೂಜಾ ಸ್ಥಳಗಳಲ್ಲಿ ಪ್ರವೇಶಿಸುವಾಗ ಮತ್ತು ಅಲ್ಲಿಯ ಪರಂಪರೆಗೆ ಅನುಗುಣವಾಗಿ ಯಾವುದಾದರೊಂದು ಉಡುಪು ಅವಶ್ಯಕವಾಗಿದ್ದರೆ ಆಗ ಅದೇ ಉಡುಪನ್ನು ಧರಿಸಬೇಕು