ನಮ್ಮ ದೇಶ ಹಿಂದೂ ರಾಷ್ಟ್ರವಲ್ಲ ! – ಶಾಸಕ ಸೌದ ಆಲಮ್

ಬಿಹಾರ ವಿಧಾನಸಭೆಯ ಮಳೆಗಾಲದ ಅಧಿವೇಶನದ ಸಮಾರೋಪದಲ್ಲಿ ಜೂನ್ ೩೦ ರಂದು ವಂದೇ ಮಾತರಂ ಹಾಡಲಾಯಿತು. ವಂದೇ ಮಾತರಂ ಹಾಡುವಾಗ ರಾಜ್ಯದ ಠಾಕೂರ್ ಗಂಜನ ರಾಷ್ಟ್ರೀಯ ಜನತಾದಳದ ಶಾಸಕ ಸೌದ ಆಲಮ್ ಇವರು ಕುಳಿತೇ ಇದ್ದರು.

ಫ್ರಾನ್ಸನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬ ಕಿವುಡ !- ಸಂಶೋಧನೆಯ ಸಾರಾಂಶ

ಫ್ರಾನ್ಸನಲ್ಲಿ ಇತ್ತೀಚೆಗಷ್ಟೇ 18 ರಿಂದ 75 ವರ್ಷ ವಯಸ್ಸಿನ 2 ಲಕ್ಷ ಜನರ ಸರ್ವೇಕ್ಷಣೆ ನಡೆಸಲಾಯಿತು. ಈ ಸರ್ವೇಕ್ಷಣೆಯಲ್ಲಿ `ಫ್ಯಾನ್ಸನಲ್ಲಿ ನಾಲ್ಕು ಜನರಲ್ಲಿ ಒಬ್ಬರು ಕಿವುಡರಾಗಿದ್ದಾರೆ ಅಥವಾ ಅವರಿಗೆ ಕಡಿಮೆ ಪ್ರಮಾಣದಲ್ಲಿ ಕೇಳಿಸುತ್ತದೆ,’ ಎಂದು ತಿಳಿದು ಬಂದಿತು.

ಕೇರಳದ ಮೊಪಲಾ ಮುಸಲ್ಮಾನರು ಮಾಡಿರುವ ಹಿಂದೂಗಳ ನರಸಂಹಾರದ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಕೇರಳ ಸರಕಾರದ ನಕಾರ

ಹಿಂದೂ ಧರ್ಮದಲ್ಲಿ ಪ್ರವೇಶಿಸಿರುವ ಚಲನಚಿತ್ರ ನಿರ್ದೇಶಕ ರಾಮ ಸಿಂಹನ್ (ಪೂರ್ವಾಶ್ರಮದ ಅಲಿ ಅಕಬರ) ಅವರ `ಪುಝಾ ಮುಟ್ಟುಅಲ ಪುಝಾ ವರಿ’(ನದಿಯಿಂದ ನದಿಯವರೆಗೆ) ಮಲಯಾಳಂ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಕೇರಳ ಸರಕಾರವು ನಿರಾಕರಿಸಿದೆ.

ಭಾಜಪದ ಮುಸಲ್ಮಾನ ನಾಯಕನಿಗೆ ಅವನ ಧರ್ಮ ಬಾಂಧವರಿಂದ ಥಳಿತ !

ಇಲ್ಲಿಯ ಭಾಜಪದ ನಾಯಕ ಫೈಸಲ ಮಲಿಕ ಇವರನ್ನು ತಮ್ಮ ಧರ್ಮ ಬಾಂಧವರು ಥಳಿಸಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಇದರ ನಂತರ ಪೊಲೀಸರು ೪ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪೈಸಲ ಕಾನಪುರದ ಭಾಜಪಾದ ಅಲ್ಪಸಂಖ್ಯಾತ ಮೋರ್ಚಾದ ಛಾವಣಿ ಮಂಡಲ ವಿಭಾಗದ ಕೋಶಾಧ್ಯಕ್ಷರಾಗಿದ್ದಾರೆ.

ಆಗ್ರಾ (ಉತ್ತರಪ್ರದೇಶ) ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ವಾಸವಾಗಿದ್ದ ಯುವತಿಯ ಕೈಕಟ್ಟಿ ನಾಲ್ಕನೆಯ ಮಹಡಿಯಿಂದ ಎಸದಿದ್ದರಿಂದ ಆಕೆಯ ಸಾವು !

ಇಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿದ್ದ ಓರ್ವ ಯುವತಿಯ ಕೈಕಟ್ಟಿ ಆಕೆಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸದಿರುವುದರಿಂದ ಆಕೆ ಸಾವನ್ನಪ್ಪಿದ್ದಾಳೆ. ರಿತಿಕಾ ಎಂದು ಯುವತಿಯ ಹೆಸರಾಗಿದೆ. ಆಕೆ ವಿಪುಲ ಅಗ್ರವಾಲ ಎಂಬ ಯುವಕನ ಜೊತೆ ‘ಲಿವ ಇನ್ ರೆಲೇಶನ್ ಶಿಪ್’ನಲ್ಲಿ ಇರುತ್ತಿದ್ದರು.

ವಿದ್ಯುಚ್ಛಕ್ತಿಯನ್ನು ಉಳಿಸಲು ರಾತ್ರಿ ೯ರ ನಂತರ ಬೀದಿ ದೀಪಗಳನ್ನು ಆರಿಸುವಂತೆ ಪಾಕಿಸ್ತಾನ ಸರಕಾರದ ಆದೇಶ

ಪಾಕಿಸ್ತಾನವು ವೇಗವಾಗಿ ಆರ್ಥಿಕ ದಿವಾಳಿತನದತ್ತ ಸಾಗುತ್ತಿದೆ. ಇದನ್ನು ತಡೆಯಲು ಪಾಕಿಸ್ತಾನ ಸರಕಾರ ಪರದಾಡುತ್ತಿದೆ. ಈ ಹಿಂದೆ ಹೆಚ್ಚುವರಿ ಖರ್ಚು ಕಡಿಮೆ ಮಾಡುವಂತೆ ಸರಕಾರ ಸೂಚನೆ ನೀಡಿತ್ತು. ಇಗ ನೀಡಿರುವ ಆದೇಶದಂತೆ ಮೆರವಣಿಗೆ, ಮೆಹಂದಿ ತೆಗೆಸುವ ಸಮಾರಂಭ, ಭಾಂಗಡಾ ಪಾರ್ಟಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ರಾತ್ರಿ ೯ರ ಒಳಗೆ ಮುಗಿಸಬೇಕಾಗಿದೆ.

ಗೌತಮ್ ಅಡಾಣಿ ಇವರ ಕುಟುಂಬದಿಂದ ಸಮಾಜ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ !

ಏಷ್ಯಾ ಖಂಡದ ಎಲ್ಲಕ್ಕಿಂತ ಶ್ರೀಮಂತ ಉದ್ಯಮಿ ಗೌತಮ ಅಡಾಣಿ ಇವರ ೬೦ ನೇ ಹುಟ್ಟುಹಬ್ಬದ ದಿನದಂದು ಅವರ ಕುಟುಂಬದಿಂದ ಸಾಮಾಜಿಕ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆಯಾಗದಿದ್ದರೆ ದೌರ್ಜನ್ಯ ಕಾಯ್ದೆ ಅನ್ವಯವಾಗುವದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕರ್ನಾಟಕ ಉಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿತು ಮಹತ್ವದ ತೀರ್ಪು ನೀಡಿದೆ. ‘ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ನಡೆದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ (ಅಟ್ರೋಸಿಟಿ) ತಡೆ ಕಾಯ್ದೆಯಡಿ ಅಪರಾಧ ದಾಖಲಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.

ಅಮೇರಿಕಾದ ದೇವಸ್ಥಾನ ಸುರಕ್ಷೆತೆ ಹೆಚ್ಚಿಸಿ ! – ಹಿಂದೂ ಅಮೇರಿಕನ್ ಫೌಂಡೇಶನ್

ಅಮೇರಿಕಾದ ಹಿಂದೂ ಅಮೇರಿಕನ್ ಫೌಂಡೇಶನ್ ಹಿಂದುತ್ವನಿಷ್ಠ ಸಂಘಟನೆ ಅಮೆರಿಕಾದ ಅನೇಕ ರಾಜ್ಯಗಳಲ್ಲಿ ಹಿಂದೂಗಳ ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣ ವಿಷಯವಾಗಿ ಚಿಂತೆ ವ್ಯಕ್ತಪಡಿಸಿದೆ. ಸಂಘಟನೆಯಿಂದ ದೇವಸ್ಥಾನದ ಸುರಕ್ಷೆ ಹೆಚ್ಚಿಸಲು ಒತ್ತಾಯಿಸಲಾಗಿದೆ.

ಬಾಂದಾ (ಉತ್ತರ ಪ್ರದೇಶ) ಇಲ್ಲಿಯ ಶಿಕ್ಷಕನಿಂದ ೩ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಬಲಾತ್ಕಾರದ ಪ್ರಯತ್ನ

ಇಲ್ಲಿಯ ಒರನ ಭಾಗದ ಓರ್ವ ಶಿಕ್ಷಕನು ೩ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ನೀಡುತ್ತಾ ಅವರ ಮೇಲೆ ಬಲಾತ್ಕಾರದ ಪ್ರಯತ್ನ ಮಾಡಿದ. ಈ ಘಟನೆಯಿಂದ ವಿದ್ಯಾರ್ಥಿನಿಯ ಪರಿವಾರದವರಲ್ಲಿ ಆಕ್ರೋಶದ ವಾತಾವರಣ ಇದೆ.