ಬಾಂದಾ (ಉತ್ತರ ಪ್ರದೇಶ) ಇಲ್ಲಿಯ ಶಿಕ್ಷಕನಿಂದ ೩ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಬಲಾತ್ಕಾರದ ಪ್ರಯತ್ನ

ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವಂತೆ ಬೆದರಿಕೆ ನೀಡಲಾಗಿತ್ತು

ಬಾಂದಾ (ಉತ್ತರಪ್ರದೇಶ) – ಇಲ್ಲಿಯ ಒರನ ಭಾಗದ ಓರ್ವ ಶಿಕ್ಷಕನು ೩ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ನೀಡುತ್ತಾ ಅವರ ಮೇಲೆ ಬಲಾತ್ಕಾರದ ಪ್ರಯತ್ನ ಮಾಡಿದ. ಈ ಘಟನೆಯಿಂದ ವಿದ್ಯಾರ್ಥಿನಿಯ ಪರಿವಾರದವರಲ್ಲಿ ಆಕ್ರೋಶದ ವಾತಾವರಣ ಇದೆ. ಅವರು ಪೊಲೀಸರಲ್ಲಿ ಆರೋಪಿ ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಈ ೩ ವಿದ್ಯಾರ್ಥಿನಿಯರು ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವುದಾಗಿ ಹೇಳಲಾಗುತ್ತದೆ. ಆರೋಪಿ ಶಿಕ್ಷಕನು ಒಬ್ಬೊಬ್ಬರನ್ನಾಗಿ ಮೂವರು ವಿದ್ಯಾರ್ಥಿನಿಯರನ್ನು ಶಾಲೆಯ ಕೊಠಡಿಗೆ ಕರೆಸಿ ಮತ್ತು ನಂತರ ಬಲಾತ್ಕಾರದ ಪ್ರಯತ್ನ ಮಾಡಿದ. ಹುಡುಗಿಯರು ವಿರೋಧಿಸಿದ ನಂತರ ಶಿಕ್ಷಕನು ಅವರಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ಹಾಕಿದ್ದಾನೆ. ‘ಈ ವಿಷಯ ಮನೆಯಲ್ಲಿ ಹೇಳಬಾರದೆಂದು’ ಶಿಕ್ಷಕನು ಹೇಳಿದ. ಈ ಮೂವರು ವಿದ್ಯಾರ್ಥಿನಿಯರು ಸ್ನೇಹಿತರಾಗಿದ್ದು ಅವರ ವಯಸ್ಸು ೧೨ ವರ್ಷ ಆಗಿದೆ. ಮಕ್ಕಳು ಮನೆಗೆ ಹೋಗಿ ಇದರ ಬಗ್ಗೆ ಮನೆಯವರಿಗೆ ಹೇಳಿದ್ದಾರೆ. ಅದರ ನಂತರ ಕುಟುಂಬದವರು ಶಾಲೆಗೆ ಹೋದಾಗ ಶಿಕ್ಷಕನು ಅವರಿಗೆ ಬೆದರಿಸಿ ಕಳುಹಿಸಿದ್ದಾನೆ. ಅದರ ನಂತರ ಕುಟುಂಬದವರು ಪೊಲೀಸ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಶಿಕ್ಷಕನ ವಿರುದ್ಧ ದೂರು ದಾಖಲಿಸಿದರು. ‘ಆರೋಪಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು’, ಎಂದು ಪೊಲೀಸರು ಆಶ್ವಾಸನೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ನೈತಿಕತೆಯ ಎಷ್ಟು ಅಧಃಪತನವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಲ್ಲಿಯವರೆಗೆ ಸರಕಾರದಿಂದ ಜನರಿಗೆ ಸಾಧನೆ ಕಲಿಸಿ ಅದನ್ನು ಮಾಡಿಸಿಕೊಂಡಿದ್ದರೆ ಆಗ ಈ ರೀತಿಯ ಸ್ಥಿತಿ ಬರುತ್ತಿರಲಿಲ್ಲ. ಈ ಸ್ಥಿತಿ ಧರ್ಮಾಧಿಸ್ಥಿತ ಹಿಂದೂ ರಾಷ್ಟ್ರ ಅನಿವಾರ್ಯ ಮಾಡುತ್ತದೆ !