ಅಮೇರಿಕಾದ ದೇವಸ್ಥಾನ ಸುರಕ್ಷೆತೆ ಹೆಚ್ಚಿಸಿ ! – ಹಿಂದೂ ಅಮೇರಿಕನ್ ಫೌಂಡೇಶನ್

ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳು

ವಾಷಿಂಗ್ಟನ್ ಡಿ.ಸಿ. – ಅಮೇರಿಕಾದ ಹಿಂದೂ ಅಮೇರಿಕನ್ ಫೌಂಡೇಶನ್ ಹಿಂದುತ್ವನಿಷ್ಠ ಸಂಘಟನೆ ಅಮೆರಿಕಾದ ಅನೇಕ ರಾಜ್ಯಗಳಲ್ಲಿ ಹಿಂದೂಗಳ ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣ ವಿಷಯವಾಗಿ ಚಿಂತೆ ವ್ಯಕ್ತಪಡಿಸಿದೆ. ಸಂಘಟನೆಯಿಂದ ದೇವಸ್ಥಾನದ ಸುರಕ್ಷೆ ಹೆಚ್ಚಿಸಲು ಒತ್ತಾಯಿಸಲಾಗಿದೆ. ಸಂಘಟನೆಯು ಅಧಿಕೃತ ಟ್ವಿಟರ್ ಖಾತೆಯಿಂದ ಈ ಸಂದರ್ಭದಲ್ಲಿ ಟ್ವೀಟ್ ಮಾಡಿ ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ದೇವಸ್ಥಾನಗಳಲ್ಲಿ ನಡೆದಿರುವ ಕಳುವು ಪ್ರಕರಣಗಳನ್ನು ಉಲ್ಲೇಖಿಸಿದೆ.

ಹಿಂದೂ ಅಮೇರಿಕನ್ ಫೌಂಡೇಶನ್ ನೀಡಿರುವ ಮಾಹಿತಿಯ ಪ್ರಕಾರ ದೇವಸ್ಥಾನದಲ್ಲಿ ನಡೆದಿರುವ ಕಳುವಿನ ಘಟನೆಗಳು ಒಂದೇ ರೀತಿಯಾಗಿವೆ. ಭಕ್ತರ ಜನಜಂಗುಳಿ ಇಲ್ಲದೆ ಇರುವ ಸಮಯದಲ್ಲಿ ಕೆಲವು ಮಹಿಳೆಯರ ಗುಂಪು ಜಿಜ್ಞಾಸು ಅಥವಾ ಭಕ್ತರೆಂದು ತೋರಿಸಿ ದೇವಸ್ಥಾನಕ್ಕೆ ನುಗ್ಗುತ್ತಾರೆ. ದೇವಸ್ಥಾನದ ಗರ್ಭಗುಡಿಗೆ ಹೋಗಿ ಅಲ್ಲಿಯ ಅರ್ಚಕರಿಗೆ ಅಥವಾ ಕರ್ಮಚಾರಿಗಳನ್ನು ಸುತ್ತುವರೆದು ಚಾಕುವಿನ ಭಯ ತೋರಿಸಿ ಕಳ್ಳತನ ಮಾಡುತ್ತವೆ. ನ್ಯೂಜೆರ್ಸಿ ದೇವಸ್ಥಾನದ ಸಿಸಿಟಿವಿಯಲ್ಲಿ ಹಿಜಾಬ್ ಹಾಕಿಕೊಂಡಿರುವ ೨ ಮಹಿಳೆಯರು ದೇವಸ್ಥಾನಕ್ಕೆ ನುಗ್ಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಫೌಂಡೇಶನ್ ‘ದೇವಸ್ಥಾನಗಳು ರಕ್ಷಣೆಯ ಸಂದರ್ಭದಲ್ಲಿ ಕಾರ್ಯಪದ್ಧತಿ ಅಳವಡಿಸಬೇಕು, ಹಾಗೂ ಕರ್ಮಚಾರಿಗಳು ಮತ್ತು ಸ್ವಯಂಸೇವಕರಿಗೆ ದರ್ಶನಕ್ಕಾಗಿ ಬರುವವರು ವಿಚಾರಣೆ ನಡೆಸುವ ಅಧಿಕಾರ ನೀಡಬೇಕು’ ಎಂದು ದೇವಸ್ಥಾನಗಳಿಗೆ ಕರೆ ನೀಡಿದೆ.

ಸಂಪಾದಕೀಯ ನಿಲುವು

ಈ ರೀತಿ ಬೇಡಿಕೆ ಏಕೆ ಸಲ್ಲಿಸಬೇಕಾಗುತ್ತದೆ ? ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರ ಮೇಲೆ ತಥಾಕತಿತ ಅತ್ಯಾಚಾರ ಹೆಚ್ಚುತ್ತಿರುವ ಬಗ್ಗೆ ಪ್ರಚಾರ ನಡೆಸುತ್ತಿದೆ ಮತ್ತು ಭಾರತವಿರೋಧಿ ಆಧಾರರಹಿತ ವರದಿ ತಯಾರಿಸುತ್ತಿರುವ ಅಮೇರಿಕಾ ಸ್ವಂತ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಶ್ರದ್ಧಾಸ್ಥಾನಗಳ ರಕ್ಷಣೆ ಏಕೆ ಮಾಡುತ್ತಿಲ್ಲ? ಈಗ ಭಾರತವು ಅಮೆರಿಕಕ್ಕೆ ಇದರ ಬಗ್ಗೆ ಉತ್ತರ ಕೇಳಬೇಕು!