ತಿರುವನಂತಪುರಮ್ (ಕೇರಳ) – ಹಿಂದೂ ಧರ್ಮದಲ್ಲಿ ಪ್ರವೇಶಿಸಿರುವ ಚಲನಚಿತ್ರ ನಿರ್ದೇಶಕ ರಾಮ ಸಿಂಹನ್ (ಪೂರ್ವಾಶ್ರಮದ ಅಲಿ ಅಕಬರ) ಅವರ `ಪುಝಾ ಮುಟ್ಟುಅಲ ಪುಝಾ ವರಿ’(ನದಿಯಿಂದ ನದಿಯವರೆಗೆ) ಮಲಯಾಳಂ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಕೇರಳ ಸರಕಾರವು ನಿರಾಕರಿಸಿದೆ. (ಸತ್ಯ ಇತಿಹಾಸವನ್ನು ಮುಚ್ಚಿಡುವ ಹಿಂದೂದ್ವೇಷಿ ಕೇರಳ ಸರಕಾರ! – ಸಂಪಾದಕರು) ಈ ಚಲನಚಿತ್ರ ಕೇರಳದ ಮೋಪಲಾ ಮುಸಲ್ಮಾನರು 1921 ರಲ್ಲಿ ನಡೆಸಿದ ಹಿಂದೂಗಳ ನರಸಂಹಾರದ ವಿಷಯವನ್ನು ಹೊಂದಿದೆ. ಇತಿಹಾಸಕಾರರು ಮಾತ್ರ ಈ ನರಸಂಹಾರಕ್ಕೆ `ಜಮೀನದಾರರ ವಿರುದ್ಧ ದೊಂಬಿ’ ಎಂದು ಹೇಳುತ್ತ ಮುಸಲ್ಮಾನರ ಪರ ವಕಾಲತ್ತು ವಹಿಸಿದ್ದಾರೆ.
Kerala: Film on Moplah Massacre made by ex-Muslim who reverted to Hinduism denied censor certificate https://t.co/qQA7ssgdkJ
— OpIndia.com (@OpIndia_com) June 27, 2022
ಸಂಪಾದಕೀಯ ನಿಲುವುಕೇರಳದ ಕಮ್ಯುನಿಸ್ಟ ಸಂಯುಕ್ತ ಸರಕಾರದ ಕಟ್ಟಾ ಮುಸಲ್ಮಾನರ ಪೋಷಕರು ಆಗಿರುವುದರಿಂದ ಅವರು ಇಂತಹ ಮುಸಲ್ಮಾನರ ನಿಜಸ್ವರೂಪವನ್ನು ಬಯಲು ಮಾಡುವ ಚಲನಚಿತ್ರಕ್ಕೆ ಪ್ರಮಾಣಪತ್ರ ಹೇಗೆ ನೀಡಬಲ್ಲರು? ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಹಿಂದೂ ದೇವತೆಗಳ ಅವಮಾನ ಮಾಡುವವರನ್ನು ಸಮರ್ಥಿಸುವ ಜಾತ್ಯತೀತವಾದಿಗಳು ಮತ್ತು ಪುರೋ(ಅಧೋ)ಗಾಮಿಗಳು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ? |