ಗೌತಮ್ ಅಡಾಣಿ ಇವರ ಕುಟುಂಬದಿಂದ ಸಮಾಜ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ !

ಉದ್ಯಮಿ ಗೌತಮ ಅಡಾಣಿ

ನವದೆಹಲಿ – ಏಷ್ಯಾ ಖಂಡದ ಎಲ್ಲಕ್ಕಿಂತ ಶ್ರೀಮಂತ ಉದ್ಯಮಿ ಗೌತಮ ಅಡಾಣಿ ಇವರ ೬೦ ನೇ ಹುಟ್ಟುಹಬ್ಬದ ದಿನದಂದು ಅವರ ಕುಟುಂಬದಿಂದ ಸಾಮಾಜಿಕ ಕಾರ್ಯಕ್ಕಾಗಿ ೬೦ ಸಾವಿರ ಕೋಟಿ ರೂಪಾಯಿಯ ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳು, ಶಿಕ್ಷಣ ಮತ್ತು ಕೌಶಲ್ಯತೆಯ ವಿಕಾಸ ಇವುಗಳಿಗಾಗಿ ಉಪಯೋಗಿಸಲಾಗುವುದು. ಆಡಾಣೆಯವರು, ಈ ದಾನ ಭಾರತೀಯ ಕಂಪನಿಗಳ ದಾನ ನೀಡುವ ಇತಿಹಾಸದ ಎಲ್ಲಕ್ಕಿಂತ ದೊಡ್ಡ ದಾನವಾಗಿದೆ. ‘ವಿಪ್ರೋ’ ಕಂಪನಿಯ ಪ್ರಮುಖ ಮತ್ತು ದಾನಶೂರ ಅಜೀಮ್ ಪ್ರೇಮ್ ಜಿ ಇವರು ಅಡಾಣಿ ಅವರ ದೇಣಿಗೆಗೆ ‘ಮಹಾನ’ ಎಂದು ಹೇಳಿದ್ದಾರೆ.