ವಿದ್ಯುಚ್ಛಕ್ತಿಯನ್ನು ಉಳಿಸಲು ರಾತ್ರಿ ೯ರ ನಂತರ ಬೀದಿ ದೀಪಗಳನ್ನು ಆರಿಸುವಂತೆ ಪಾಕಿಸ್ತಾನ ಸರಕಾರದ ಆದೇಶ

ಪಾಕಿಸ್ತಾನದ ಆರ್ಥಿಕ ದಿವಾಳಿಯತ್ತ ವೇಗವಾಗಿ ಸಾಗುತ್ತಿದೆ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ವೇಗವಾಗಿ ಆರ್ಥಿಕ ದಿವಾಳಿತನದತ್ತ ಸಾಗುತ್ತಿದೆ. ಇದನ್ನು ತಡೆಯಲು ಪಾಕಿಸ್ತಾನ ಸರಕಾರ ಪರದಾಡುತ್ತಿದೆ. ಈ ಹಿಂದೆ ಹೆಚ್ಚುವರಿ ಖರ್ಚು ಕಡಿಮೆ ಮಾಡುವಂತೆ ಸರಕಾರ ಸೂಚನೆ ನೀಡಿತ್ತು. ಇಗ ನೀಡಿರುವ ಆದೇಶದಂತೆ ಮೆರವಣಿಗೆ, ಮೆಹಂದಿ ತೆಗೆಸುವ ಸಮಾರಂಭ, ಭಾಂಗಡಾ ಪಾರ್ಟಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ರಾತ್ರಿ ೯ರ ಒಳಗೆ ಮುಗಿಸಬೇಕಾಗಿದೆ. ರಾತ್ರಿ ೯ರ ನಂತರ ಅನಗತ್ಯ ಬೀದಿ ದೀಪಗಳನ್ನು ಸಹ ಬಂದ ಮಾಡಲಾಗುವುದು. ಇದರಿಂದ ಔಷಧದ ಅಂಗಡಿಗಳು, ಪೆಟ್ರೋಲ ಪಂಪಗಳು, ಬಸ ನಿಲ್ದಾಣಗಳು, ಹಾಲಿನ ಅಂಗಡಿಗಳು ಇತ್ಯಾದಿಗಳಿಗೆ ವಿನಾಯತಿ ನೀಡಲಾಗಿದೆ.

೧. ಪಾಕಿಸ್ತಾನದ ಮಾಹಿತಿ ಸಚಿವೆ ಮರಿಯಮ ಔರಂಗಜೆಬ ಇವರು ಮಾತನಾಡುತ್ತಾ, ನಮಗೆ ವಿದ್ಯುತ ಉತ್ಪಾದನೆಯಲ್ಲಿ ೭ ಸಾವಿರದ ೪೦೦ ಮೆಗಾವ್ಯಾಟ ಕೊರತೆಯನ್ನು ಎದುರಾಗಿದೆ. ದೇಶದಲ್ಲಿ ಬೇಡಿಕೆ ೨೮ ಸಾವಿರದ ೪೦೦ ಮೆಗಾವ್ಯಾಟನತ್ತ ತಲುಪಿದ್ದು ಉತ್ಪಾದನೆ ೨೧ ಸಾವಿರ ಮೆಗಾವ್ಯಾಟ ಇದೆ.
ವಿದ್ಯುತ ಉಳಿತಾಯಕ್ಕಾಗಿ ಸರಕಾರ ಎಲ್ಲಾ ಮಾರುಕಟ್ಟೆಗಳು, ಶಾಪಿಂಗ ಮಾಲಗಳು, ಮದುವೆ ಮಂಟಪಗಳು ಮತ್ತು ಅಂಗಡಿಗಳನ್ನು ರಾತ್ರಿ ೯ರ ವರೆಗೆ ತೆರೆದಿರಲು ಆದೇಶಿಸಿದೆ. ಇದರ ನಂತರ ಸೆಕ್ಷನ ೧೪೪ ಜಾರಿಯಾಗಲಿದೆ.

೨. ಇಗ ಸರಕಾರಿ ಕಚೇರಿಗಳಲ್ಲಿ ಕೇವಲ ೫ ದಿನ ಮಾತ್ರ ಕೆಲಸವಿರುತ್ತದೆ. ಶನಿವಾರ ಕಚೇರಿಯನ್ನು ಮುಚ್ಚುವದರಿಂದ ವಾರ್ಷಿಕವಾಗಿ ಸುಮಾರು ೭ ಸಾವಿರದ ೮೩೦ ಕೋಟಿ ರೂಪಾಯಿಗಳ(ಭಾರತೀಯ ರೂಪಾಯಿ) ಉಳಿತಾಯವಾಗಲಿದೆ ಎಂದು ಸರಕಾರ ಹೇಳಿಕೊಂಡಿದೆ. ಅಲ್ಲದೆ ಸರಕಾರವು ಶುಕ್ರವಾರ ಮನೆಯಲ್ಲೆ ಇದ್ದುಕೊಂಡು ಕೆಲಸ ಮಾಡುವಂತೆ ಪರ್ಯಾಯವನ್ನು ನೀಡುತ್ತಾ ನೌಕರರಿಗೆ ವಿತರಿಸುವ ಇಂಧನ ಪ್ರಮಾಣವನ್ನು ಶೇ. ೪೦ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಅದೇ ಸಮಯದಲ್ಲಿ ಪಾಕಿಸ್ತಾನಿ ಸೈನ್ಯವು ‘ಡ್ರೈ ಡೆ’ಎಂದು ಆಚರಿಸುತ್ತಿದ್ದು ಆ ದಿನ ಯಾವುದೇ ಅಧಿಕೃತ ವಾಹನಗಳು ಚಲಿಸುವದಿಲ್ಲ ಎಂದು ಹೇಳಿದ್ದಾರೆ.
೩. ಇಮ್ರಾನ ಖಾನ ಪಕ್ಷದ ನಾಯಕ ಫವಾದ ಚೌಧರಿ ಇವರು ಮಾತನಾಡುತ್ತಾ, ರಾತ್ರಿ ೯ ಕ್ಕೆ ಮಾರುಕಟ್ಟೆ ಮತ್ತು ಶಾಪಿಂಗ ಮಾಲಗಳನ್ನು ಮುಚ್ಚುವುದು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗವಲ್ಲ ಎಂದು ಹೇಳಿದ್ದಾರೆ. ಸರಕಾರದ ಅಸಮರ್ಥತೆ ಮತ್ತು ದುರಾಡಳಿತಕ್ಕೆ ಜನತೆ ಬೆಲೆ ತೆತ್ತುತ್ತಿದ್ದಾರೆ. ವಿದ್ಯುತ ಬಿಕ್ಕಟ್ಟು ಪರಿಹರಿಸುವ ಬದಲು ಶಹಾಬಾಜ ಸರಕಾರವು ಪಾಕಿಸ್ತಾನವನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.