ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆಯಾಗದಿದ್ದರೆ ದೌರ್ಜನ್ಯ ಕಾಯ್ದೆ ಅನ್ವಯವಾಗುವದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು (ಕರ್ನಾಟಕ) – ಕರ್ನಾಟಕ ಉಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿತು ಮಹತ್ವದ ತೀರ್ಪು ನೀಡಿದೆ. ‘ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ನಡೆದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ (ಅಟ್ರೋಸಿಟಿ) ತಡೆ ಕಾಯ್ದೆಯಡಿ ಅಪರಾಧ ದಾಖಲಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.

೧. ೨೦೨೦ರಲ್ಲಿ ರಿತೇಶ ಪಯಾಸ್ ಎಂಬ ಆರೋಪಿಯು ದೂರುದಾರ ಮೋಹನನನ್ನು ಕಟ್ಟಡದ ನೆಲಮಾಳಿಗೆಯಲ್ಲಿ ಅವಮಾನಿಸಿದ್ದು, ಆಗ ಅಲ್ಲಿ ಕಾರ್ಮಿಕರಿದ್ದರು ಎಂದು ಮೋಹನ ಹೇಳಿಕೊಂಡಿದ್ದರು.

೨. ಎರಡು ಕಡೆಯ ವಾದವನ್ನು ಆಲಿಸಿದ ಬಳಿಕ ಎರಡು ವಿಷಯಗಳು ಸ್ಪಷ್ಟವಾಯಿತು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಒಂದು ಕಟ್ಟಡದ ನೆಲಮಾಳಿಗೆಯು ಸಾರ್ವಜನಿಕ ಸ್ಥಳವಲ್ಲ ಮತ್ತು ಇನ್ನೊಂದು ದೂರುದಾರರು ಅವರ ಸ್ನೇಹಿತರು ಮತ್ತು ಇತರ ಸಿಬ್ಬಂದಿ ಅಲ್ಲಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಜನಾಂಗಿಯ ನಿಂದನೆ ಪದಗಳನ್ನು ಬಳಸದಿದ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ (ಅಟ್ರೋಸಿಟಿ) ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ದಾಖಲಿಸಲಾಗುವದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜನಾಂಗಿಯ ನಿಂದನೆ ಪದಗಳನ್ನು ಬಳಿಸಿದರೆ ಮಾತ್ರ ಈ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಾಧ್ಯ.