‘ಹೆಡ್ ಫೋನ್ಸ್’ ಮತ್ತು `ಇಯರ ಫೋನ್ಸ್’ಗಳ ಅತಿಯಾದ ಬಳಕೆಯ ದುಷ್ಪರಿಣಾಮ!
ಪ್ಯಾರಿಸ (ಫ್ರಾನ್ಸ) – ಫ್ರಾನ್ಸನಲ್ಲಿ ಇತ್ತೀಚೆಗಷ್ಟೇ 18 ರಿಂದ 75 ವರ್ಷ ವಯಸ್ಸಿನ 2 ಲಕ್ಷ ಜನರ ಸರ್ವೇಕ್ಷಣೆ ನಡೆಸಲಾಯಿತು. ಈ ಸರ್ವೇಕ್ಷಣೆಯಲ್ಲಿ `ಫ್ಯಾನ್ಸನಲ್ಲಿ ನಾಲ್ಕು ಜನರಲ್ಲಿ ಒಬ್ಬರು ಕಿವುಡರಾಗಿದ್ದಾರೆ ಅಥವಾ ಅವರಿಗೆ ಕಡಿಮೆ ಪ್ರಮಾಣದಲ್ಲಿ ಕೇಳಿಸುತ್ತದೆ,’ ಎಂದು ತಿಳಿದು ಬಂದಿತು. ಜನರ ಕೇಳಿಸುವ ಕ್ಷಮತೆ ಕಡಿಮೆಯಾಗುವ ಹಿಂದೆ ಅನೇಕ ಅಂಶಗಳು ಕಾರಣೀಭೂತವಾಗಿದ್ದರೂ, ಅದರಲ್ಲಿ ಎಲ್ಲಕ್ಕಿಂತ ದೊಡ್ಡ ಪಾಲು `ಹೆಡ್ ಫೋನ್ಸ್’ ಮತ್ತು `ಇಯರ ಫೋನ್ಸ್’ ಗಳದ್ದಾಗಿದೆ, ಎಂದು ಸಂಶೋಧಕರ ವರದಿಯ ಸಾರಾಂಶವಾಗಿದೆ.
शुगर, डिप्रेशन, अकेलेपन, शहरी शोर और हेडफोन का यूज करने के चलते 2050 तक 250 करोड़ लोगों के सुनने की क्षमता पूरी तरह ख़त्म हो सकती है #healthcare https://t.co/qZUuZuQl7O
— Dainik Bhaskar (@DainikBhaskar) June 22, 2022
1. ತಜ್ಞರು ಹೇಳಿರುವುದೇನೆಂದರೆ, ಸಾಮಾನ್ಯವಾಗಿ ದೇಶದ ಶೇ. 25ರಷ್ಟು ಜನರಿಗೆ ಒಂದು ವೇಳೆ ಕಡಿಮೆ ಕೇಳಿಸುವ ತೊಂದರೆಯಿದ್ದರೆ, ಹಾಗೆಯೇ ಅವರಿಗೆ ಕ್ಷಮತೆಗಿಂತ ಕಡಿಮೆ ಕೇಳಿಸುತ್ತಿದ್ದರೆ, ಅದು ಅತ್ಯಂತ ಗಂಭೀರ ವಿಷಯವಾಗಿದೆ.
2. ಫ್ರಾನ್ಸ್ ನಲ್ಲಿ ಸಾಧಾರಣವಾಗಿ ಶೇ. 40 ರಷ್ಟು ಜನರು `ಇಯರ ಫೋನ್ಸ್’ ಉಪಯೋಗಿಸುತ್ತಾರೆ. ಆದರೂ ಕಡಿಮೆ ಕೇಳಿಸುವ ಜನರ ಸಂಖ್ಯೆ ಬಹಳ ದೊಡ್ಡದಾಗಿದೆ. ಇದರೊಂದಿಗೆ ಇನ್ನಿತರ ಕಾರಣಗಳೂ ಇರುವ ಸಾಧ್ಯತೆಯಿದೆ. ಯಾವ ಜನರು `ಇಯರಫೋನ್ಸ್’ ಉಪಯೋಗಿಸುತ್ತಾರೆಯೋ, ಅವರಲ್ಲಿ ಸುಮಾರು ಶೇ. 90 ಕ್ಕಿಂತ ಅಧಿಕ ಜನರ ಕೇಳಿಸುವ ಕ್ಷಮತೆ ಕಡಿಮೆಯಾಗಿದೆ. ಇದರಿಂದ ಫ್ರಾನ್ಸ ಸರಕಾರವು `ಇಯರ ಫೋನ್ಸ್’ ನಂತಹ ಉಪಕರಣಗಳ ಉಪಯೋಗವನ್ನು ಕಡಿಮೆ ಮಾಡಬೇಕು, ಇದಕ್ಕಾಗಿ ಜನಜಾಗೃತಿ ಮೂಡಿಸುತ್ತಿದೆ.
3. ಫ್ರಾನ್ಸ್ ನಲ್ಲಿ ಅನೇಕ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಉಚಿತವಾಗಿ `ಇಯರಫೋನ್ಸ್’ ವಿತರಿಸಲಾಗುತ್ತಿದೆ. ಆಶ್ಚರ್ಯದ ವಿಷಯವೆಂದರೆ ಸರಕಾರಿ ಇಲಾಖೆಯಿಂದಲೇ ಜನರಿಗೆ ಉಚಿತ `ಇಯರಫೋನ್ಸ್’ ವಿತರಿಸಲಾಗುತ್ತಿರುವುದರಿಂದ ಜನರು ಈಗ ಸರಕಾರವನ್ನೂ ಅಡಕತ್ತರಿಯಲ್ಲಿ ಸಿಲುಕಿಸಿದ್ದಾರೆ.
ವಿಶ್ವ ಅರೋಗ್ಯ ಸಂಸ್ಥೆ ಎಚ್ಚರಿಕೆ
ಈ ಸಂದರ್ಭದಲ್ಲಿ ಜಾಗತಿಕ ಆರೋಗ್ಯ ಸಂಘಟನೆ ಹೇಳಿರುವುದೇನೆಂದರೆ, ಇನ್ನು ಕೇವಲ 25 ವರ್ಷಗಳಲ್ಲಿ ಕಿವುಡರ ಜನಸಂಖ್ಯೆ ಒಂದೂವರೆ ಕೋಟಿಯಷ್ಟು ಅಧಿಕವಾಗಲಿದೆ. ಇದರಿಂದ ಜನರು ಈ ಒಂದೂವರೆ ಕೋಟಿಯಲ್ಲಿ ಅವರು ಇಲ್ಲವಷ್ಟೇ ಎನ್ನುವ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.
ಧ್ವನಿಯ ತೀವ್ರತೆಯಿಂದಾಗುವ ದುಷ್ಪರಿಣಾಮ!
ಯಾವುದೇ ಧ್ವನಿಯನ್ನು ಕೇಳುವ ನಮ್ಮ ಕಿವಿಗಳ ಕ್ಷಮತೆ 90 ಡೆಸಿಬಲ ವರೆಗೆ ಇರುತ್ತದೆ; ಆದರೆ ಸತತವಾಗಿ ಮತ್ತು ಅತಿ ಹತ್ತಿರದಿಂದ ಕೆಲವು ಧ್ವನಿ ಕಿವಿಗೆ ಅಪ್ಪಳಿಸುತ್ತಿದ್ದರೆ, ನಮ್ಮ ಕೇಳುವ ಕ್ಷಮತೆ ಕಡಿಮೆಯಾಗಿ 40 ರಿಂದ 50 ಡೆಸಿಬಲ ವರೆಗೆ ಇಳಿಯುತ್ತದೆ ಮತ್ತು ಬಳಿಕ ಹತ್ತಿರ ಹತ್ತಿರ ಕಿವುಡುತನ ಬರುತ್ತದೆ. ನಿಮ್ಮ ಕಿವಿ ಕಿವುಡಾಗುತ್ತದೆ. ಇಷ್ಟೇ ಅಲ್ಲ, ಸತತವಾಗಿ ತೀವ್ರ ಧ್ವನಿ ಕಿವಿಯ ಮೇಲೆ ಬಿದ್ದರೆ, ಹೃದಯವಿಕಾರವಾಗಬಹುದು, ಹಾಗೆಯೇ ಕರ್ಕರೋಗದಂತಹ ವ್ಯಾಧಿ ಕೂಡ ಬರಬಹುದು. ` ಇಯರ ಫೋನ’ ಮೇಳೆ ಅಧಿಕ ಸಮಯದ ವರೆಗೆ ಹಾಡುಗಳನ್ನು ಕೇಳುವುದು ಮತ್ತು ವಿವಿಧ ಕಾರ್ಯಕ್ರಮಗಳನ್ನು ನೋಡುವುದು ಅಥವಾ ಕೇಳುವುದು ಇದರಿಂದ ಕಿವಿಗೆ ಸೋಂಕು ತಗುಲಬಹುದು. ಅಲ್ಲದೇ ಮೆದುಳಿಗೆ ಹಾನಿಯಾಗಬಹುದು. ಇದು ಮಾನಸಿಕ ರೋಗಕ್ಕೆ ಆಹ್ವಾನ ನೀಡಿದಂತಾಗುವುದು. ತಲೆನೋವು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಬಹುದು ಮತ್ತು ನಿದ್ರಾನಾಶಕ್ಕೂ ಕಾರಣವಾಗಬಹುದು.