ಸಮಾಜಕಾರ್ಯವನ್ನು ಭಾವನಾತ್ಮಕ ಸ್ತರದಲ್ಲಿ ಅಲ್ಲ, ಆಧ್ಯಾತ್ಮಿಕ ಸ್ತರದಲ್ಲಿ ಮಾಡಿದರೆ ಸಾಧನೆಯಲ್ಲಿ ಪ್ರಗತಿಯಾಗುತ್ತದೆ

ಈಗ ಸನಾತನದ ಸಂತರು ಮತ್ತು ಶೇ. ೬೦ ರಷ್ಟು ಮಟ್ಟಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಾಗಿರುವ ಸಾಧಕರು ಕಾರ್ಯಕ್ಕಾಗಿ ನಿರಂತರ (ನಿಯಮಿತವಾಗಿ) ನಾಮಜಪವನ್ನು ಮಾಡುತ್ತಿದ್ದಾರೆ. ಅವರ ಈ ನಾಮಜಪದಿಂದ ಸ್ಥೂಲದಿಂದ ನಡೆಯುತ್ತಿರುವ ಈ ಕಾರ್ಯವು ಈಗ ಅತ್ಯಧಿಕ ವೇಗದಿಂದ ನಡೆಯುತ್ತಿದೆ.

ಸನಾತನ ಸಂಸ್ಥೆಯ ಕಾರ್ಯದ ಆರಂಭವು ಮೊದಲು ಸ್ಥೂಲದಿಂದ ಸೂಕ್ಷ್ಮದೆಡೆಗೆ ಮತ್ತು ಈಗ ಸೂಕ್ಷ್ಮದಿಂದ ಸ್ಥೂಲದೆಡೆಗೆ !

ಕಾಲಕ್ಕನುಸಾರವಾಗಿ ನಡೆಯುತ್ತಿರುವ ಸನಾತನದ ಕಾರ್ಯವು ಈಶ್ವರನ ಕಾರ್ಯವಾಗಿರುವುದರಿಂದ ‘ದೇವರು ಸೂಕ್ಷ್ಮದಿಂದ ಸ್ಥೂಲದಲ್ಲಿನ ಕಾರ್ಯಗಳನ್ನು ಹೇಗೆ ಮಾಡಿಸಿಕೊಳ್ಳುತ್ತಾನೆ ?’, ಎಂಬುದಕ್ಕೆ ಇದು ಪ್ರತ್ಯಕ್ಷ ಉದಾಹರಣೆಯಾಗಿದೆ.’

ಗಾಂಭೀರ್ಯವಿಲ್ಲದೇ ಸೇವೆಯನ್ನು ಮಾಡುವುದರಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ತಡೆಗಟ್ಟಲು ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಂದ ಮಾಡಿಸಿಕೊಂಡ ಪ್ರಯತ್ನ!

ತಪ್ಪುಗಳಿಂದಾಗಿ ಸಾಧನೆ ಖರ್ಚಾಗುತ್ತದೆ. ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ತಪ್ಪುಗಳ ಪರಿಮಾರ್ಜನೆಯಾಗುತ್ತದೆ. ಇದರಿಂದ ಸಾಧಕರ ಸಾಧನೆಯು ತಪ್ಪುಗಳ ಪರಿಮಾರ್ಜನೆಗಾಗಿ ಖರ್ಚಾಗದೇ ಆಧ್ಯಾತ್ಮಿಕ ಉನ್ನತಿಗಾಗಿ ಉಪಯೋಗವಾಗುತ್ತದೆ.

ಸಾಧಕರ ಮನೆಯ ರಕ್ಷಣೆಯಾಗಲು ಸಪ್ತರ್ಷಿಗಳು ಮಾಡಲು ಹೇಳಿರುವ ಉಪಾಯ !

ಸಾಧಕರು ಅನೇಕ ದಿನಗಳಿಗಾಗಿ ಮನೆಯಿಂದ ಪರವೂರಿಗೆ ಹೋಗುತ್ತಿದ್ದರೆ ಅವರು ತುಳಸಿಗೆ ಪ್ರಾರ್ಥನೆಯನ್ನು ಮಾಡಬೇಕು ಮತ್ತು ತುಳಸಿಗೆ ಕರ್ಪೂರ-ಆರತಿಯನ್ನು ಬೆಳಗಬೇಕು. ಪರವೂರಿನಿಂದ ಮನೆಗೆ ಮರಳಿ ಬಂದ ಬಳಿಕವೂ ಸಾಧಕರು ಒಮ್ಮೆ ತುಳಸಿಗೆ ಕರ್ಪೂರ-ಆರತಿಯನ್ನು ಬೆಳಗಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ವ್ಯವಹಾರದಲ್ಲಿ ಹೆಚ್ಚುಹೆಚ್ಚು ಗಳಿಸುವುದಿರುತ್ತದೆ ಆದರೆ ಸಾಧನೆಯಲ್ಲಿ ಸರ್ವಸ್ವದ ತ್ಯಾಗವಿರುತ್ತದೆ; ಹಾಗಾಗಿ ವ್ಯವಹಾರದ ಮನುಷ್ಯನು ದುಃಖದಲ್ಲಿರುತ್ತಾನೆ, ಆದರೆ ಸಾಧಕರ ಆನಂದದಲ್ಲಿರುತ್ತಾರೆ.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಸಂತರ ಮಾರ್ಗದರ್ಶನದಿಂದ ಸಾಧಕರಿಗೆ ಸ್ಫೂರ್ತಿ ದೊರಕಿ ಅವರು ಉತ್ಸಾಹದಿಂದ ಪ್ರಯತ್ನವನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ಸಾಧಕರು ಮಾಡಿದ ಪ್ರಯತ್ನ, ಅವರಿಗೆ ಬಂದ ಅನುಭೂತಿ ಸಮಾಜದಿಂದ ದೊರೆತ ಬೆಂಬಲವನ್ನು ಇಲ್ಲಿ ನೀಡಲಾಗಿದೆ.

ವಿಜಯದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

ಅವರು ಭಾರತದಲ್ಲಿ ಎಂದೂ ಯುದ್ಧಕ್ಕೆ ಕರೆ ನೀಡಬಹುದು. ಇಂತಹ ಸ್ಥಿತಿಯಲ್ಲಿ ಕಡಿಮೆ ಪಕ್ಷ ತಮ್ಮ ಕುಟುಂಬದವರ ಮತ್ತು ಸಮಾಜದ ರಕ್ಷಣೆ ಮಾಡಲೆಂದಾದರೂ ಸಶಸ್ತ್ರ ಭಯೋತ್ಪಾದಕರನ್ನು ಪ್ರತಿರೋಧಿಸಲು ಸಿದ್ಧತೆಯನ್ನು ಮಾಡಿರಿ!

ಸಾಧನೆಯಲ್ಲಿ ತಮ್ಮ ಮಕ್ಕಳಿಂದ ಅದ್ವಿತೀಯ ಪ್ರಗತಿಯನ್ನು ಮಾಡಿಸಿಕೊಂಡ ಏಕಮೇವಾದ್ವಿತೀಯ ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ತೀ. ದಾದಾ ಮತ್ತು ಸೌ. ತಾಯಿಯವರಿಂದಾಗಿ ನಮ್ಮ ಮನೆಯ ವಾತಾವರಣವು ಆಧ್ಯಾತ್ಮಿಕವಾಗಿತ್ತು. ಅವರ ದಿನನಿತ್ಯದ ಸಹಜ ನಡೆನುಡಿಗಳಿಂದಲೂ ನಮ್ಮ ಮೇಲೆ ಸಾಧನೆಯ ಸಂಸ್ಕಾರಗಳಾದವು. ಅವರ ಸಂಸ್ಕಾರಗಳಿಂದಾಗಿಯೇ ನನ್ನ ಎಲ್ಲ ಸಹೋದರರ ಸಾಧನೆಯಲ್ಲಿ ಅಪ್ರತಿಮ ಪ್ರಗತಿಯಾಗಿದೆ.

ಸಾಧನೆಯನ್ನು ಮಾಡುವಾಗ ಬರುವ ಅನುಭೂತಿಗಳನ್ನು ಬರೆದುಕೊಡುವ ಮಹತ್ವವನ್ನು ಗಮನದಲ್ಲಿಟ್ಟು, ಅವುಗಳನ್ನು ಆಯಾ ಸಮಯದಲ್ಲಿ ಬರೆದು ಗೋವಾದ ರಾಮನಾಥಿಯ ಸನಾತನದ ಆಶ್ರಮಕ್ಕೆ ಕಳುಹಿಸಿ !

ಒಬ್ಬ ಸಾಧಕನು ಪ್ರಯತ್ನಗಳ ಒಂದು ಹಂತದಲ್ಲಿ ನಿಂತಿದ್ದರೆ, ಮುಂದಿನ ಹಂತದ ಅನುಭೂತಿಯನ್ನು ಓದಿ ಅವನಿಗೆ ಸಾಧನೆಯನ್ನು ಮಾಡಲು ಸ್ಫೂರ್ತಿ ಸಿಗುತ್ತದೆ.

ಶುದ್ಧ ಅಂತಃಕರಣದಿಂದ ಮಾಡಿದ ಸೇವೆಯು ಗುರುಚರಣಗಳಲ್ಲಿ ಸಮರ್ಪಣೆಯಾಗುತ್ತದೆ – ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

‘ನಿರ್ಮಲ ಮನಸ್ಸಿನಲ್ಲಿ ಭಗವಂತನು ವಾಸ ಮಾಡುತ್ತಾನೆ. ಅಂತಃಕರಣದಲ್ಲಿರುವ ನಮ್ಮ ದೋಷ ಅಹಂಗಳು ನಷ್ಟವಾದರೆ ನಮ್ಮ ಮನಸ್ಸು ಶುದ್ಧವಾಗುತ್ತದೆ. ಎಂದು ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು.