ವಿಜಯದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

ಹಿಂದೂಗಳೇ, ಭಯೋತ್ಪಾದಕರ ಪ್ರತಿಕಾರ ಮಾಡಲು ಸಿದ್ಧತೆಯನ್ನು ಮಾಡಿರಿ !

ಪರಾತ್ಪರ ಗುರು ಡಾ. ಜಯಂತ ಆಠವಲೆ

‘ವಿಜಯದಶಮಿ’ಯು ಹಿಂದೂಗಳ ದೇವತೆ ಮತ್ತು ರಾಷ್ಟ್ರಪುರುಷರ ವಿಜಯದ ಇತಿಹಾಸವನ್ನು ಹೇಳುವ ದಿನವಾಗಿದೆ ಅನೇಕ ಶತಮಾನಗಳ ಕಾಲ ಪರಾಜಿತವಾಗಿರುವ ಹಿಂದೂ ಸಮಾಜದ ಮನೆಗಳಲ್ಲಿ ಸದ್ಯ ವಿಜಯದಶಮಿಯ ದಿನದಂದು ಶಸ್ತ್ರಪೂಜೆ, ಅಪರಾಜಿತಾಪೂಜೆ ಮತ್ತು ಸೀಮೋಲ್ಲಂಘನ ಈ ಕೃತಿಗಳನ್ನು ಕೇವಲ ಔಪಚಾರಿಕತೆಯೆಂದು ಮಾಡಲಾಗುತ್ತದೆ. ಇಂದು ಶಸ್ತ್ರಪೂಜೆಯು ಕೇವಲ ಬೇಸಾಯದ ಮತ್ತು ಮನೆಯ ಉಪಕರಣಗಳ ಪೂಜೆಗಷ್ಟೇ ಸೀಮಿತವಾಗಿದೆ. ಧರ್ಮಶಿಕ್ಷಣದ ಅಭಾವದಿಂದ ಅಪರಾಜಿತಾದೇವಿಯ ಪೂಜೆಯು ಲುಪ್ತವಾಗಿದೆ ಮತ್ತು ಹಿಂದೆ ಯುದ್ಧಗಳಿಗಾಗಿ ಮಾಡುತ್ತಿದ್ದ ಸೀಮೋಲ್ಲಂಘನವು ಈಗ ಕೇವಲ ನಗರದ ಗಡಿಯ ಹೊರಗಿನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವ ಮಟ್ಟಿಗೆ ಸೀಮಿತವಾಗಿದೆ.

ಸದ್ಯ ಅಫಘಾನಿಸ್ತಾನದಲ್ಲಿ ತಾಲಿಬಾನಿ ಭಯೋತ್ಪಾದಕರ ರಾಜ್ಯವು ಸ್ಥಾಪಿತವಾಗಿದೆ. ಈ ಅಫಘಾನಿಸ್ತಾನದಿಂದ ಈಗ ದೆಹಲಿ ದೂರವಿಲ್ಲ. ಆದುದರಿಂದ ಕಾಶ್ಮೀರದಿಂದ ಕೇರಳದವರೆಗೆ ‘ಸ್ಲೀಪರ್ ಸೆಲ್ಸ್’(ಗೌಪ್ಯವಾಗಿ ಭಯೋತ್ಪಾದಕರಿಗೆ ಸಹಾಯ ಮಾಡುವ ಮತಾಂಧರ ಸ್ಥಳೀಯ ಗುಂಪು)ನಲ್ಲಿ ಸಕ್ರಿಯರಾಗಿರುವ ಭಯೋತ್ಪಾದಕರು ಭಾರತದಲ್ಲಿ ‘ತಾಲಿಬಾನಿ ರಾಜ್ಯ’ವನ್ನು ತರಲು ಉತ್ಸುಕರಾಗಿದ್ದಾರೆ. ಕಾಶ್ಮೀರದ ಜಿಹಾದಿ ಸಂಘಟನೆಗಳು ತಾಲಿಬಾನಿಗಳ ಸಹಾಯ ಕೇಳುವುದು, ಕಾಶ್ಮೀರಿ ಮುಖಂಡರು ತಾಲಿಬಾನಿಗಳನ್ನು ಬೆಂಬಲಿಸುವುದು, ಪಂಜಾಬ-ಉತ್ತರ ಪ್ರದೇಶಗಳಲ್ಲಿ ಭಯೋತ್ಪಾದಕರನ್ನು ಸೆರೆಹಿಡಿಯಲ್ಪಡುವುದು  ಇತ್ಯಾದಿ ಅದರ ದೃಶ್ಯ ಉದಾಹರಣೆಗಳಾಗಿವೆ. ಅವರು ಭಾರತದಲ್ಲಿ ಎಂದೂ ಯುದ್ಧಕ್ಕೆ ಕರೆ ನೀಡಬಹುದು. ಇಂತಹ ಸ್ಥಿತಿಯಲ್ಲಿ ಕಡಿಮೆ ಪಕ್ಷ ತಮ್ಮ ಕುಟುಂಬದವರ ಮತ್ತು ಸಮಾಜದ ರಕ್ಷಣೆ ಮಾಡಲೆಂದಾದರೂ ಸಶಸ್ತ್ರ ಭಯೋತ್ಪಾದಕರನ್ನು ಪ್ರತಿರೋಧಿಸಲು ಸಿದ್ಧತೆಯನ್ನು ಮಾಡಿರಿ!

ಗಮನದಲ್ಲಿಡಿ, ಶಸ್ತ್ರಪೂಜೆಯ ಮೂಲಕ ಉಪಕರಣಗಳಲ್ಲಿ ಶಕ್ತಿಯ ಪ್ರತಿಷ್ಠಾಪನೆಯಾಗುತ್ತದೆ. ಅಪರಾಜಿತಾದೇವಿಯ ಪೂಜೆ ಎಂದರೆ ಪರಾಜಯವನ್ನು ತಪ್ಪಿಸಲು ಮತ್ತು ವಿಜಯಪ್ರಾಪ್ತಿಗಾಗಿ ಮಾಡಿದ ಶಕ್ತಿಯ ಆರಾಧನೆಯಾಗಿದೆ.  ಸೀಮೋಲ್ಲಂಘನವೆಂದರೆ ಪ್ರತ್ಯಕ್ಷ ವಿಜಯಕ್ಕಾಗಿ ಶತ್ರುಗಳ ಸೀಮೆಯಲ್ಲಿ ಪ್ರವೇಶಿಸುವುದು ಎಂದಾಗಿದೆ. ವಿಜಯದಶಮಿಯ ಕರ್ಮಕಾಂಡಗಳ ಈ ಅರ್ಥವನ್ನು ತಿಳಿದುಕೊಂಡು ಕಾಲಾನುಸಾರ ಪ್ರತಿಯೊಂದು ಕೃತಿಯನ್ನು ಮಾಡಿರಿ! ಅಧಿಕೃತ ಪರವಾನಿಗೆ ಇರುವ ಶಸ್ತ್ರಗಳ ಪೂಜೆಯನ್ನು ಮಾಡಿರಿ! ಹಿಂದೂಗಳ ವಿಜಯಕ್ಕಾಗಿ ಅಪರಾಜಿತಾದೇವಿಯ ಭಾವಪೂರ್ಣ ಪೂಜೆಯನ್ನು ಮಾಡಿರಿ! ಈ ವರ್ಷ ವಿಜಯದಶಮಿಯ ನಿಜವಾದ ಸೀಮೋಲ್ಲಂಘನ ಮಾಡುವ ಆರಂಭವೆಂದು ತಮ್ಮ ಕ್ಷೇತ್ರದಲ್ಲಿನ ಸಂಶಯಾಸ್ಪದ ಭಯೋತ್ಪಾದಕರ ಚಲನವಲನಗಳ ಮಾಹಿತಿಯನ್ನು ಪೊಲೀಸ್-ಆಡಳಿತಕ್ಕೆ ನೀಡಿರಿ! ಹಿಂದೂಗಳೇ, ಇಷ್ಟು ಕೃತಿಯನ್ನಾದರೂ ನಿಶ್ಚಯಪೂರ್ವಕವಾಗಿ ಮಾಡಿದರೂ, ವಿಜಯದಶಮಿಯನ್ನು ಆಚರಿಸಿದರೆ ನಿಜವಾದ ಆನಂದವು ಸಿಗುವುದು !’

– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.