ನವದೆಹಲಿ – ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ ಕೇಜ್ರಿವಾಲ್ ಅವರು ವಾರದೊಳಗೆ ತಮ್ಮ ಸರಕಾರಿ ನಿವಾಸವನ್ನು ತೊರೆಯಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ಎಲ್ಲಾ ಸರಕಾರಿ ಸೌಲಭ್ಯಗಳನ್ನು ಸಹ ಬಿಡುತ್ತಾರೆ ಎಂದು ಅವರು ಹೇಳಿದರು. ಅವರು ಎಲ್ಲಿ ವಾಸಿಸುತ್ತಾರೆ?, ಎಂದು ಇನ್ನೂ ನಿರ್ಧರಿಸಲಾಗಿಲ್ಲ.
Arvind Kejriwal to Vacate CM Residence Within a Week!
AAP’s Sanjay Singh confirms update
Key Highlights:
– Arvind Kejriwal tenders resignation as Delhi CM– Visits L-G Secretariat with AAP MLA delegation
pic.twitter.com/wHBmvNruLg— Sanatan Prabhat (@SanatanPrabhat) September 18, 2024
ಎಎಪಿ ನಾಯಕಿ ಅತಿಶಿ ಮಾರ್ಲೆನಾ ಇವರನ್ನು ಎಎಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಇದಾದ ನಂತರ ಕೇಜ್ರಿವಾಲ್ ತಮ್ಮ ರಾಜೀನಾಮೆ ಪತ್ರವನ್ನು ಉಪರಾಜ್ಯಪಾಲ ವಿನಯ ಸಕ್ಸೇನಾ ಅವರಿಗೆ ಸಲ್ಲಿಸಿದರು. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮರುದಿನ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು.