ಕರ್ನಾಟಕ ರಾಜ್ಯದಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ (ಗ್ರಂಥ ಅಭಿಯಾನ)ವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ಆರಂಭಿಸುವಾಗ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಸಾಧಕರಿಗೆ ಭಾವಪೂರ್ಣ ಮಾರ್ಗದರ್ಶನವನ್ನು ಮಾಡಿದರು. ಅವರು ತಮ್ಮ ಮಾರ್ಗದರ್ಶನದಲ್ಲಿ ಸನಾತನವು ಪ್ರಕಾಶಿಸಿದ ಗ್ರಂಥಗಳ ಮಹತ್ವವನ್ನು ಹೇಳಿದರು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಮಹಾನ ಕೊಡುಗೆಯನ್ನು ನೀಡುವ ಈ ದಿವ್ಯ ಮತ್ತು ಚೈತನ್ಯದಾಯಕ ಗ್ರಂಥಗಳನ್ನು ಸಮಾಜದಲ್ಲಿ ಮನೆಮನೆಗೆ ತಲುಪಿಸುವ ಮಹತ್ವವನ್ನೂ ಗಮನಕ್ಕೆ ತಂದುಕೊಟ್ಟರು. ‘ಇದರಿಂದ ಸಾಧಕರ ಸಾಧನೆ ಹೇಗಾಗುತ್ತದೆ ?’ ಈ ಬಗ್ಗೆಯೂ ಅವರು ಹೇಳಿದರು. ಅವರ ಮಾರ್ಗದರ್ಶನದಿಂದ ಸಾಧಕರಿಗೆ ಸ್ಫೂರ್ತಿ ದೊರಕಿ ಅವರು ಉತ್ಸಾಹದಿಂದ ಪ್ರಯತ್ನವನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ಸಾಧಕರು ಮಾಡಿದ ಪ್ರಯತ್ನ, ಅವರಿಗೆ ಬಂದ ಅನುಭೂತಿ ಸಮಾಜದಿಂದ ದೊರೆತ ಬೆಂಬಲವನ್ನು ಇಲ್ಲಿ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಧಕರ ಪ್ರಯತ್ನ
೧. ಧ್ಯೇಯವಿಟ್ಟು ಸೇವೆ ಆರಂಭಿಸಿದಾಗ ಗುರುಗಳ ಕೃಪೆಯಿಂದ ಅದು ಶೀಘ್ರದಲ್ಲಿಯೇ ಪೂರ್ಣವಾಗಿ ಉತ್ಸಾಹ ಹೆಚ್ಚಾಗುವುದು : ಗ್ರಂಥ ಅಭಿಯಾನದ ಸಂದರ್ಭದಲ್ಲಿ ಪೂಜನೀಯ ಅಣ್ಣನವರ ಮಾರ್ಗದರ್ಶನ ಕೇಳಿದಾಗ ಅಭಿಯಾನವು ಬಹುದೊಡ್ಡ ಜ್ಞಾನದ ಕ್ರಾಂತಿಯನ್ನು ಮಾಡಲಿಕ್ಕಿದೆ ಹೀಗೆ ಅನಿಸುತ್ತಿತ್ತು. ಗ್ರಂಥದ ಬಗ್ಗೆ ಅನೇಕ ರೀತಿಯಲ್ಲಿ ಸೋಶಿಯಲ್ ಮೀಡಿಯಾದ ಪೋಸ್ಟ್‌ಗಳು ಬರುತ್ತಿತ್ತು ಅದು ನೋಡಿ ಬಹಳ ಆನಂದ ಅನಿಸುತ್ತಿತ್ತು. ಪೂ. ಅಣ್ಣನವರ ಮಾರ್ಗದರ್ಶನದ ನಂತರ ನನಗೆ ದೇವರು ೬೦ ಹೆಸರುಗಳನ್ನು ನೆನಪಿಸಿ ಕೊಟ್ಟರು. ಅವರೆಲ್ಲರ ಹೆಸರು ಬರೆದು ಅದಕ್ಕೆ ಮಂಡಲ ಹಾಕಿ ಅದನ್ನು ಶ್ರೀಗುರುದೇವರ ದರ್ಶನ ಪುಸ್ತಕದಲ್ಲಿ ಇಟ್ಟಿದ್ದೆನು ಮತ್ತು ಈ ಬಗ್ಗೆ ಬಹಳ ಪ್ರಾರ್ಥನೆ ಆಗುತ್ತಿತ್ತು. ಈ ಸೇವೆಯ ಅಂತರ್ಗತ ಧ್ಯೇಯವಿಡುವಾಗ ೩೦ ದೊಡ್ಡ ಮತ್ತು ೫೦೦ ಸಣ್ಣ ಗ್ರಂಥಗಳ ವಿತರಣೆಯ ಧ್ಯೇಯವಿಟ್ಟಿದ್ದೆನು. ಕೇವಲ ನಾಲ್ಕು ಮಂದಿಗೆ ಸಂಪರ್ಕ ಮಡಿದ ನಂತರವೇ ೨೯೭ ದೊಡ್ಡ ಗ್ರಂಥ ಮತ್ತು ೫೦೦ ಸಣ್ಣ ಗ್ರಂಥಗಳ ಬೇಡಿಕೆ ಬಂದಿತು. ನನ್ನದು ೬೦ ಜನರ ಹೆಸರಿನ ಪಟ್ಟಿ ಇತ್ತು ಆದರೆ ಕೇವಲ ೪ ಜನರನ್ನು ಸಂಪರ್ಕಿಸಿದಗಲೇ ನಾನಿಟ್ಟ ಧ್ಯೇಯವನ್ನು ಗುರುಗಳು ಪೂರ್ಣ ಮಾಡಿದರು. ಇದರಿಂದ ಗುರುದೇವರ ತತ್ತ್ವ ಎಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತ ಇದೆ ಮತ್ತು ಧ್ಯೇಯ ಇಡುವಲ್ಲಿ ನಾವೆಷ್ಟು ಸಂಕುಚಿತ ಇದ್ದೇವೆ ಎಂಬುದರ ಅರಿವಾ ಯಿತು ಮತ್ತು ನಾನು ಹೆಚ್ಚು ಧ್ಯೇಯವನ್ನಿಡಲು ಪ್ರಯತ್ನಿಸಿದೆ.
– ಸೌ. ರೇವತಿ ಹರಗಿ, ಸಾಗರ
೨. ನ್ಯಾಯವಾದಿಯೊಬ್ಬರು ಸನಾತನದ ಗ್ರಂಥಗಳನ್ನು ನೋಡಿದಾಗಲೇ ಅವರ ಮುಖದಲ್ಲಿ ಆನಂದ ಕಾಣಿಸುವುದು : ಪೂ. ಅಣ್ಣನವರ ಉದ್ಘಾಟನೆ ನಿಮಿತ್ತ ಮಾಡಿದ ಮಾರ್ಗದರ್ಶನದಲ್ಲಿ, ‘ಸನಾತನ ಗ್ರಂಥಗಳಲ್ಲಿ ನೀಡಿದ ಜ್ಞಾನವು ಅಜ್ಞಾನಿ ಅಂಧಕಾರಿ ವ್ಯಕ್ತಿಗೆ ಜ್ಞಾನ ನೀಡಿ ಪ್ರಕಾಶದ ಕಡೆಗೆ ಕರೆದೊಯ್ಯುತ್ತದೆ, ಈ ಜ್ಞಾನದ ಅಧ್ಯಯನ ಮಾಡಿ ಆಚರಣೆಯಲ್ಲಿ ತಂದರೆ ಮನುಷ್ಯನು ಮೊದಲು ಜಿಜ್ಞಾಸು, ಸಾಧಕ, ಶಿಷ್ಯ ಮತ್ತು ಅನಂತರ ಸಂತನೂ ಆಗಬಹುದು ಎಂದು ಹೇಳಲಾಗಿದೆ.ಅದಕ್ಕನುಸಾರ ನನಗೂ ಈ ಗ್ರಂಥಗಳ ಅಧ್ಯಯನ ಮಾಡಬೇಕು ಎಂದೆನಿಸಿತು ಮತ್ತು ಕೆಲವು ಗ್ರಂಥಗಳ ಅಧ್ಯಯನ ಮಾಡಿದೆನು. ಆಗ ಈ ಗ್ರಂಥಗಳು ಎಷ್ಟು ಅಮೂಲ್ಯವಾಗಿವೆ ಎಂಬುದು ಗಮನಕ್ಕೆ ಬಂದಿತು. ಅನಂತರ ಪರಿಚಯದವರ ಪಟ್ಟಿ ಮಾಡಿ ಅವರ ಹೆಸರಿಗೆ ಮಂಡಲ ಹಾಕಿದೆ ಮತ್ತು ನಂತರ ಸಂಪರ್ಕಿಸಲು ಆರಂಭಿಸಿದೆ. ನ್ಯಾಯವಾದಿಯೊಬ್ಬರಿಗೆ ಗ್ರಂಥದ ಮಾಹಿತಿ ಹೇಳಿದಾಗ ಅದನ್ನು ಕೇಳಿದ ತಕ್ಷಣವೇ ೧ ಪೂರ್ಣ ಗ್ರಂಥದ ಸೆಟ್ ತೆಗೆದುಕೊಂಡು ಹಣವನ್ನು ಕೊಟ್ಟರು. ಅವರಿಗೆ ಗ್ರಂಥಗಳು ಎಷ್ಟು ಇಷ್ಟವಾಯಿತು ಎಂದರೆ ಅವರ ಮುಖದಲ್ಲಿ ಅದು ಕಾಣಿಸುತ್ತಿತ್ತು. ಅವರು ತಮ್ಮ ಮನೆಯ ಶೋಕೇಸ್‌ನಲ್ಲಿ ಇತರ ಗ್ರಂಥಗಳ ಜೊತೆಗೆ ಸನಾತನ ಗ್ರಂಥಗಳನ್ನು ಜೋಡಿಸಿಡುವುದಾಗಿ ಹೇಳಿದರು. ಗುರುದೇವರು ನೀಡಿದ ಈ ಅನುಭೂತಿಗಾಗಿ ಅನಂತಾನಂತ ಕೃತಜ್ಞತೆಗಳು.
– ಕು. ನಾಗಮಣಿ ಆಚಾರ್, ಸಾಗರ.
೩. ಧ್ಯೇಯವಿಟ್ಟು ಆಧ್ಯಾತ್ಮಿಕ ಉಪಾಯ ಮಾಡಿ ಸೇವೆ ಮಾಡಿದ್ದರಿಂದ ಶಾರೀರಿಕ ಅಡಚಣೆ ಇದ್ದರೂ ಸೇವೆಯ ಧ್ಯೇಯ ಪೂರ್ಣವಾಗುವುದು : ವಾಹನದಿಂದ ಬಿದ್ದಿದ್ದರಿಂದ ನನ್ನ ಕೈಯ ಮೂಳೆ ಮುರಿತವಾಗಿತ್ತು. ಇದರಿಂದ ನನಗೆ ಹೊರಗಡೆ ಹೋಗಿ ಸೇವೆ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ ಮನೆಯಲ್ಲಿದ್ದು ಹೇಗೆ ಸೇವೆ ಮಾಡಲಿ ಎಂಬ ವಿಚಾರದಿಂದ ೫೦ ದೊಡ್ಡ ಗ್ರಂಥ ಮತ್ತು ೧೫೦ ಕಿರು ಗ್ರಂಥವಿತರಣೆಯ ಧ್ಯೇಯವನ್ನಿಟ್ಟೆನು. ಪೂ. ಅಣ್ಣನವರ ಸತ್ಸಂಗವಾದ ನಂತರ ಕೂಡಲೇ ಪಟ್ಟಿ ಮಾಡಿದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡಿ ಸೇವೆ ಆರಂಭಿಸಿದೆ. ಒಬ್ಬ ಜಿಜ್ಞಾಸುವಿಗೆ ಸನಾತನ ಸಂಸ್ಥೆಯ ಪರಿಚಯ ಹೇಳಿ ಗ್ರಂಥದ ಮಹತ್ವದ ಹೇಳಿದೆ. ಅವರಿಗೆ ಗ್ರಂಥದ ಹೆಸರನ್ನು ಕೇಳಿ ತುಂಬಾ ಒಳ್ಳೆಯದು ಇದೆ ಎಂದೆನಿಸಿತು ಮತ್ತು ಅವರು ನನಗೆ ಪೂರ್ಣ ಗ್ರಂಥದ ಸೆಟ್ ತೆಗೆದುಕೊಂಡರು ಮತ್ತು ಕೂಡಲೇ ಆನ್‌ಲೈನ್‌ದಲ್ಲಿ ಹಣವನ್ನು ತುಂಬಿದರು. ಇದು ಕೇವಲ ಗುರುಕೃಪೆಯಿಂದಲೇ ಸಾಧ್ಯವಾಗಿದೆ ಎಂಬ ಕೃತಜ್ಞತಾಭಾವ ಜಾಗೃತವಾಯಿತು. ಈಗ ಸಂಪರ್ಕ ಮಾಡುವ ಎಲ್ಲ ಜಿಜ್ಞಾಸುಗಳಿಂದಲೂ ಇದೇ ರೀತಿ ಸ್ಪಂದನೆ ಸಿಗುತ್ತಿದೆ ಮತ್ತು ಜನರು ಬೇಡಿಕೆ ಸಹ ನೀಡುತ್ತಿದ್ದಾರೆ.
– ಶ್ರೀ ಮುಕುಂದ ಮೊಗೇರ, ಶಿವಮೊಗ್ಗ