ರಾಹುಲ ಗಾಂಧಿ ಮತ್ತು ಜಿನ್ನಾ ಮನಸ್ಥಿತಿ ಒಂದೇ ! – ಕೇಂದ್ರ ಸಚಿವ ಹರದೀಪ ಪುರಿ

ವಾಷಿಂಗ್ಟನ್ (ಅಮೇರಿಕಾದ) – ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿಯವರ ಮನಸ್ಥಿತಿಯು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ ಅಲಿ ಜಿನ್ನಾರಂತಿದೆ. ಅವರಿಗೆ ದೇಶದಲ್ಲಿ ಪ್ರತ್ಯೇಕತಾವಾದಿ ಚಿಂತನೆಯನ್ನು ಉತ್ತೇಜಿಸಬೇಕಿದೆ. ಅವರಿಗೆ ರಕ್ತದಿಂದ ಮುಳುಗಿರುವ ದೇಶವನ್ನು ನೋಡುವ ಬಯಕೆಯಿದೆ, ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ ಪುರಿಯವರು ಹೇಳಿಕೆ ನೀಡಿದ್ದಾರೆ. ಹರದೀಪ ಪುರಿಯವರು ಪ್ರಸ್ತುತ ಅಮೆರಿಕಾದ ಪ್ರವಾಸದಲ್ಲಿದ್ದಾರೆ. ಅವರು ಮುಂದುವರಿದು, ರಾಹುಲ ಗಾಂಧಿಯವರು ಭಾರತದಲ್ಲಿ ಎಂದಿಗೂ ಸಿಖ್ಖರ ಬಗ್ಗೆ ಮಾತನಾಡಿಲ್ಲ. ದೇಶದಲ್ಲಿ ಕಾಂಗ್ರೆಸ್ಸಿನ ಅಧಿಕಾರವಿದ್ದಾಗ, ಸಿಖ್ಖರು ಭಯದ ನೆರಳಿನಲ್ಲಿ ವಾಸಿಸುತ್ತಿದ್ದರು. 1984ರಲ್ಲಿ ಕಾಂಗ್ರೆಸ್ಸಿನ ಆಡಳಿತದಲ್ಲಿ ಸಿಖ್ಖರ ಮೇಲೆ ದಾಳಿ ನಡೆದಿತ್ತು. ಸಿಖ್ಖರು ಪಗಡಿ ಧರಿಸಲೂ ಹೆದರುತ್ತಿದ್ದರು ಎಂದು ಹೇಳಿದರು.

1. ಕಳೆದ ತಿಂಗಳಲ್ಲಿ ಮೂರು ದಿನಗಳ ಅಮೇರಿಕಾ ಪ್ರವಾಸದಲ್ಲಿದ್ದಾಗ ರಾಹುಲ ಗಾಂಧಿಯವರು, ‘ಭಾರತದಲ್ಲಿನ ಹೋರಾಟವು ಸಿಖ್ಖರಿಗೆ ಪಗಡಿ ಧರಿಸುವ ಅವಕಾಶ ನೀಡಲಾಗುವುದೇ ?, ಕೈಯಲ್ಲಿ ಕಡಗ (ಸ್ಟೀಲ್ ನ ದುಂಡಗಿನ ಕಡಗ) ಧರಿಸುವ ಅನುಮತಿ ನೀಡಲಾಗುವುದೇ ?’ ಎಂಬುದರ ಬಗ್ಗೆ ಇದೆ,
ಎಂದು ಹೇಳಿದ್ದರು.

2. ಪುರಿಯವರು ಮುಂದುವರಿದು, ‘ನಾನು 62 ವರ್ಷಗಳಿಂದ ಪಗಡಿ ಧರಿಸುತ್ತಿದ್ದೇನೆ. ನನಗೆ ಎಂದಿಗೂ ಯಾವುದೇ ಅಡಚಣೆಗಳು ಬಂದಿಲ್ಲ. “ಭಾರತದಲ್ಲಿ ಪಗಡಿ ಅಥವಾ ಕಡಗ ಧರಿಸುವುದನ್ನು ತಡೆಯಲಾಗಿದೆ ಎಂದು ಯಾವುದೇ ಸಿಖ್ಖರು ಹೇಳಿದ್ದಾರೆಯೇ ?,” ಎಂದು ರಾಹುಲ ಗಾಂಧಿಯವರನ್ನೇ ಕೇಳಬೇಕಾಗಿದೆ, ಎಂದು ಹೇಳಿದರು.