ಭಾಜಪ ಶಾಸಕ ಸಿ.ಟಿ. ರವಿ ಅವರ ಪ್ರಶ್ನೆ
ಚಿಕ್ಕಮಗಳೂರು – ದೇವಸ್ಥಾನದ ಆಸ್ತಿ ಸರಕಾರಿ ಆಸ್ತಿಯಾಗಬಹುದಾದರೆ, ವಕ್ಫ್ ಮಂಡಳಿಯ ಆಸ್ತಿಯೂ ಸರಕಾರದ ಆಸ್ತಿಯಾಗಲು ಏಕೆ ಸಾಧ್ಯವಿಲ್ಲ ? ಸರಕಾರದಿಂದ ಖರೀದಿಸಿರಬೇಕು ಅಥವಾ ಅನುಮೋದಿಸಿರಬೇಕು; ಆದರೆ ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು. ಈ ಅಕ್ರಮ ತಡೆಯಲು ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕ ರವಿ ಅವರು ಮಾತುಮುಂದುವರೆಸಿ, ಪಾಕಿಸ್ತಾನದಲ್ಲಿ ಅಥವಾ ಅರಬ್ ರಾಷ್ಟ್ರಗಳಲ್ಲಿ ಅಂತಹ ಯಾವುದೇ ಕಾನೂನುಗಳಿಲ್ಲ; ಆದರೆ ಭಾರತದಲ್ಲಿ ಅಂತಹ ಕಾನೂನುಗಳಿವೆ. ಈ ಕಾನೂನಿಗೆ ತಿದ್ದುಪಡಿಗಳು ಬಹಳ ಹಿಂದೆಯೇ ಆಗಬೇಕಿತ್ತು. ರಾಜಕೀಯ ಲಾಭಕ್ಕಾಗಿ ರಾಜಕಾರಣ ಮಾಡುತ್ತಿರುವುದರಿಂದ ಈ ಕಾನೂನಿಗೆ ಇನ್ನೂ ತಿದ್ದುಪಡಿ ತಂದಿಲ್ಲ. ಹಿಂದೂ ದೇವತೆಗೆ ಒಂದು ಕಾನೂನು ಮತ್ತು ಮುಸ್ಲಿಂ ದೇವತೆಗೆ ಇನ್ನೊಂದು ಕಾನೂನನ್ನು ಅಧರ್ಮವೆಂದು ಹೇಗೆ ಪರಿಗಣಿಸುವುದು ? ಎಂದು ಹೇಳಿದರು.