Fanatics Stone Pelting Ganesh Utsav: ಮಹಾರಾಷ್ಟ್ರದಲ್ಲಿ ಮತಾಂಧರಿಂದ ಗಣೇಶೋತ್ಸವದ ಮೆರವಣಿಗೆಯ ಮೇಲೆ ಕಲ್ಲು ತೂರಾಟ !

ಮಹಾರಾಷ್ಟ್ರದ ಶೇಗಾವದಲ್ಲಿ ಆಕ್ರೋಶಿತ ಗಣೇಶೋತ್ಸವ ಮಂಡಳಿಯಿಂದ ಒಂದೇ ಸ್ಥಳದಲ್ಲಿ ೨ ಗಂಟೆಗಳ ಕಾಲ ಮೆರವಣಿಗೆ ನಿಲ್ಲಿಸಿತು !

ಬುಲಢಾಣಾ – ಜಿಲ್ಲೆಯಲ್ಲಿನ ಶೇಗಾವ ನಗರದಲ್ಲಿ ಕ್ಷುಲ್ಲಕ ಕಾರಣದಿಂದಾದ ವಾಗ್ವಾದದಿಂದಾಗಿ ಶ್ರೀ ಗಣೇಶನ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು ಹಾಗೂ ಭಿವಂಡಿ (ಠಾಣೆ ಜಿಲ್ಲೆ) ಇಲ್ಲಿ ಕೂಡ ಮತಾಂಧರು ಗಣೇಶನ ಮೂರ್ತಿಯ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದು ವಿಡಂಬನೆ ಮಾಡಿದರು.

ಶೇಗಾವದಲ್ಲಿ ‘ಎಲ್ಲಿಯವರೆಗೆ ಕಲ್ಲು ತೂರಾಟ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ, ಅಲ್ಲಿಯವರೆಗೆ ಶ್ರೀಗಣೇಶ ಮೂರ್ತಿಯ ವಿಸರ್ಜನೆ ಮಾಡುವುದಿಲ್ಲ’, ಎಂದು ಗಣೇಶೋತ್ಸವ ಮಂಡಳಿಯಿಂದ ದೃಢವಾದ ನಿರ್ಧಾರ ತೆಗೆದುಕೊಳ್ಳಲಾಯಿತು. ಆದ್ದರಿಂದ ಮೆರವಣಿಗೆ ೨ ಗಂಟೆಗಳ ಕಾಲ ಒಂದೇ ಜಾಗದಲ್ಲಿ ನಿಲ್ಲಿಸಲಾಯಿತು. ಮನೆಯ ಮಾಳಿಗೆಯಿಂದ ಕಲ್ಲು ತೂರಾಟ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಕಲ್ಲು ತೂರಾಟದಲ್ಲಿ ಕೆಲವು ಜನರು ಗಾಯಗೊಂಡಿದ್ದು ಪರಿಸರದಲ್ಲಿ ಪೊಲೀಸ ಬಂದೋಬಸ್ತು ಹೆಚ್ಚಿಸಲಾಗಿದೆ. ಈ ಸಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಭಿವಂಡಿ (ಠಾಣೆ ಜಿಲ್ಲೆ), ಅಮಳನೇರ (ಜಳಗಾವ ಜಿಲ್ಲಾ), ರಾಜಸ್ಥಾನ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಕೂಡ ಮೆರವಣಿಗೆಯ ಮೇಲೆ ಕಲ್ಲು ತೂರಾಟದ ಘಟನೆಗಳು ಘಟಿಸಿವೆ.

ಅಚಲಪುರ (ಅಮರಾವತಿ) ಇಲ್ಲಿ ಕೂಡ ಮೆರವಣಿಗೆಯ ಮೇಲೆ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಇದರ ಬಗ್ಗೆ ಭಾಜಪದ ಶಾಸಕ ಅನಿಲ ಬೋಂಡೆ ಇವರು ಪೊಲೀಸರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಚರ್ಚಿಸಿದ್ದಾರೆ.

ಭೀಮಂಡಿಯಲ್ಲಿನ ಶಾಂತಿನಗರ ಪ್ರದೇಶದಲ್ಲಿ ಶ್ರೀಗಣೇಶ ಮೂರ್ತಿಯ ಮೇಲೆ ಕಲ್ಲು ಮತ್ತು ಚಪ್ಪಲಿ ಎಸೆತ !

ಭೀವಂಡಿ (ಠಾಣೆ ಜಿಲ್ಲೆ) – ಶಾಂತಿನಗರ ಪ್ರದೇಶದಲ್ಲಿ ಶ್ರೀ ಗಣೇಶ ಮೂರ್ತಿಯ ಮೇಲೆ ಚಪ್ಪಲಿ ಎಸೆಯಲಾಯಿತು ಮತ್ತು ಕಲ್ಲು ತೂರಾಟ ಕೂಡ ನಡೆದಿದೆ. ಇದರಲ್ಲಿ ಒಂದು ಹುಡುಗಿ ಮತ್ತು ಮಹಿಳೆ ಗಾಯಗೊಂಡಿದ್ದಾರೆ. ಹಿಂದೂಗಳು ತಡರಾತ್ರಿ ವಿಸರ್ಜನೆಗಾಗಿ ಹೋಗುತ್ತಿರುವ ಈ ಘಟನೆ ನಡೆದಿದೆ. ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ರಾತ್ರಿ ೧೨.೩೦ ಗಂಟೆಗೆ ನೂಕುನುಗ್ಗಲು ಕೂಡ ನಡೆದಿದೆಯೆಂದು ತಿಳಿದು ಬಂದಿದೆ. ಈ ಘಟನೆಯ ನಂತರ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸಂಪಾದಕೀಯ ನಿಲುವು

  • ಹಿಂದುಗಳ ಮೆರವಣಿಗೆಯಲ್ಲಿ ನಡೆಯುವ ಮತಾಂಧರ ದಾಳಿಗಳನ್ನು ತಡೆಯುವದಕ್ಕಾಗಿ ಹಿಂದೂ ರಾಷ್ಟ್ರವೇ ಬೇಕು !
  • ಪೊಲೀಸರು ಹಿಂದುಗಳ ರಕ್ಷಣೆ ಮಾಡುಲು ಅಸಮರ್ಥವಾಗಿವೆ, ಇದೇ ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಮೆರವಣಿಗೆಯ ರಕ್ಷಣೆಗಾಗಿ ಹಿಂದುಗಳೇ ರಕ್ಷಣಾ ತಂಡಗಳನ್ನು ರೂಪಿಸಬೇಕು !