ಶಾಹಪುರ (ರಾಜಸ್ಥಾನ): ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಕೆರೆಯ ಬಳಿ ಸತ್ತ ಮೇಕೆಯ ಅವಶೇಷಗಳು ಪತ್ತೆ; ಉದ್ವಿಗ್ನತೆ

ಈ ಅವಶೇಷಗಳನ್ನು ಬೀದಿ ನಾಯಿಗಳು ತಂದು ಎಸೆದಿರುವುದು ಪೊಲೀಸರ ತನಿಖೆಯಿಂದ ಬಹಿರಂಗ

ಶಾಹಪುರ (ರಾಜಸ್ಥಾನ) – ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಿದ ಕೆರೆಯ ಬಳಿ ಸತ್ತ ಮೇಕೆಯ ಅವಶೇಷಗಳು ಪತ್ತೆಯಾದ ನಂತರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಯಾರೋ ಉದ್ದೇಶಪೂರ್ವಕವಾಗಿ ಈ ಅವಶೇಷಗಳನ್ನು ಎಸೆದಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

ಶಾಹಪುರ ಪೊಲೀಸ್ ಅಧೀಕ್ಷಕ ರಾಜೇಶ್ ಕವಂತ ಅವರು ಈ ಬಗ್ಗೆ ಮಾಹಿತಿ ನೀಡಿ, ಗಣಪತಿ ಮಂಟಪದ ಬಳಿ ಪ್ರಾಣಿಗಳ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ ತಕ್ಷಣವೇ ಸ್ಥಳಕ್ಕೆ ತಂಡವನ್ನು ಕಳುಹಿಸಿದ್ದೇವೆ. ತನಿಖೆ ವೇಳೆ ಸಿಸಿಟಿವಿಗಳನ್ನು ಪರಿಶೀಲಿಸಲಾಗಿದೆ. ಆಗ ಬೀದಿ ನಾಯಿಗಳು ಸತ್ತ ಮೇಕೆಯ ಮೂಳೆಗಳನ್ನು ಮುರಿದಿರುವುದು ಕಂಡು ಬಂದಿದೆ. ಇದೇ ಬೀದಿ ನಾಯಿಗಳು ಮೇಕೆಯ ಅವಶೇಷಗಳನ್ನು ಗಣಪತಿ ಮಂಟಪದ ಮುಂಭಾಗದ ಕೆರೆಯ ಬಳಿ ಎಸೆದಿದ್ದವು. ಇದನ್ನು ನಾವು ಪ್ರತಿಭಟನಾಕಾರರ ಗಮನಕ್ಕೆ ತಂದು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.