Krishna Janmabhoomi Case: ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಆಘಾತ !

ಹಿಂದೂಗಳ ಅರ್ಜಿಯ ವಿಚಾರಣೆ ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ನಡೆಸಲಿದೆ !

ಮಥುರಾ (ಉತ್ತರ ಪ್ರದೇಶ) – ಶ್ರೀ ಕೃಷ್ಣಜನ್ಮಭೂಮಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ವಿಚಾರಣೆಯಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

1. ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಈದ್ಗಾ ಮಸೀದಿ ಸಮಿತಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಉಚ್ಚ ನ್ಯಾಯಾಲಯವು ಹಿಂದೂ ಪಕ್ಷಗಳ ಅರ್ಜಿಯನ್ನು ವಿಚಾರಣೆಗೆ ಯೋಗ್ಯವೆಂದು ಸ್ವೀಕರಿಸಿತ್ತು. ಉಚ್ಚ ನ್ಯಾಯಾಲಯದ ತೀರ್ಪನ್ನು ಆಕ್ಷೇಪಿಸಿ ಮಸೀದಿ ಸಮಿತಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

2. ಸರ್ವೋಚ್ಚ ನ್ಯಾಯಾಲಯವು ಮಸೀದಿ ಸಮಿತಿಯ ಅರ್ಜಿಯ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿ ಉತ್ತರ ಕೇಳಿದೆ. ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಈಗ ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 4 ರಂದು ನಡೆಯಲಿದೆ.

3. ಆಗಸ್ಟ್ 1, 2024 ರಂದು, ಅಲಹಾಬಾದ್ ಉಚ್ಚ ನ್ಯಾಯಾಲಯವು ಶ್ರೀ ಕೃಷ್ಣಜನ್ಮಭೂಮಿ ಪ್ರಕರಣವನ್ನು ವಿಚಾರಣೆಗೆ ಯೋಗ್ಯವೆಂದು ಪರಿಗಣಿಸಿತ್ತು. ಉಚ್ಚ ನ್ಯಾಯಾಲಯವು ಶಾಹಿ ಈದ್ಗಾ ಮಸೀದಿಯ ಮಾಲೀಕತ್ವದ ಬಗ್ಗೆ ಹಿಂದೂ ಪಕ್ಷಗಳು ಸಲ್ಲಿಸಿದ ಎಲ್ಲಾ 15 ದಿವಾಣಿ ಪ್ರಕರಣಗಳ ವಿಚಾರಣೆ ನಡೆಸಿ ಮುಸ್ಲಿಮರು ಸಲ್ಲಿಸಿದ ಎಲ್ಲಾ ಐದು ಆಕ್ಷೇಪಣೆಗಳನ್ನು ತಿರಸ್ಕರಿಸಿತು. ಈ ತೀರ್ಪನ್ನು ಈದ್ಗಾ ಸಮಿತಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಇದೀಗ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.