Tirupati Laddoo Controversy : ತಿರುಪತಿ ಬಾಲಾಜಿಯ ಪ್ರಸಾದದ ಲಡ್ಡುವಿನಲ್ಲಿ ಹಸುಗಳ ಕೊಬ್ಬಿನ ಬಳಕೆ ! – ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಮೇಲೆ ಗಂಭೀರ ಆರೋಪ ಮಾಡಿದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಅಮರಾವತಿ (ಆಂಧ್ರಪ್ರದೇಶ) – ತಿರುಪತಿ ಬಾಲಾಜಿಯ ಪ್ರಸಾದ ಲಡ್ಡುವಿನಲ್ಲಿ ಹಸುಗಳ ಕೊಬ್ಬನ್ನು ಬಳಸುತ್ತಿದ್ದರು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ ಜಗತ್ತಿನಲ್ಲೇ ಪ್ರಸಿದ್ಧವಾಗಿದ್ದು ಅಲ್ಲಿ ನೀಡುವ ಪ್ರಸಾದದ ಲಡ್ಡು ಬಹಳ ಪವಿತ್ರ ಎಂದು ನಂಬಲಾಗಿದೆ.

ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಳೆದ 5 ವರ್ಷದಲ್ಲಿ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು, ಆಗ ಅವರು ತಿರುಮಲ ತಿರುಪತಿ ದೇವಸ್ಥಾನದ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ. ದೇವಸ್ಥಾನದಿಂದ ಮಾಡಲಾಗುವ ಅನ್ನದಾನದ ಗುಣಮಟ್ಟವು ಪಾತಾಳಕ್ಕೆ ಇಳಿದಿತ್ತು. ಅಲ್ಲಿನ ಲಡ್ಡು ಕೂಡ ಪವಿತ್ರ ಎಂದು ನಂಬಲಾಗುತ್ತದೆ. ಆದರೆ ಆ ಲಡ್ಡುವಿನಲ್ಲಿ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನ ಉಪಯೋಗ ಮಾಡಲಾಗುತ್ತಿತ್ತು. ನಮ್ಮ ಸರಕಾರ ಬಂದ ನಂತರ ನಾವು ಶುದ್ಧ ತುಪ್ಪದಲ್ಲಿಯೇ ಪ್ರಸಾದ ಲಡ್ಡು ತಯಾರಿಸಲು ಆರಂಭಿಸಿದ್ದೇವೆ ಹಾಗೂ ಅನ್ನದಾನದಲ್ಲಿ ನೀಡಲಾಗುವ ಆಹಾರದ ಗುಣಮಟ್ಟವನ್ನು ಕೂಡ ಸುಧಾರಿಸಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಆರೋಪ ಮಾಡದೆ ಈ ಬಗ್ಗೆ ಪೊಲೀಸರಲ್ಲಿ ಮುಖ್ಯಮಂತ್ರಿ ನಾಯ್ಡು ಅವರು ದೂರು ದಾಖಲಿಸಿ ಸಂಬಂಧಿತರಿಗೆ ಕಠಿಣ ಶಿಕ್ಷೆ ವಿಧಿಸಲು ಆದೇಶ ನೀಡಬೇಕೆಂದು ಹಿಂದೂಗಳಿಗೆ ಅನಿಸುತ್ತಿದೆ !

ತಿರುಮಲ ಪ್ರಸಾದದ ಕುರಿತು ಮುಖ್ಯಮಂತ್ರಿ ನಾಯ್ಡು ಅವರ ಹೇಳಿಕೆ ಅತ್ಯಂತ ದುರದೃಷ್ಟಕರ ! – ವೈ.ಎಸ್.ಆರ್.ಕಾಂಗ್ರೆಸ್

ರಾಜ್ಯಸಭಾ ಸದಸ್ಯ ವೈ.ವ್ಹಿ.ಸುಬ್ಬಾ ರೆಡ್ಡಿ

ವೈ.ಎಸ್.ಆರ್.ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ವೈ.ವ್ಹಿ.ಸುಬ್ಬಾ ರೆಡ್ಡಿ ಅವರು ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತ್ಯುತ್ತರ ನೀಡುತ್ತಾ, ಚಂದ್ರಬಾಬು ನಾಯ್ಡು ಅವರು ತಿರುಮಲದ ಪಾವಿತ್ರ್ಯಕ್ಕೆ ಮತ್ತು ಕೋಟ್ಯಾಂತರ ಹಿಂದುಗಳ ಶ್ರದ್ಧೆಗೆ ಗಂಭೀರ ಆಘಾತ ಮಾಡಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಅವರು ಮಾಡಿರುವ ಟಿಪ್ಪಣಿ ಅತ್ಯಂತ ದುರದೃಷ್ಟಕರವಾಗಿದೆ. ಈ ರೀತಿಯ ಪದಗಳು ಬಳಸುವುದು ಅಯೋಗ್ಯವಾಗಿದೆ. ಚಂದ್ರಬಾಬು ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಲು ಹಿಂದೆ ಮುಂದೆ ನೋಡಲಾರರು, ಇದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.

ಭಕ್ತರ ವಿಶ್ವಾಸ ದೃಢಗೊಳಿಸುವುದಕ್ಕಾಗಿ ನಾನು ಮತ್ತು ನನ್ನ ಕುಟುಂಬ ತಿರುಮಲ ಪ್ರಸಾದ ಪ್ರಕರಣದ ಸಾಕ್ಷಿದಾರನೆಂದು ದೇವರೆದರು ಪ್ರಮಾಣ ಮಾಡಲು ಸಿದ್ಧನಿದ್ದೇವೆ. ಚಂದ್ರಬಾಬು ಕೂಡ ತಮ್ಮ ಕುಟುಂಬ ಸಹಿತ ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ ಎಂದು ಸುಬ್ಬಾ ರೆಡ್ಡಿ ಅವರು ಸವಾಲೆಸೆದರು.

ಸಂಪಾದಕೀಯ ನಿಲುವು

ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆ ಮಾಡಲಾಗಿದೆಯೇ ಇಲ್ಲವೇ ಎಂಬುದರ ಉತ್ತರವನ್ನು ವೈ.ಎಸ್.ಆರ್. ಕಾಂಗ್ರೆಸ್ ನೀಡುವುದು ಮುಖ್ಯವಾಗಿದೆ !