ಸನಾತನ ಸಂಸ್ಥೆಯ ಕಾರ್ಯದ ಆರಂಭವು ಮೊದಲು ಸ್ಥೂಲದಿಂದ ಸೂಕ್ಷ್ಮದೆಡೆಗೆ ಮತ್ತು ಈಗ ಸೂಕ್ಷ್ಮದಿಂದ ಸ್ಥೂಲದೆಡೆಗೆ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಸನಾತನದ ಕಾರ್ಯವು ಮೊದಲು ಸ್ಥೂಲದಿಂದ ಆರಂಭವಾಯಿತು. ಅದರಲ್ಲಿ ಸತ್ಸಂಗವನ್ನು ತೆಗೆದುಕೊಳ್ಳುವುದು, ಪ್ರಚಾರಸಭೆಗಳನ್ನು ತೆಗೆದುಕೊಳ್ಳುವುದು, ‘ಸನಾತನ ಪ್ರಭಾತ’ ನಿಯತಕಾಲಿಕೆಯನ್ನು ಮುದ್ರಿಸುವುದು, ವಿವಿಧ ಅಭಿಯಾನಗಳನ್ನು ನಡೆಸುವುದು ಇತ್ಯಾದಿ ಕಾರ್ಯಗಳು ಆರಂಭವಾದವು. ಅನಂತರ ಕಾರ್ಯದ ವ್ಯಾಪ್ತಿಯು ಹೆಚ್ಚಳವಾದ ನಂತರ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯು ಹೆಚ್ಚು ಪ್ರಮಾಣದಲ್ಲಿ ಅರಿವಾಗತೊಡಗಿತು. ಅನಂತರ ಕೆಟ್ಟ ಶಕ್ತಿಗಳು ಕಾರ್ಯದಲ್ಲಿ ತರುವ ಅಡೆತಡೆಗಳು ದೂರವಾಗಿ ಕಾರ್ಯವು ಸರಿಯಾಗಿ ನಡೆಯಬೇಕು, ಎಂದು ವಿವಿಧ ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳು, ಉದಾ. ಆಧ್ಯಾತ್ಮಿಕ ಶುದ್ಧಿ ಮಾಡುವುದು, ದೃಷ್ಟಿ ತೆಗೆಯುವುದು, ಪ್ರಾರ್ಥನೆ, ನ್ಯಾಸ, ನಾಮಜಪ ಇತ್ಯಾದಿಗಳನ್ನು ಮಾಡಿ ಸಾಧಕರು ಸ್ಥೂಲಕ್ಕೆ ಸೂಕ್ಷ್ಮವನ್ನು ಜೋಡಿಸಿಕೊಂಡರು. ಈಗ ಸನಾತನದ ಸಂತರು ಮತ್ತು ಶೇ. ೬೦ ರಷ್ಟು ಮಟ್ಟಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಾಗಿರುವ ಸಾಧಕರು ಕಾರ್ಯಕ್ಕಾಗಿ ನಿರಂತರ (ನಿಯಮಿತವಾಗಿ) ನಾಮಜಪವನ್ನು ಮಾಡುತ್ತಿದ್ದಾರೆ. ಅವರ ಈ ನಾಮಜಪದಿಂದ ಸ್ಥೂಲದಿಂದ ನಡೆಯುತ್ತಿರುವ ಈ ಕಾರ್ಯವು ಈಗ ಅತ್ಯಧಿಕ ವೇಗದಿಂದ ನಡೆಯುತ್ತಿದೆ. ಇದರ ಮಹತ್ವಪೂರ್ಣ ಉದಾಹರಣೆಗಳೆಂದರೆ, ಕೊರೊನಾದ ಕಾಲದಲ್ಲಿ ಎಲ್ಲೆಡೆ ಸಂಚಾರ ನಿಷೇಧದಲ್ಲಿದ್ದಾಗ ಸಾಧಕರು ಹೊರಗೆ ಹೋಗಿ ಪ್ರಸಾರ ಮಾಡುವುದು ನಿಂತಿತು; ಆದರೆ ‘ಪ್ರಸಾರ ನಡೆಯಬೇಕು’, ಎಂದು ‘ಆನ್‌ಲೈನ್ ಸತ್ಸಂಗ’ವನ್ನು ಪ್ರಾರಂಭಿಸಿದಾಗ ಅದಕ್ಕೆ ಸಮಾಜದಿಂದ ಅತ್ಯುತ್ತಮ ಬೆಂಬಲ ದೊರೆಯಿತು. ಸನಾತನದ ವಿವಿಧ ಪ್ರಕಾಶನಗಳಿಗಾಗಿ ಈ ಸಂಚಾರ ನಿಷೇಧದ ಕಾಲದಲ್ಲಿಯೂ ಸಮಾಜದಿಂದ ಜಾಹೀರಾತುಗಳು ದೊರೆಯುತ್ತಲೇ ಇದ್ದವು. ಸ್ವಲ್ಪದರಲ್ಲಿ ಹೇಳುವುದಾದರೆ, ಕಾಲಕ್ಕನುಸಾರವಾಗಿ ನಡೆಯುತ್ತಿರುವ ಸನಾತನದ ಕಾರ್ಯವು ಈಶ್ವರನ ಕಾರ್ಯವಾಗಿರುವುದರಿಂದ ‘ದೇವರು ಸೂಕ್ಷ್ಮದಿಂದ ಸ್ಥೂಲದಲ್ಲಿನ ಕಾರ್ಯಗಳನ್ನು ಹೇಗೆ ಮಾಡಿಸಿಕೊಳ್ಳುತ್ತಾನೆ ?’, ಎಂಬುದಕ್ಕೆ ಇದು ಪ್ರತ್ಯಕ್ಷ ಉದಾಹರಣೆಯಾಗಿದೆ.’

– (ಪರಾತ್ಪರ ಗುರು) ಡಾ. ಆಠವಲೆ

ದೇವರ ಕೃಪೆಯನ್ನು ಅನುಭವಿಸಿದ ನಂತರ ಸಮಾಜದಲ್ಲಿ ಯಾರಾದರೂ ಹೊಗಳಿದರೆ ಅದರ ಬೆಲೆ ಶೂನ್ಯವೆನಿಸುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ