Floods: ಉತ್ತರಪ್ರದೇಶದಲ್ಲಿ ಧಾರಾಕಾರ ಮಳೆ ೨೧ ಜಿಲ್ಲೆಗಳ ೨೩೫ ಗ್ರಾಮಗಳು ಜಲ ಸಮಾಧಿ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ಮಳೆಯಿಂದಾಗಿ ೨೧ ಜಿಲ್ಲೆಗಳಲ್ಲಿನ ೨೩೫ ಗ್ರಾಮಗಳು ಯಮುನಾ ನೀರಿನಲ್ಲಿ ಮುಳುಗಿವೆ. ಈ ಜಿಲ್ಲೆಯಲ್ಲಿನ ೪ ಲಕ್ಷ ಜನರಿಗೆ ನೆರೆಯಿಂದ ಅಪಾಯ ಎದುರಾಗಿದೆ. ವಾರಣಾಸಿಯಲ್ಲಿನ ಗಂಗಾ ಅಪಾಯ ಮಟ್ಟದಿಂದ ಕೇವಲ ೪೪ ಸೆ.ಮಿ ಅಂತರದಲ್ಲಿದೆ. 85 ತಟಗಳು ಮತ್ತು ೨ ಸಾವಿರ ಸಣ್ಣ ಪುಟ್ಟ ದೇವಸ್ಥಾನಗಳು ನೀರಿನಲ್ಲಿ ಮುಳುಗಿವೆ.

ಬಂಗಾಲದಲ್ಲಿನ ೯ ಜಿಲ್ಲೆಗಳಲ್ಲಿ ನೆರೆ !

ಬಂಗಾಲದ ಬೀರಭೂಮ್, ಬಾಂಕುರಾ, ಹಾವಡಾ, ಹುಗಳಿ, ಉತ್ತರ ದಕ್ಷಿಣ ೨೪ ಪರಗಣ, ಪೂರ್ವ ಪಶ್ಚಿಮ ಮೇದಿನಿಪುರ, ಪಶ್ಚಿಮ ವರ್ಧಮಾನ ಜಿಲ್ಲೆಗಳಲ್ಲಿ ಕೂಡ ನೆರೆ ಬಂದಿದೆ. ಈ ನೆರೆಯಿಂದಾಗಿ ೨೪ ಗಂಟೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಮಧ್ಯಪ್ರದೇಶದಲ್ಲಿನ ೨೪ ಜಿಲ್ಲೆಗಳಲ್ಲಿ ಧಾರಾಕಾರ ಮಳೆ !

ಮಧ್ಯಪ್ರದೇಶದಲ್ಲಿನ ೨೪ ಕ್ಕಿಂತಲೂ ಹೆಚ್ಚಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ಮಳೆಗಾಲದಲ್ಲಿ ಇಲ್ಲಿಯವರೆಗೆ ೪೧ ಇಂಚು ಮಳೆ ಆಗಿದೆ. ಅದು ಸಾಮಾನ್ಯ ಮಳೆಗಿಂತಲೂ ಶೇಕಡ ೧೦ ರಷ್ಟು ಅಧಿಕವಾಗಿದೆ.

ರಾಜಸ್ಥಾನದಲ್ಲಿ ಧಾರಾಕಾರ ಮಳೆಯ ಎಚ್ಚರಿಕೆ !

ರಾಜಸ್ಥಾನದಲ್ಲಿನ ೨೨ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಮಧ್ಯಪ್ರದೇಶ ಮತ್ತು ಹರಿಯಾಣ ಸಹಿತ ೧೩ ರಾಜ್ಯಗಳಲ್ಲಿ ಧಾರಾಕಾರ ಮಳೆಯ ಸಾಧ್ಯತೆ ಇದೆ, ಎಂದು ಹವಾಮಾನ ಇಲಾಖೆಯು ಹೇಳಿದೆ.