More Power Bangladesh Army: ಬಾಂಗ್ಲಾದೇಶದ ಹಂಗಾಮಿ ಸರಕಾರದಿಂದ ಸೈನ್ಯಕ್ಕೆ ಹೆಚ್ಚಿನ ಅಧಿಕಾರ ನೀಡಿದೆ

ಢಾಕಾ (ಬಾಂಗ್ಲಾದೇಶ) – ಮಹಮ್ಮದ್ ಯುನೂಸ್ ಇವರ ನೇತೃತ್ವದ ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ದೇಶದಲ್ಲಿನ ಅರಾಜಕತೆ ತಡೆಯುವಲ್ಲಿ ವಿಫಲವಾಗಿದೆ. ಮಧ್ಯಂತರ ಸರಕಾರವು ದೇಶಾದ್ಯಂತ ಇರುವ ಸೈನ್ಯಕ್ಕೆ ವಿಶೇಷ ದಂಡಾಧಿಕಾರದ ಅಧಿಕಾರ ನೀಡಿದೆ. ಬಾಂಗ್ಲಾದೇಶದಲ್ಲಿನ ಸಾರ್ವಜನಿಕ ಆಡಳಿತ ಸಚಿವಾಲಯವು ಈ ಸಂದರ್ಭದಲ್ಲಿನ ಒಂದು ಸುತ್ತೋಲೆ ಪ್ರಸಾರ ಮಾಡಿದೆ. ಅದರ ಪ್ರಕಾರ ಸೈನ್ಯಾಧಿಕಾರಿ ಮುಂದಿನ ೬೦ ದಿನ ಬಾಂಗ್ಲಾದೇಶದಲ್ಲಿನ ಜಿಲ್ಲಾಡಂಡಾಧಿಕಾರಿಯ ಅಡಿಯಲ್ಲಿ ಕಾರ್ಯಕಾರಿ ದಂಡಾಧಿಕಾರಿ ಎಂದು ಕಾರ್ಯನಿರ್ವಹಿಸಬಹುದು. ಈ ಆದೇಶ ಸಂಪೂರ್ಣ ಬಾಂಗ್ಲಾದೇಶಕ್ಕಾಗಿ ಜಾರಿ ಆಗುವುದು.

ದಂಡಾಧಿಕಾರಿ ಅಧಿಕಾರ ದೊರೆತ ನಂತರ ಸೈನ್ಯಾಧಿಕಾರಿಗಳು ಜನರನ್ನು ಬಂಧಿಸುವುದು ಮತ್ತು ವಶಕ್ಕೆ ಪಡೆಯುವ ಅಧಿಕಾರ ಇರುವುದು. ಅಧಿಕಾರಿಗಳು ಸ್ವರಕ್ಷಣೆಗಾಗಿ ಅಥವಾ ಅಗತ್ಯವಿದ್ದರೆ ಗುಂಡಿನ ದಾಳಿ ಕೂಡ ನಡೆಸಬಹುದು. ಈ ನಿರ್ಣಯದ ಹಿಂದಿನ ಕಾರಣ ಸ್ಪಷ್ಟಪಡಿಸುತ್ತಾ, ಸರಕಾರದಲ್ಲಿನ ಕಾನೂನು ಸಲಹೆಗಾರ ಆಸಿಫ್ ನಜರುಲ್ ಇವರು, ನಾವು ಅನೇಕ ಸ್ಥಳಗಳಲ್ಲಿ ವಿಧ್ವಂಸಕಕೃತ್ಯ ಮತ್ತು ಪರಿಸ್ಥಿತಿ ಹದಗೆಟ್ಟಿರುವುದನ್ನು ನೋಡುತ್ತಿದ್ದೇವೆ. ಪರಿಸ್ಥಿತಿಯನ್ನು ಗಮನಿಸಿ ಸೈನ್ಯಾಧಿಕಾರಿಗಳಿಗೆ ದಂಡಾಧಿಕಾರಿ ಎಂದು ಅಧಿಕಾರ ನೀಡುತ್ತಿದ್ದೇವೆ. ಸೈನ್ಯಾಧಿಕಾರಿ ಅಧಿಕಾರದ ದುರುಪಯೋಗ ಮಾಡುವುದಿಲ್ಲ, ಎಂಬ ವಿಶ್ವಾಸ ಇದೆ ಎಂದು ಹೇಳಿದರು. ಒಮ್ಮೆ ಪರಿಸ್ಥಿತಿ ಸುಧಾರಿಸಿದರೆ ಸೈನ್ಯಾಧಿಕಾರಿಗಳು ದಂಡಾಧಿಕಾರಿಗಳಿಗೆ ಅಧಿಕಾರದ ಆವಶ್ಯಕತೆ ಅನಿಸುವುದಿಲ್ಲ. ಶೇಖ ಹಸೀನಾ ಇವರು ಆಗಸ್ಟ್ ೫ ರಂದು ದೇಶದಿಂದ ಪಲಾಯನ ಮಾಡಿದ ನಂತರ ಬಾಂಗ್ಲಾದೇಶದಲ್ಲಿ ಅರಾಜಕತೆಯ ವಾತಾವರಣ ಇದೆ ಪೊಲೀಸರ ಮೇಲೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ದಾಳಿಗಳು ನಡೆದಿವೆ. ಪೊಲೀಸ ಠಾಣೆ ಮತ್ತು ಪೊಲೀಸರ ವಾಹನಗಳು ಸುಡಲಾಗಿದೆ. ಜೀವ ರಕ್ಷಣೆಗಾಗಿ ಪೋಲಿಸರು ಅಡಿಗಿ ಕುಳಿತುಕೊಳ್ಳಬೇಕಾಯಿತು. ಬಾಂಗ್ಲಾದೇಶದ ಪೋಲಿಸ ಮೂಲಗಳಿಂದ ತಿಳಿದಿರುವ ಮಾಹಿತಿಯ ಪ್ರಕಾರ, ೬೬೪ ರಲ್ಲಿ ೪೫೦ ಪೊಲೀಸ ಠಾಣೆಗಳ ಮೇಲೆ ದಾಳಿಗಳು ನಡೆದಿವೆ.

ಸಂಪಾದಕೀಯ ನಿಲುವು

ಇದರ ಅರ್ಥ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಸರಕಾರ ಬರುವ ಸಾಧ್ಯತೆ ನಿಧಾನವಾಗಿ ಕೊನೆಗೊಂಡು ದೇಶ ಸೈನ್ಯದ ವಶಕ್ಕೆ ಹೋಗುವುದು ! ಪಾಕಿಸ್ತಾನದಲ್ಲಿ ಏನು ನಡೆಯಿತೋ ಅದೇ ಈಗ ಬಾಂಗ್ಲಾದೇಶದಲ್ಲಿ ನಡೆಯುವುದು, ಇದು ಸ್ಪಷ್ಟವಾಗಿದೆ !