ದೈನಿಕ ‘ಸನಾತನ ಪ್ರಭಾತ’ದ ಸೇವೆಯು ಸಾಧನೆ ಎಂದು ಆಗಲು ನಮ್ಮ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಕಳೆದ ೨೩ ವರ್ಷಗಳಿಂದ ನಿರಂತರವಾಗಿ ಮಾರ್ಗದರ್ಶನವನ್ನು ಮಾಡು ತ್ತಿದ್ದಾರೆ. ಸದ್ಯ ಅವರಿಗೆ ಅತ್ಯಂತ ಶಾರೀರಿಕ ತೊಂದರೆಗಳಾಗುತ್ತಿರುವಾಗಲೂ ಅವರು ದಿನದಲ್ಲಿನ ೩-೪ ಗಂಟೆಗಳನ್ನು ಕೊಟ್ಟು ವಿವರವಾಗಿ ದೈನಿಕ ಸನಾತನ ಪ್ರಭಾತವನ್ನು ಓದುತ್ತಾರೆ. ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಗೆ ಒಂದೇ ವಾರ್ತೆಯನ್ನು ಅನೇಕ ಬಾರಿ ಅಥವಾ ಸಂಪೂರ್ಣ ಲೇಖನವನ್ನು ಓದಿದರೂ ಯಾವ ತಪ್ಪುಗಳು ಗಮನಕ್ಕೆ ಬರುವುದಿಲ್ಲವೋ, ಅಂತಹ ತಪ್ಪುಗಳು ಕೇವಲ ಒಂದು ಸಲ ಓದಿ ಪರಾತ್ಪರ ಗುರು ಡಾಕ್ಟರರ ಗಮನಕ್ಕೆ ಬರುತ್ತವೆ. ಅವರು ಆ ಎಲ್ಲ ತಪ್ಪುಗಳನ್ನು ‘ಸನಾತನ ಪ್ರಭಾತ’ದ ಕಾರ್ಯಾಲಯಕ್ಕೆ ಕಳುಹಿಸುತ್ತಾರೆ. ತಪ್ಪುಗಳನ್ನು ತೋರಿಸಿ ಕೊಡುವ ಅವರ ಉದ್ದೇಶವು ಅತ್ಯಂತ ಕೃಪಾಳುವಾಗಿದೆ. ಸಾಧಕರ ನಿಷ್ಕಾಳಜಿ ಮತ್ತು ಗಾಂಭೀರ್ಯರಹಿತ ಸೇವೆಯಿಂದ ಈ ತಪ್ಪುಗಳಾಗುತ್ತವೆ. ಈ ತಪ್ಪುಗಳಿಂದ ಸಮಷ್ಟಿಯ ಮೇಲೆ ವಿಶೇಷ ಏನೂ ಪರಿಣಾಮವಾಗುವುದಿಲ್ಲ. ಇವುಗಳಲ್ಲಿನ ಹೆಚ್ಚಿನ ತಪ್ಪುಗಳು ಸಾಮಾನ್ಯ ವಾಚಕರ ಗಮನಕ್ಕೂ ಬರುವುದಿಲ್ಲ. ಹೀಗಿದ್ದರೂ ಈ ತಪ್ಪುಗಳಿಂದಾಗಿ ‘ಸನಾತನ ಪ್ರಭಾತ’ದ ಸೇವೆ ಮಾಡುವ ಸಾಧಕರ ಸಾಧನೆಯ ಹಾನಿಯಾಗುತ್ತಿದೆ. ತಪ್ಪುಗಳಿಂದಾಗಿ ಸಾಧನೆಯು ಖರ್ಚಾಗುವುದರಿಂದ ಅನೇಕ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದರೂ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗುತ್ತಿಲ್ಲ. ಸಾಧಕರು ಸಾಧನೆಯ ಮುಂದಿನ ಹಂತಕ್ಕೆ ಹೋಗಲು ಪರಾತ್ಪರ ಗುರು ಡಾಕ್ಟರರು ಸ್ವತಃ ನಿರಂತರವಾಗಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರ ತಳಮಳದಿಂದಾಗಿಯೇ ‘ಸನಾತನ ಪ್ರಭಾತ’ದ ಸೇವೆ ಮಾಡುವ ಸಾಧಕರಿಗೆ ಈಗ ಸ್ವಲ್ಪ ಪ್ರಮಾಣದಲ್ಲಿ ತಪ್ಪುಗಳ ಅರಿವಾಗತೊಡಗಿದೆ. ‘ತಪ್ಪುಗಳ ಪ್ರಮಾಣವು ಕಡಿಮೆಯಾಗಲು ಪರಾತ್ಪರ ಗುರು ಡಾಕ್ಟರರು ನಮ್ಮಿಂದ ಯಾವ ರೀತಿ ಪ್ರಯತ್ನಗಳನ್ನು ಮಾಡಿಸಿಕೊಂಡರು ?’, ಎಂಬುದನ್ನು ಈ ಲೇಖನದಲ್ಲಿ ನೀಡುವ ಪ್ರಯತ್ನವನ್ನು ಮಾಡಿದ್ದೇವೆ.
ಕಳೆದ ೨ ತಿಂಗಳುಗಳಿಗಿಂತ ಹೆಚ್ಚು ಸಮಯ ಮೇಲಿಂದ ಮೇಲೆ ನಮ್ಮ ತಪ್ಪುಗಳನ್ನು ತೋರಿಸಿ ಪರಾತ್ಪರ ಗುರು ಡಾಕ್ಟರರು ನಮಗೆ ಅಂತರ್ಮುಖತೆಯತ್ತ ಮಾರ್ಗಕ್ರಮಣ ಮಾಡಲು ಕಲಿಸುತ್ತಿದ್ದಾರೆ. ಈ ಲೇಖನದ ಬರವಣಿಗೆಯಲ್ಲಿ ಪ್ರಾಧಾನ್ಯತೆಯಿಂದ ಶುದ್ಧಲೇಖನ ಮತ್ತು ವ್ಯಾಕರಣಗಳ ತಪ್ಪುಗಳಿದ್ದರೂ, ಅವುಗಳ ಅಧ್ಯಯನ ಎಲ್ಲ ಪ್ರಕಾರದ ಸೇವೆಗಳನ್ನು ಮಾಡುವ ಎಲ್ಲೆಡೆಯ ಸಾಧಕರಿಗೆ ಉಪಯುಕ್ತವಾಗಿವೆ. ಯಾವುದಾದರೊಂದು ಸೇವೆಯನ್ನು ಪೂರ್ಣಗೊಳಿಸಲು ಅನೇಕ ಹಂತಗಳಲ್ಲಿ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅನೇಕ ಬಾರಿ ಯಾವುದಾದರೊಂದು ಸೇವೆಯ ಅಂತಿಮ ಫಲನಿಷ್ಪತ್ತಿ ಒಳ್ಳೆಯದಾಗಿದ್ದರೂ, ‘ಆ ಸೇವೆಯಿಂದ ಸಾಧಕರ ಸಾಧನೆಯಲ್ಲಿ ವೃದ್ಧಿ ಆಗುತ್ತದೆ’, ಎಂದೇನಿರುವುದಿಲ್ಲ, ಏಕೆಂದರೆ ಈಶ್ವರನ ಕೃಪೆ, ಗುರುಗಳ ಸಂಕಲ್ಪ ಮತ್ತು ಕಾಲದ ಆವಶ್ಯಕತೆಗನುಸಾರ ಸೇವೆಯು ಚೆನ್ನಾಗಿ ಆಗಿರುತ್ತದೆ. ಸೇವೆಯ ಫಲನಿಷ್ಪತ್ತಿ ಏನೇ ಆಗಿದ್ದರೂ, ಸಾಧಕರು ಯಾವಾಗಲೂ ಆತ್ಮಚಿಂತನೆಯನ್ನು ಮಾಡುವುದು ಆವಶ್ಯಕವಾಗಿದೆ. ‘ಸೇವೆಯನ್ನು ಮಾಡುವಾಗ ಪ್ರತಿಯೊಂದು ಹಂತದಲ್ಲಿ ಸೇವೆಯನ್ನು ತಪ್ಪುಗಳಿಲ್ಲದೇ ಮಾಡಲು ಪ್ರಯತ್ನವಾಯಿತೇ ? ಆ ಸೇವೆಯಿಂದ ಸಾಧಕನಲ್ಲಿ ಯಾವ ಗುಣಗಳು ಅಂಕುರಿಸುವುದು ಅಪೇಕ್ಷಿತವಾಗಿತ್ತು, ಅದಕ್ಕಾಗಿ ಪ್ರಯತ್ನವಾಯಿತೇ ? ನಮ್ಮಲ್ಲಿನ ಯಾವ ಸ್ವಭಾವದೋಷಗಳಿಂದ ನಾವು ಸೇವೆಯ ಆನಂದವನ್ನು ಅನುಭವಿಸಲು ಕಡಿಮೆ ಬೀಳುತ್ತೇವೆ ?’, ಎಂಬುದರ ಚಿಂತನೆ ಆಗುವುದು ಆವಶ್ಯಕವಾಗಿರುತ್ತದೆ. ಈ ರೀತಿ ಪ್ರಯತ್ನಗಳಾದಾಗ ಸೇವೆಯಿಂದ ಸಾಧನೆಯಾಗಿ ಸಾಧಕರ ಆಧ್ಯಾತ್ಮಿಕ ಮಾರ್ಗಕ್ರಮಣ ಶೀಘ್ರ ಗತಿಯಲ್ಲಾಗುತ್ತದೆ.
‘ಸಾಧನೆಯ ಒಂದು ಹಂತದಲ್ಲಿ ಸಿಲುಕಿದ ನಮ್ಮಂತಹ ಜೀವಗಳಿಗೆ ವೇಗವನ್ನು ನೀಡಲು ಪರಾತ್ಪರ ಗುರುದೇವರು ಸೂಕ್ಷ್ಮದಿಂದ ಎಷ್ಟು ಮತ್ತು ಏನೆಲ್ಲ ಪ್ರಯತ್ನವನ್ನು ಮಾಡಿದ್ದಾರೆ ?’, ಎಂಬುದು ನಮ್ಮಂತಹ ಅತಿಸಾಮಾನ್ಯ ಜೀವಗಳಿಗೆ ತಿಳಿಯಲು ಸಾಧ್ಯವೇ ಇಲ್ಲ. ‘ಅವರು ನಮ್ಮ ಸಾಧನೆಗೆ ವೇಗವನ್ನು ನೀಡಲು ಈ ಕಾಲಾವಧಿಯಲ್ಲಿ ಎಷ್ಟು ಕಷ್ಟವನ್ನು ತೆಗೆದುಕೊಂಡಿದ್ದಾರೆ ?’, ಎಂಬುದು ಸಮಷ್ಟಿಗೆ (ಎಲ್ಲರಿಗೂ) ಕಲಿಯಲು ಸಿಗಬೇಕೆಂದು ಆ ಅನುಭವಕಥನವನ್ನು ಇಲ್ಲಿ ನೀಡುತ್ತಿದ್ದೇವೆ. ‘ಈ ಲೇಖನವನ್ನು ಓದಿ ಎಲ್ಲ ಸಾಧಕರಿಗೆ ತಪ್ಪುರಹಿತ ಮತ್ತು ಪರಿಪೂರ್ಣ ಸೇವೆಯನ್ನು ಮಾಡಲು ಪ್ರೇರಣೆ ಸಿಗಲಿ’, ಎಂದು ಪರಾತ್ಪರ ಗುರುದೇವರ ಕೋಮಲ ಚರಣಗಳಲ್ಲಿ ಪ್ರಾರ್ಥನೆ !
೧. ದೈನಿಕ ‘ಸನಾತನ ಪ್ರಭಾತ’ದಲ್ಲಿನ ವ್ಯಾಕರಣ ಮತ್ತು ವಾಕ್ಯರಚನೆಗಳಂತಹ ಚಿಕ್ಕ ಚಿಕ್ಕ ತಪ್ಪುಗಳ ಅಧ್ಯಯನ ಮಾಡುವುದರ ಹಿಂದಿನ ಕಾರಣದೈನಿಕ ‘ಸನಾತನ ಪ್ರಭಾತ’ದಲ್ಲಿ ‘ತಪ್ಪು ವಾರ್ತೆಗಳು ಪ್ರಕಟವಾದವು’ ಎಂಬಂತಹ ಗಂಭೀರ ತಪ್ಪುಗಳಾಗುವುದಿಲ್ಲ, ವ್ಯಾಕರಣ ಮತ್ತು ವಾಕ್ಯರಚನೆಗಳಂತಹ ತಪ್ಪುಗಳಾಗುತ್ತವೆ. ಈ ತಪ್ಪುಗಳಿಂದ ವಾಚಕರಿಗೆ ಯಾವುದೇ ಹಾನಿಯಾಗುವುದಿಲ್ಲ. ಇದರಿಂದ ಕಳೆದ ೧೦-೧೫ ವರ್ಷಗಳಿಂದ ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರ ಪ್ರಗತಿಯು ಬೇಗನೆ ಆಗುವುದಿಲ್ಲ. ಅವರ ಜೀವನದಲ್ಲಿನ ಸಾಧನೆಯ ಸಮಯ ಈ ತಪ್ಪುಗಳಿಂದಾಗಿ ವ್ಯರ್ಥವಾಗಬಾರದೆಂದು, ನಾನು ಈ ತಪ್ಪುಗಳ ಅಧ್ಯಯನವನ್ನು ಮಾಡುತ್ತಿದ್ದೇನೆ. ೨ ಸಾಧಕರೇ, ನೀವು ಸಹ ಈ ಪದ್ಧತಿಯಿಂದ ನಿಮ್ಮ ಸೇವೆಯಲ್ಲಿನ ತಪ್ಪುಗಳ ಅಧ್ಯಯನ ಮಾಡಿದರೆ ನಿಮ್ಮ ಆಧ್ಯಾತ್ಮಿಕ ಪ್ರಗತಿಯೂ ಶೀಘ್ರ ಗತಿಯಲ್ಲಿ ಆಗುವುದು !‘ದೈನಿಕ ‘ಸನಾತನ ಪ್ರಭಾತ’ದ ಸಾಧಕರು ತಮ್ಮ ಸೇವೆಯಿಂದ ತಮ್ಮ ಸಾಧನೆಯಾಗಬೇಕೆಂದು ತಮ್ಮ ತಪ್ಪುಗಳನ್ನು ಗಾಂಭೀರ್ಯದಿಂದ ತಿಳಿದುಕೊಂಡು ಅವುಗಳನ್ನು ದೂರಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂಬುದು ಈ ಲೇಖನಮಾಲೆಯಿಂದ ಗಮನಕ್ಕೆ ಬರುವುದು. ಇದೇ ರೀತಿ ಗ್ರಂಥ, ಕಲಾ, ಸಂಗೀತ, ಲೆಕ್ಕಪತ್ರ, ಧ್ವನಿ-ಚಿತ್ರೀಕರಣ, ಸಂಶೋಧನೆ, ಪ್ರಸಾರ ಇತ್ಯಾದಿ ಸೇವೆಗಳನ್ನು ಮಾಡುವವರು ಮತ್ತು ಇತರ ಎಲ್ಲ ಸಾಧಕರು ತಮ್ಮ ಸೇವೆಗಳಿಗೆ ಸಂಬಂಧಪಟ್ಟ ತಪ್ಪುಗಳನ್ನು ಗಮನದಲ್ಲಿ ತೆಗೆದುಕೊಂಡು ಅಂತರ್ಮುಖರಾಗಿ ಅವುಗಳಿಗೆ ಈ ಪದ್ಧತಿಯಂತೆ ಪ್ರಕ್ರಿಯೆಯನ್ನು ಮಾಡಿದರೆ ಅವರ ತಪ್ಪುಗಳು ಸಹ ಕಡಿಮೆಯಾಗುವವು ಮತ್ತು ಅವರ ಆಧ್ಯಾತ್ಮಿಕ ಉನ್ನತಿಯೂ ಶೀಘ್ರ ಗತಿಯಲ್ಲಾಗುವುದು. – (ಪರಾತ್ಪರ ಗುರು) ಡಾ. ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ’ |
೧. ಪರಾತ್ಪರ ಗುರು ಡಾ. ಆಠವಲೆಯವರು ೨೦.೫.೨೦೨೧ ರಿಂದ ಪ್ರತಿದಿನ ದೈನಿಕ ‘ಸನಾತನ ಪ್ರಭಾತ’ನಲ್ಲಿನ ತಪ್ಪುಗಳನ್ನು ಗಮನಕ್ಕೆ ತರುವುದು
೨೦.೫.೨೦೨೧ ರಂದು ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತ’ದಲ್ಲಿನ ವ್ಯಾಕರಣ ಮತ್ತು ಸಂಕಲನದಲ್ಲಿನ ಅನೇಕ ತಪ್ಪುಗಳನ್ನು ದೈನಿಕ ಸನಾತನ ಪ್ರಭಾತದಲ್ಲಿ ಸೇವೆಯನ್ನು ಮಾಡುವ ಸಾಧಕರ ಗಮನಕ್ಕೆ ತಂದುಕೊಟ್ಟರು. ಆ ದಿನ ಪರಾತ್ಪರ ಗುರು ಡಾಕ್ಟರರು, ‘ವ್ಯಾಕರಣ ಮತ್ತು ಸಂಕಲನದ ಚಿಕ್ಕ ಚಿಕ್ಕ ತಪ್ಪುಗಳಿರುವ ‘ಸನಾತನ ಪ್ರಭಾತ’ದ ಮೊದಲ ಸಂಚಿಕೆ!’ ಎಂಬ ಸಂದೇಶವನ್ನು ಕಳುಹಿಸಿದರು. ಅವರು ಸಾಧಕರಿಗೆ ಈ ತಪ್ಪುಗಳ ಬಗ್ಗೆ ಸ್ವಭಾವದೋಷ-ನಿರ್ಮೂಲನ ಸತ್ಸಂಗದಲ್ಲಿ ಚರ್ಚೆಯನ್ನು ಮಾಡಿ ಪ್ರಾಯಶ್ಚಿತ್ತ ಅಥವಾ ತಮಗೆ ಸಾಧ್ಯವಿದ್ದಷ್ಟು ಶಿಕ್ಷೆಯನ್ನು ತೆಗೆದುಕೊಳ್ಳಲು ಹೇಳಿದರು. ‘ಈ ತಪ್ಪುಗಳನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಿಗೆ ತೋರಿಸಿ ಆಶ್ರಮದ ಫಲಕದ ಮೇಲೆಯೂ ಬರೆಯಬೇಕು, ಹಾಗೆಯೇ ಆ ತಪ್ಪುಗಳ ಜವಾಬ್ದಾರ ಸಾಧಕರ ಹೆಸರುಗಳನ್ನೂ ಬರೆಯಬೇಕು’ ಎಂಬ ಸಂದೇಶವನ್ನೂ ಅವರು ಕಳುಹಿಸಿದರು. ಪರಾತ್ಪರ ಗುರು ಡಾಕ್ಟರರು ಈ ಮೊದಲೂ ದೈನಿಕದಲ್ಲಿನ ತಪ್ಪುಗಳನ್ನು ತೋರಿಸಿದ್ದಾರೆ; ಆದರೆ ಅವರ ಈ ಸಂದೇಶವನ್ನು ಓದಿ ಸಾಧಕರು ಸ್ತಬ್ಧರಾದರು. ಗುರುದೇವರು ಹೇಳಿದಂತೆ ಸಾಧಕರು ‘ಫಲಕದ ಮೇಲೆ ತಪ್ಪುಗಳನ್ನು ಬರೆಯುವುದು, ತಪ್ಪುಗಳ ಜವಾಬ್ದಾರ ಸಾಧಕರ ಹೆಸರುಗಳನ್ನು ಬರೆಯುವುದು, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ತಪ್ಪುಗಳನ್ನು ತೋರಿಸಿ ‘ನಾವು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತೇವೆ ?’ ಎಂಬುದನ್ನು ತಿಳಿದುಕೊಳ್ಳುವುದು, ಹೀಗೆ ಎಲ್ಲವನ್ನೂ ಮಾಡಿದರು. ಅನಂತರ ಪ್ರತಿದಿನ ಪರಾತ್ಪರ ಗುರುದೇವರು ಇದೇ ರೀತಿ ದೈನಿಕದಲ್ಲಿನ ತಪ್ಪುಗಳನ್ನು ತಿಳಿಸತೊಡಗಿದರು.
೨. ಸಾಧಕರಿಗೆ ತಪ್ಪುಗಳ ಅರಿವಾದರೂ ಸಾಧಕರ ಸಾಧನೆಯ ಪ್ರಯತ್ನಗಳಲ್ಲಿ ವಿಶೇಷ ಹೆಚ್ಚಳವಾಗದಿರುವುದು
ಗುರುದೇವರಿಂದ ನಿಯಮಿತವಾಗಿ ನಮ್ಮ ತಪ್ಪುಗಳು ಬರತೊಡಗಿದಾಗ ‘ನಮ್ಮ ಸಾಧನೆಯಲ್ಲಿಯೇ ಏನೋ ಕಡಿಮೆ ಬೀಳುತ್ತಿದೆ’ ಎಂದು ಎಲ್ಲರ ಗಮನಕ್ಕೆ ಬರತೊಡಗಿತು; ಆದರೆ ನಮ್ಮ ಸಾಧನೆಯ ಪ್ರಯತ್ನಗಳಲ್ಲಿ ಹೆಚ್ಚಳವಾಗಿರಲಿಲ್ಲ. ‘ಕಳತೆ; ಪಣ ವಳತ ನಾಹಿ’ ಈ ಮರಾಠಿ ಮಾತಿನಂತೆ (ಭಾವಾರ್ಥ : ತಿಳಿಯುತ್ತದೆ; ಆದರೆ ಕೃತಿ ಆಗುವುದಿಲ್ಲ) ನಮ್ಮ ಸ್ಥಿತಿ ಆಗಿತ್ತು. ನಮಗೆ ತಪ್ಪುಗಳ ಅರಿವಾಗುತ್ತಿದ್ದರೂ, ಅವುಗಳನ್ನು ಸುಧಾರಿಸಲು ನಮ್ಮಿಂದ ವಿಶೇಷ ಪ್ರಯತ್ನವೇನೂ ಆಗುತ್ತಿರಲಿಲ್ಲ, ಆದುದರಿಂದ ನಮ್ಮಿಂದಾಗುವ ತಪ್ಪುಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇತ್ತು.
೩. ಪರಾತ್ಪರ ಗುರು ಡಾಕ್ಟರರು ಗಮನಕ್ಕೆ ತಂದುಕೊಟ್ಟ ತಪ್ಪುಗಳ ಬಗ್ಗೆ ‘ದೈನಿಕ ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರ ಸತ್ಸಂಗದಲ್ಲಿ ಮೇಲು ಮೇಲಿನ (ಗಾಂಭೀರ್ಯವಿಲ್ಲದೆ) ಚರ್ಚೆಯಾಗುವುದು
‘ದೈನಿಕ ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರ ನಿಯಮಿತವಾಗಿ ನಡೆಯುವ ಸತ್ಸಂಗದಲ್ಲಿ ಪರಾತ್ಪರ ಗುರು ಡಾಕ್ಟರರು ಗಮನಕ್ಕೆ ತಂದುಕೊಟ್ಟ ತಪ್ಪುಗಳ ಬಗ್ಗೆ ಚರ್ಚೆಯಾಗುತ್ತಿತ್ತು; ಆದರೆ ಆ ಚರ್ಚೆ ಅಪೂರ್ಣವಾಗಿರುತ್ತಿತ್ತು. ‘ನನಗನಿಸುತ್ತದೆ ಈ ತಪ್ಪು ನನ್ನಿಂದಾಗಿರಬೇಕು ಎಂದು ಹೇಳಿದರೆ ತಪ್ಪನ್ನು ಒಪ್ಪಿಕೊಂಡಂತೆ ಆಗುತ್ತದೆಯೇ ! ಹೀಗೆ ಹೇಳುವುದು ಎಷ್ಟು ಮೇಲುಮೇಲಿನದಾಗಿದೆ ಎಂಬುದನ್ನು ಈಶ್ವರನು ಈ ಕಾಲಾವಧಿಯಲ್ಲಿ ನಮ್ಮ ಗಮನಕ್ಕೆ ತಂದು ಕೊಟ್ಟನು. ನಿಜವಾದ ಅರ್ಥದಲ್ಲಿ ತಪ್ಪುಗಳನ್ನು ಸ್ವೀಕರಿಸುವುದೆಂದರೆ, ಆ ತಪ್ಪು ಪುನಃ ಆಗದಿರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದು ! ದೈನಿಕಕ್ಕೆ ಸಂಬಂಧಿಸಿದ ಸೇವೆಯನ್ನು ಮಾಡುವಾಗ ನಮ್ಮಿಂದಾಗಿರುವ ತಪ್ಪುಗಳ ಬಗ್ಗೆ ನಾವು ಚರ್ಚೆಯನ್ನು ಮಾಡುತ್ತಿದ್ದೆವು; ಆದರೆ ತಪ್ಪುಗಳನ್ನು ಸುಧಾರಿಸಲು ಆವಶ್ಯಕವಿರುವ ಮುಂದಿನ ಪ್ರಕ್ರಿಯೆಯು ನಮ್ಮಿಂದ ಗಾಂಭೀರ್ಯದಿಂದ ಆಗುತ್ತಿರಲಿಲ್ಲ. ನಮ್ಮಲ್ಲಿನ ಕೆಲವು ಸಾಧಕರು ಆ ತಪ್ಪುಗಳನ್ನು ಆಶ್ರಮದ ಫಲಕದ ಮೇಲೆ ಬರೆಯುತ್ತಿದ್ದರು; ಆದರೆ ಆ ತಪ್ಪುಗಳು ಪುನಃ ಆಗದಿರಲು ‘ಸ್ವಭಾವದೋಷದ ಮೂಲಕ್ಕೆ ಹೋಗುವುದು, ಅದಕ್ಕಾಗಿ ಗಾಂಭೀರ್ಯದಿಂದ ಮತ್ತು ಸಾತತ್ಯದಿಂದ ಪ್ರಯತ್ನಿಸುವುದು’ ನಮ್ಮಿಂದ ಆಗುತ್ತಿರಲಿಲ್ಲ. ‘ವ್ಯಾಕರಣದಲ್ಲಿನ ತಪ್ಪುಗಳೆಂದರೆ ನಿಷ್ಕಾಳಜಿಯಿಂದ ಆಗಿರುವ ತಪ್ಪುಗಳು’ ಎಂದು ಹೇಳುವುದು ಒಂದು ಅಭ್ಯಾಸವೇ ಆಗಿತ್ತು. ‘ಮುಂದಿನ ಬಾರಿ ಕಾಳಜಿಯಿಂದ ಓದೋಣ’ ಎಂದು ಹೇಳಿ ಆ ವಿಷಯವನ್ನು ಅಲ್ಲಿಯೇ ನಿಲ್ಲಿಸುತ್ತಿದ್ದೆವು.
೪. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರು ಸತ್ಸಂಗವನ್ನು ತೆಗೆದುಕೊಂಡು ಮಾರ್ಗದರ್ಶನ ಮಾಡಿದ ನಂತರ ತಪ್ಪುಗಳಾಗುವುದರ ಹಿಂದಿನ ಸ್ವಭಾವದೋಷಗಳು ಮತ್ತು ಅಹಂನ ಅನೇಕ ಅಡಚಣೆಗಳು ಸಾಧಕರ ಗಮನಕ್ಕೆ ಬರುವುದು
ನಮ್ಮನ್ನು ಈ ಸ್ಥಿತಿಯಿಂದ ಹೊರಗೆ ತರಲು ಪರಾತ್ಪರ ಗುರುದೇವರೇ ನಮಗೆ ಸಹಾಯ ಮಾಡಿದರು. ಪರಾತ್ಪರ ಗುರುದೇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ನಮ್ಮೆಲ್ಲ ಸಾಧಕರ ಸತ್ಸಂಗವನ್ನು ತೆಗೆದುಕೊಂಡು ಅಂತರ್ಮುಖರಾಗುವ ದೃಷ್ಟಿಯಿಂದ ನಮಗೆ ಮಾರ್ಗದರ್ಶನ ಮಾಡಿದರು. ‘ಅತಿಕಡಿಮೆ ಪ್ರಾಣಶಕ್ತಿ ಇರುವಾಗಲೂ ನಮಗೆ ತಪ್ಪುಗಳನ್ನು ತೋರಿಸಿ ಗುರುದೇವರು ಕೃಪೆಯ ಮಳೆಯನ್ನು ಹೇಗೆ ಸುರಿಸುತ್ತಿದ್ದಾರೆ !’ ಎಂಬುದರ ಬಗ್ಗೆ ಅವರು ನಮಗೆ ಅರಿವು ಮಾಡಿಕೊಟ್ಟರು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, ‘ನಿಷ್ಕಾಳಜಿತನ’ ಇದು ಒಂದು ಸಾಮೂಹಿಕ ಲಕ್ಷಣವಾಗಿದೆ. ‘ಪ್ರತ್ಯಕ್ಷದಲ್ಲಿ ಪುಟಗಳನ್ನು ಓದುವಾಗ ನಮ್ಮಿಂದ ನಿರ್ದಿಷ್ಟವಾಗಿ ಏನು ಆಗುತ್ತದೆ ? ಯಾವ ಕೊರತೆಗಳಿಂದ ತಪ್ಪುಗಳು ಬಿಟ್ಟುಹೋಗುತ್ತವೆ ? ಎಂಬುದರ ಅಧ್ಯಯನ ಮಾಡಿರಿ’ ಎಂದು ನಮಗೆ ಅರಿವು ಮಾಡಿಕೊಟ್ಟರು. ಅನಂತರ ಚಿಂತನೆಯನ್ನು ಮಾಡಿದಾಗ ‘ಸೇವೆಯನ್ನು ಮಾಡುವಾಗ ನಮ್ಮ ಮನಸ್ಸಿನಲ್ಲಿ ಇತರ ಅನೇಕ ವಿಚಾರಗಳಿರುವುದರಿಂದ ಸೇವೆಯಲ್ಲಿ ಮನಸ್ಸು ಏಕಾಗ್ರವಾಗದಿರುವುದು, ಆ ಸೇವೆಗೆ ಸಂಬಂಧವಿರದ ವಿಷಯಗಳ ಚರ್ಚೆಯನ್ನು ಮಾಡುವುದು, ಸೇವೆಯ ಸಮಯದಲ್ಲಿ ಹಾಸ್ಯ-ವಿನೋದ ಇತ್ಯಾದಿಗಳನ್ನು ಮಾಡುವುದರಿಂದ ಬಹಿರ್ಮುಖತೆ ಹೆಚ್ಚಾಗುವುದು’ ಮುಂತಾದ ಅನೇಕ ಅಂಶಗಳು ನಮ್ಮ ಗಮನಕ್ಕೆ ಬಂದವು. ಇವುಗಳೊಂದಿಗೆ, ‘ಸೇವೆಯನ್ನು ಮಾಡಬೇಕಾಗಿದೆ ಎಂದು ಮಾಡುವುದು’ ಮತ್ತು ಗಾಂಭೀರ್ಯವಿಲ್ಲದೇ ಮಾಡಿದ ಸೇವೆಯಿಂದ ‘ಸೇವೆಯಲ್ಲಿನ ಸೂಕ್ಷ್ಮ ಅಂಶಗಳು ಹೊಳೆಯದಿರುವುದು, ನಿಯೋಜನೆಯ ಅಭಾವದಿಂದ ಯಾವುದಾದರೊಂದು ವಾರ್ತೆಯನ್ನು ಅಥವಾ ಪುಟವನ್ನು ಓದಲು ಕಡಿಮೆ ಸಮಯವನ್ನು ಇಟ್ಟುಕೊಂಡಿದ್ದರಿಂದ ಗಡಿಬಿಡಿಯಿಂದ ಓದಿ ಸೇವೆಯನ್ನು ಮುಗಿಸುವುದು, ಪರಸ್ಪರರ ಬಗ್ಗೆ ಮನಸ್ಸಿನಲ್ಲಿ ಪೂರ್ವಗ್ರಹಗಳಿರುವುದರಿಂದ ಸೇವೆಯ ಬಗ್ಗೆ ಆವಶ್ಯಕವಾಗಿರುವ ಸಂಭಾಷಣೆಯೂ ಆಗದಿರುವುದು, ಕೊನೆಯ ತಪಾಸಣೆಯನ್ನು ಮಾಡುವ ಸಾಧಕನು ಸೇವೆಯಲ್ಲಿ ಗಮನಕ್ಕೆ ಬಂದ ಕೊರತೆಗಳನ್ನು (ತಪ್ಪುಗಳನ್ನು) ಪ್ರಾಥಮಿಕ ಸ್ತರದಲ್ಲಿ ಸೇವೆಯನ್ನು ಮಾಡುವ ಸಾಧಕರಿಗೆ ಹೇಳದಿರುವುದು, ಇತರರ ಅಭಿಪ್ರಾಯವನ್ನು ಪಡೆಯದೇ ತಮ್ಮ ಮನಸ್ಸಿನಿಂದ ನಿರ್ಣಯಗಳನ್ನು ತೆಗೆದುಕೊಳ್ಳುವುದು, ಇವುಗಳಂತಹ ಅನೇಕ ತಪ್ಪುಗಳು ಮತ್ತು ಅವುಗಳ ಹಿಂದಿನ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳು ನಮಗೆ ಅರಿವಾದವು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ‘ದೇವರ ಚರಣಗಳಲ್ಲಿ ಕ್ಷಮಾಯಾಚನೆಯನ್ನು ಮಾಡಿಯೇ ಸೇವೆಯನ್ನು ಆರಂಭಿಸಬೇಕು’ ಎಂದು ಹೇಳಿದ್ದರು. ಕ್ಷಮಾಯಾಚನೆಯಿಂದ ನಮ್ಮ ಮನಸ್ಸಿನಲ್ಲಿ ಖೇದ ನಿರ್ಮಾಣವಾಗಲು ಸಹಾಯವಾಯಿತು, ಹಾಗೆಯೇ ‘ನಮ್ಮಿಂದ ತಪ್ಪುಗಳಾಗುವುದರಿಂದ ಸಾಕ್ಷಾತ್ ಗುರುದೇವರಿಗೆ ಆ ತಪ್ಪುಗಳನ್ನು ತೋರಿಸಿಕೊಡಲು ಊರ್ಜೆ(ಶಕ್ತಿ)ಯನ್ನು ಖರ್ಚು ಮಾಡಬೇಕಾಗುತ್ತಿದೆ’ ಎಂಬ ಗಾಂಭೀರ್ಯವೂ ನಮ್ಮ ಗಮನಕ್ಕೆ ಬರತೊಡಗಿತು.
೫. ಸಾಧಕರ ತಪ್ಪುಗಳ ಪ್ರಮಾಣ ಕಡಿಮೆಯಾಗದಿರುವುದರಿಂದ ಪರಾತ್ಪರ ಗುರುದೇವರು ಮುಂದುಮುಂದಿನ ಹಂತದ ಮಾರ್ಗದರ್ಶನವನ್ನು ಮಾಡಿ ತಪ್ಪುಗಳನ್ನು ಸುಧಾರಿಸಲು ಹೆಚ್ಚು ತೀವ್ರತೆಯಿಂದ ಪ್ರಕ್ರಿಯೆಯನ್ನು ಮಾಡಿಸಿಕೊಳ್ಳುವುದು
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸ್ವತಃ ಸತ್ಸಂಗವನ್ನು ತೆಗೆದುಕೊಂಡು ದಿಶೆಯನ್ನು ನೀಡಿದುದರಿಂದ ಸಾಧಕರ ಪ್ರಯತ್ನಗಳು ಸ್ವಲ್ಪ ಪ್ರಮಾಣದಲ್ಲಿ ಆರಂಭವಾಗಿದ್ದರೂ, ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂನಿಂದಾಗಿ ತಪ್ಪುಗಳ ಪ್ರಮಾಣ ಕಡಿಮೆಯಾಗಲಿಲ್ಲ. ನಮ್ಮನ್ನು ಹೆಚ್ಚೆಚ್ಚು ಅಂತರ್ಮುಖಗೊಳಿಸಲು ಮತ್ತು ನಮ್ಮ ಸಾಧನೆಯ ಹಾನಿಯನ್ನು ತಡೆಗಟ್ಟಲು ಗುರುದೇವರೇ ನೇತೃತ್ವವನ್ನು ವಹಿಸಿದರು. ಅವರು ಮೇ ೨೦೨೧ ರಿಂದ ೨ ತಿಂಗಳುಗಳ ಕಾಲಾವಧಿಯಲ್ಲಿ ಆಗಾಗ ನಮಗೆ ಹೆಚ್ಚೆಚ್ಚು ಆಳವಾಗಿ ಅರಿವು ಮಾಡಿಕೊಡಲು ಮುಂದಿನಂತೆ ಸಂದೇಶಗಳನ್ನು ಕಳುಹಿಸಿದರು.
೫ ಅ. ಮೊದಲು ಅವರು ದೈನಿಕದಲ್ಲಿನ ವ್ಯಾಕರಣ ಮತ್ತು ಶುದ್ಧಲೇಖನ ಈ ಸಂದರ್ಭದಲ್ಲಿನ ತಪ್ಪುಗಳನ್ನು ‘ದೊಡ್ಡ ತಪ್ಪುಗಳು’ ಎಂದು ಹೇಳಿ ಅರಿವು ಮಾಡಿಕೊಡಲು ಆರಂಭಿಸಿದರು.
೫ ಆ. ‘ತಪ್ಪು ಮತ್ತು ಅವುಗಳ ಪ್ರಾಯಶ್ಚಿತ್ತ’ ಇವುಗಳನ್ನು ಲಿಖಿತ ಸ್ವರೂಪದಲ್ಲಿ ಪಡೆಯುವುದು ಮತ್ತು ಅದರಿಂದ ಸಾಧಕರ ಗಾಂಭೀರ್ಯ ಹೆಚ್ಚಾಗುವುದು : ಕೆಲವು ದಿನಗಳ ನಂತರ ಅವರು ‘ಯಾವ ಸಾಧಕರಿಂದ ತಪ್ಪುಗಳಾಗುತ್ತವೆಯೋ ಅವರ ಹೆಸರು ಮತ್ತು ಪ್ರಾಯಶ್ಚಿತ್ತವನ್ನು ಬರೆದು ನನಗೆ ನೋಡಲು ಕಳುಹಿಸಿ’ ಎಂದು ಹೇಳಿದರು. ‘ಸಾಕ್ಷಾತ್ ಗುರುದೇವರಿಗೆ ಪ್ರಾಯಶ್ಚಿತ್ತವನ್ನು ಬರೆದು ಕಳುಹಿಸುವುದು’ ಈ ವಿಚಾರದಿಂದಲೇ ಸಾಧಕರಿಂದ ತಪ್ಪುಗಳನ್ನು ಬರೆಯುವುದು ಮತ್ತು ಪ್ರಾಯಶ್ಚಿತ್ತ ತೆಗೆದುಕೊಳ್ಳುವುದರ ಗಾಂಭೀರ್ಯವು ಹೆಚ್ಚಾಯಿತು.
೫ ಇ. ‘ಸಾಧಕರು ಯೋಗ್ಯ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳಬೇಕು’ ಎಂಬುದಕ್ಕಾಗಿ ಆಗಾಗ ಮಾಡಿದ ಮಾರ್ಗದರ್ಶನ !
ನಾವು ಅವರಿಗೆ ಪ್ರತಿದಿನ ಪ್ರತಿಯೊಂದು ತಪ್ಪಿಗಾಗಿ ತೆಗೆದುಕೊಂಡ ಪ್ರಾಯಶ್ಚಿತ್ತವನ್ನು ಬರೆದು ಕಳುಹಿಸತೊಡಗಿದೆವು. ಆ ಸಮಯದಲ್ಲಿ ಸಾಧಕರು ಬರೆದ ಪ್ರಾಯಶ್ಚಿತ್ತವನ್ನು ಓದಿ ಅವರು ಆ ಬಗ್ಗೆಯೂ ಆಳವಾದ ಮಾರ್ಗದರ್ಶನವನ್ನು ಮಾಡಿದರು. ‘ಸಾಧಕರು ಪ್ರಾಯಶ್ಚಿತ್ತವನ್ನು ಪೂರ್ಣ ಮಾಡುತ್ತಿರುವರಲ್ಲ ?’ ಎಂದು ಸಹ ಅವರು ಕೇಳುತ್ತಿದ್ದರು. ಅವರು ಕೆಲವೊಮ್ಮೆ ‘ಯಾರಿಗೂ ಪ್ರಾಯಶ್ಚಿತ್ತದಿಂದಾಗಿ ತೊಂದರೆಯಾಗುತ್ತಿಲ್ಲವಲ್ಲ?’ ಎಂಬ ಮಾತೃವಾತ್ಸಲ್ಯದ ಸಂದೇಶವನ್ನೂ ಕಳುಹಿಸುತ್ತಿದ್ದರು. ಅವರು ಯಾವುದಾದರೊಂದು ಪ್ರಾಯಶ್ಚಿತ್ತದಿಂದ ಶಾರೀರಿಕ ತೊಂದರೆಯಾಗುತ್ತಿದ್ದರೆ ಅದನ್ನು ಬದಲಾಯಿಸಿ ತಮ್ಮ ಪ್ರಕೃತಿಗೆ ಅನುಕೂಲವಾಗಿರುವ ಇತರ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳಿದರು.
೫ ಇ ೧. ಯಾವ ತಪ್ಪಿಗೆ ಯಾವ ರೀತಿಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು ? : ಸಾಧಕರು ತಮ್ಮಿಂದಾದ ತಪ್ಪುಗಳಿಗಾಗಿ ಪ್ರಾಯಶ್ಚಿತ್ತವನ್ನು ಬರೆದುಕೊಟ್ಟಾಗ ‘ಯಾವ ತಪ್ಪುಗಳಿಗಾಗಿ ಯಾವ ರೀತಿಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು?’ ಈ ಬಗ್ಗೆಯೂ ಪರಾತ್ಪರ ಗುರು ಡಾಕ್ಟರರು ಮಾರ್ಗದರ್ಶನ ಮಾಡಿದರು. ಕೆಲವು ಸಾಧಕರು ಸಮಷ್ಟಿ ಸೇವೆಯಲ್ಲಾದ ತಪ್ಪುಗಳಿಗಾಗಿ ‘೧ ಗಂಟೆ ನಿಂತು ನಾಮಜಪವನ್ನು ಮಾಡುವೆನು’ ಈ ರೀತಿಯ ಪ್ರಾಯಶ್ಚಿತ್ತವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದರು. ಅದಕ್ಕೆ ಅವರು ‘ಹಾಸ್ಯಾಸ್ಪದ ಪ್ರಾಯಶ್ಚಿತ್ತ! ಸಮಷ್ಟಿ ಸೇವೆಯಲ್ಲಾದ ತಪ್ಪುಗಳ ಪಾಪಕ್ಷಾಲನೆಗಾಗಿ ಸೇವೆಗೆ ಸಂಬಂಧಿಸಿದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು’ ಎಂಬ ಸಂದೇಶವನ್ನು ಕಳುಹಿಸಿದರು.
೫ ಇ ೨. ಎಷ್ಟು ತೀವ್ರತೆಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು ? : ‘ಎಷ್ಟು ತೀವ್ರತೆಯ ಅಥವಾ ಎಷ್ಟು ಪ್ರಮಾಣದಲ್ಲಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು ?’ ಎಂಬುದನ್ನು ಸಹ ಶ್ರೀ ಗುರುಗಳೇ ಹೇಳಿದರು. ಓರ್ವ ಸಾಧಕನು ಒಂದು ತಪ್ಪಿಗಾಗಿ ‘೧೫ ನಿಮಿಷ ಹೆಚ್ಚು ಸೇವೆಯನ್ನು ಮಾಡುವೆನು’ ಎಂಬ ಪ್ರಾಯಶ್ಚಿತ್ತವನ್ನು ತೆಗೆದುಕೊಂಡಿದ್ದನು. ಅವನಿಗೆ ‘ಚಿಕ್ಕ ಮಕ್ಕಳಂತಹ ಪ್ರಾಯಶ್ಚಿತ್ತ’ ಎಂದು ಹೇಳಿ ಅವನಿಗೆ ಹೆಚ್ಚು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳಿದರು. ಆರಂಭದ ಕೆಲವು ದಿನಗಳಲ್ಲಿ ‘ಶುದ್ಧಲೇಖನದ ತಪ್ಪಾಗಿದೆ’ ಎಂದು ವಿಚಾರ ಮಾಡಿ ಸಾಧಕರು ‘೧ ದಿನ ೧ ಗಂಟೆ ಹೆಚ್ಚು ಸೇವೆಯನ್ನು ಮಾಡುವೆನು’ ಎಂಬ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಿದ್ದರು. ಆಗಲೂ ಪರಾತ್ಪರ ಗುರು ಡಾಕ್ಟರರು ಅದು ಕಡಿಮೆಯಾಗಿದೆ ಎಂದು ಅರಿವು ಮಾಡಿಕೊಟ್ಟರು. ಇಲ್ಲಿ ಒಂದು ಪ್ರಸಂಗವನ್ನು ಒತ್ತಿ ಹೇಳಬೇಕೆನಿಸುತ್ತದೆ. ಒಂದು ಚಿಕ್ಕ ತಪ್ಪಿಗಾಗಿ ಓರ್ವ ವಯಸ್ಸಾದ ಸಾಧಕಿಯು ‘೮ ದಿನ ೧ ಗಂಟೆ ಹೆಚ್ಚು ಸೇವೆಯನ್ನು ಮಾಡುವೆನು’ ಎಂದು ಮಧ್ಯಮ ತೀವ್ರತೆಯ ಪ್ರಾಯಶ್ಚಿತ್ತವನ್ನು ತೆಗೆದುಕೊಂಡಿದ್ದಳು. ಅದೇ ತಪ್ಪಿಗೆ ಇತರ ಸಾಧಕರು ‘೩ ದಿನ ೧ ಗಂಟೆ ಹೆಚ್ಚು ಸೇವೆ’, ‘೫ ದಿನ ೧ ಗಂಟೆ ಹೆಚ್ಚು ಸೇವೆ’ ಎಂಬ ಪ್ರಾಯಶ್ಚಿತ್ತಗಳನ್ನು ತೆಗೆದುಕೊಂಡಿದ್ದರು. ಅದಕ್ಕೆ ಪರಾತ್ಪರ ಗುರು ಡಾಕ್ಟರರು, ‘ವಯಸ್ಸಾದ ಸಾಧಕಿಯ ಪ್ರಾಯಶ್ಚಿತ್ತ ಇತರರಿಗಿಂತ ಏಕೆ ಹೆಚ್ಚು ? ಎಂದು ಕೇಳಿದರು. ಆಗ ನಾವು, ಸಾಧಕರು ತಮ್ಮ ಕ್ಷಮತೆಗನುಸಾರ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಿದ್ದಾರೆ, ಎಂದು ತಿಳಿಸಿದೆವು. ಅದಕ್ಕೆ ಪರಾತ್ಪರ ಗುರು ಡಾಕ್ಟರರು, “ಪ್ರಾಯಶ್ಚಿತ್ತವನ್ನು ತಮ್ಮ ಕ್ಷಮತೆಗನುಸಾರ ತೆಗೆದುಕೊಳ್ಳುವುದಿರುತ್ತದೆಯೋ ಅಥವಾ ತಪ್ಪಿನ ತೀವ್ರತೆಗನುಸಾರ ?” ಎಂದು ಕೇಳಿದರು. ‘ಸಾಧಕಿಗೆ ತುಂಬಾ ಖೇದವೆನಿಸಿದ್ದರಿಂದ ಅವಳು ಹೆಚ್ಚು ಪ್ರಾಯಶ್ಚಿತ್ತವನ್ನು ತೆಗೆದುಕೊಂಡಿದ್ದಳು, ಹೀಗಿದ್ದರೂ ‘ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವಾಗಲೂ ತಾರತಮ್ಯವಿರಬೇಕು’ ಎಂದು ನಮ್ಮ ಗಮನಕ್ಕೆ ಬಂದಿತು.
೫ ಇ ೩. ‘ಸಾಧಕರು ಪ್ರಾಯಶ್ಚಿತ್ತವನ್ನು ಯೋಗ್ಯ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆಯೇ ?’ ಎಂಬುದರ ಬಗ್ಗೆ ಕೇಳುವುದು : ಓರ್ವ ಸಾಧಕನು ‘ಸಾಯಂಕಾಲ ಪ್ರಸಾದವನ್ನು ಸೇವಿಸುವುದಿಲ್ಲ’ ಎಂಬ ಪ್ರಾಯಶ್ಚಿತ್ತವನ್ನು ತೆಗೆದುಕೊಂಡಿದ್ದನು. ಆಗ ಪರಾತ್ಪರ ಗುರು ಡಾಕ್ಟರರು, ‘ಪ್ರಸಾದವೆಂದರೆ ಸಾಯಂಕಾಲದ ಅಲ್ಪಾಹಾರ, ಎಂದು ಆ ಸಾಧಕನಿಗೆ ಗೊತ್ತಿದೆಯಲ್ಲ? ಪ್ರಸಾದವನ್ನು ಸೇವಿಸುವುದಿಲ್ಲವೆಂಬ ಪ್ರಾಯಶ್ಚಿತ್ತವನ್ನು ತೆಗೆದುಕೊಂಡು ಯಾರಾದರೂ ಕೋಣೆಗೆ ಹೋಗಿ ತಿಂಡಿಯನ್ನು ತಿನ್ನುತ್ತಿಲ್ಲವಲ್ಲ?’ ಎಂದು ಕೇಳಿದರು. ಈ ರೀತಿ ‘ಪ್ರಾಯಶ್ಚಿತ್ತವನ್ನು ಗಾಂಭೀರ್ಯದಿಂದ ಪೂರ್ಣ ಮಾಡುತ್ತಾರಲ್ಲ ?’ ಎಂಬುದರ ಬಗ್ಗೆಯೂ ಅವರು ಕೇಳುತ್ತಿದ್ದರು. ತಪ್ಪುಗಳಿಂದಾಗಿ ಸಾಧನೆ ಖರ್ಚಾಗುತ್ತದೆ. ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ತಪ್ಪುಗಳ ಪರಿಮಾರ್ಜನೆಯಾಗುತ್ತದೆ. ಇದರಿಂದ ಸಾಧಕರ ಸಾಧನೆಯು ತಪ್ಪುಗಳ ಪರಿಮಾರ್ಜನೆಗಾಗಿ ಖರ್ಚಾಗದೇ ಆಧ್ಯಾತ್ಮಿಕ ಉನ್ನತಿಗಾಗಿ ಉಪಯೋಗವಾಗುತ್ತದೆ. ಪರಾತ್ಪರ ಗುರು ಡಾಕ್ಟರರ ತಳಮಳವು ತಪ್ಪುಗಳಿಂದ ಸಾಧಕರ ಖರ್ಚಾಗುವ ಸಾಧನೆಯನ್ನು ಉಳಿಸುವುದಾಗಿದೆ. ಶ್ರೀ ಗುರುಗಳು ಸಾಧನೆಗಾಗಿ ‘ಸನಾತನ ಪ್ರಭಾತ’ದಂತಹ ಪ್ರಭಾವಿ ಮಾಧ್ಯಮವನ್ನು ನೀಡಿಯೂ ವೇಗದಿಂದ ಸಾಧನೆಯಲ್ಲಿ ವೃದ್ಧಿಯಾಗದಿರುವುದರ ಹಿಂದೆ ತಪ್ಪುಗಳು ಕಾರಣವಾಗಿವೆ. ಈ ಸಂಕಟದಿಂದ ಪಾರು ಮಾಡಲು ಪರಾತ್ಪರ ಗುರು ಡಾಕ್ಟರರು ಸ್ವತಃ ನಮಗೆ ಈ ಸಾಧನೆಯ ಪಾಠಗಳನ್ನು ಕಲಿಸುತ್ತಿದ್ದಾರೆ.
(ಮುಂದುವರಿಯುವುದು)
– ಶ್ರೀ. ಭೂಷಣ ಕೇರಕರ (ಆಧ್ಯಾತ್ಮಿಕ ಮಟ್ಟ ಶೇ. ೬೭), ಸಹಸಂಪಾದಕರು, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೮.೨೦೨೧)
ಈ ವಾರದಿಂದ ಹೊಸ ಲೇಖನಮಾಲೆ : ‘ಸಾಧಕರೇ, ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಪರಿಪೂರ್ಣ ಸೇವೆಯನ್ನು ಮಾಡಿರಿ !ಸೇವೆಯಲ್ಲಿನ ಚಿಕ್ಕ-ದೊಡ್ಡ ತಪ್ಪುಗಳಿಂದ ಸಾಧನೆಯ ಹಾನಿಯಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟು ತಪ್ಪುರಹಿತ ಮತ್ತು ಪರಿಪೂರ್ಣ ಸೇವೆ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಂದ ಹೇಗೆ ಪ್ರಯತ್ನ ಮಾಡಿಸಿಕೊಂಡರು, ಎಂಬುದನ್ನು ಹೇಳುವ ಲೇಖನಮಾಲೆ. |