ಹಿಮಾಚಲ ಪ್ರದೇಶದಲ್ಲಿ ಇಸ್ಲಾಂ ಸ್ವೀಕರಿಸಿದ ಬ್ರಾಹ್ಮಣ ಹುಡುಗಿ !

ಮುಸ್ಲಿಂ ಯುವಕನು ಬ್ರೇನ್ ವಾಷ್ ಮಾಡಿದ್ದಾನೆ ಎಂಬುದು ಕುಟುಂಬದವರ ಆರೋಪ

ಮಂಡಿ (ಹಿಮಾಚಲ ಪ್ರದೇಶ) – ಇಲ್ಲಿನ ಬ್ರಾಹ್ಮಣ ಕುಟುಂಬದ ಹುಡುಗಿಯೊಬ್ಬಳು ಇಸ್ಲಾಂನ್ನು ಸ್ವೀಕರಿಸಿದ್ದು ಅವಳು ಮನೆಯಲ್ಲಿ ನಮಾಜು ಮಾಡುತ್ತಾಳೆ. ಈ ಪ್ರಕರಣದಲ್ಲಿ ಹುಡುಗಿಯ ಕುಟುಂಬದವರು ಹೊರ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. “ನಮ್ಮ ಮಗಳು ಮನೆಯಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ನಮಾಜ ಪಠಣ ಇತ್ಯಾದಿ ಚಟುವಟಿಕೆಗಳನ್ನು ಮಾಡುತ್ತಿರುವುದರಿಂದ ಇಡೀ ಮನೆಯ ವಾತಾವರಣವು ಒತ್ತಡಮಯವಾಗಿದೆ. ನಮ್ಮ ಮಗಳ ಬ್ರೈನ್ ವಾಶ್ ಮಾಡಲಾಗಿದ್ದು, ಇದರ ಹಿಂದೆ ಒಬ್ಬ ಮುಸಲ್ಮಾನ ಯುವಕನ ಕೈವಾಡವಿದೆ” ಎಂದು ಹೇಳಿದ್ದಾರೆ.

ಈ ವಿಷಯದಲ್ಲಿ ದೊರೆತಿರುವ ಮಾಹಿತಿಯಂತೆ, ಮಂಡಿಯಲ್ಲಿನ ಈ ಹಿಂದೂ ಹುಡುಗಿಯು ಪಂಜಾಬಿನಲ್ಲಿ ಓದುತ್ತಿದ್ದಳು. ಪಂಜಾಬಿನಿಂದ ಬಂದ ನಂತರ ಅವರ ಮಗಳು ಇಸ್ಲಾಂಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸಿದಳು. ಈ ಪ್ರಕರಣದ ತನಿಖೆಯನ್ನು ಕೂಲಂಕುಷವಾಗಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಎಂದು ಸಂತ್ರಸ್ಥೆಯ ಕುಟುಂಬಸ್ಥರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಧರ್ಮಶಿಕ್ಷಣವನ್ನು ನೀಡಿದ್ದರೆ, ಅವರ ಮೇಲೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ! ಓರ್ವ ಮುಸ್ಲಿಂ ಹುಡುಗಿಯು ತನ್ನ ಮನೆಯಲ್ಲಿ ಹಿಂದೂ ಧರ್ಮಾನುಸಾರ ಪೂಜೆ-ಪುನಸ್ಕಾರ ಮಾಡುವುದನ್ನು ನೀವು ಕೇಳಿದ್ದೀರಾ ? ಹಿಂದೂಗಳು ಈಗಲಾದರೂ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಸಾಧನೆ ಮತ್ತು ಧರ್ಮಾಚರಣೆಯನ್ನು ಕಲಿಸಬೇಕು !