ಪ್ರಯಾಗರಾಜ್ (ಉತ್ತರ ಪ್ರದೇಶ) – ಅಲಹಾಬಾದ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಈ ಮಹತ್ವಪೂರ್ಣ ನಿರೀಕ್ಷಣೆ ನೊಂದಾಯಿಸಿದೆ. ನ್ಯಾಯಾಲಯವು, ಹಿಂದೂ ಪದ್ಧತಿಯಲ್ಲಿ ಆಗಿರುವ ವಿವಾಹವನ್ನು ಒಂದು ಒಪ್ಪಂದದಂತೆ ರದ್ದುಗೊಳಿಸಲಾಗುವುದಿಲ್ಲ ಅಥವಾ ವಿಸರ್ಜಿಸಲಾಗುವುದಿಲ್ಲ. ಹಿಂದೂ ಪದ್ಧತಿಯಿಂದ ಮಾಡಿರುವ ವಿವಾಹವು ಧಾರ್ಮಿಕ ಸಂಸ್ಕಾರಗಳನ್ನು ಆಧರಿಸಿದೆ. ಅದು ವಿಶೇಷ ಸಂದರ್ಭಗಳಲ್ಲಿ ಕಾನೂನುಬದ್ಧವಾಗಿ ಮಾತ್ರ ನಡೆಸಬಹುದಾಗಿದೆ. ಒಂದು ವೇಳೆ ಪತಿ ಅಥವಾ ಪತ್ನಿಯ ಮೇಲೆ ಸಂತಾನ ಇಲ್ಲದ ಆರೋಪವಿದ್ದರೆ, ಅದು ಪುರಾವೆಗಳ ಆಧಾರದ ಮೇಲೆ ಮಾತ್ರ ಸಾಬೀತು ಪಡಿಸಬಹುದು ಎಂದು ಹೇಳಿದೆ.
1. ಈ ಪ್ರಕರಣದಲ್ಲಿ 2006ರಲ್ಲಿ ವಿವಾಹವಾಗಿದ್ದ ದಂಪತಿಯ ಪತಿ ಭಾರತೀಯ ಸೇನೆಯಲ್ಲಿದ್ದನು. ಅವನು 2008 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನು. ತನ್ನ ಹೆಂಡತಿ ಬಂಜೆಯಾಗಿದ್ದಾಳೆ(ಸಂತಾನೋತ್ಪತ್ತಿ ಮಾಡಲಾರಳು) ಎಂದು ಪತಿ ಹೇಳಿಕೊಂಡಿದ್ದನು. ಈ ಆಧಾರದ ಮೇಲೆ, ಅವನು ವಿಚ್ಛೇದನವನ್ನು ಕೇಳಿದ್ದನು.
2. ಪತ್ನಿ ತನ್ನ ಮೊದಲ ಲಿಖಿತ ಹೇಳಿಕೆಯಲ್ಲಿ, ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದಳು. ಆದಾಗ್ಯೂ, 2010 ರಲ್ಲಿ ಪತ್ನಿಯು ವಿಚ್ಛೇದನವನ್ನು ವಿರೋಧಿಸುವ ಮತ್ತೊಂದು ಲಿಖಿತ ಹೇಳಿಕೆಯನ್ನು ಸಲ್ಲಿಸಿ, ಗಂಡನ ಬಂಜೆತನದ ಆರೋಪವನ್ನು ನಿರಾಕರಿಸಲು ದಾಖಲೆಗಳನ್ನು ಸಲ್ಲಿಸಿದಳು. ಅವಳು 2008 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲೇ ಒಂದು ಮಗುವಿಗೆ ಜನ್ಮ ನೀಡಿದ್ದು ಮತ್ತು 2010 ರಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಳು ಎನ್ನುವುದನ್ನು ಬಹಿರಂಗ ಪಡಿಸಿದಳು.
3. ಕೌಟುಂಬಿಕ ನ್ಯಾಯಾಲಯವು ಪತಿಯ ಆಕ್ಷೇಪಣೆಯನ್ನು ಒಪ್ಪಿಕೊಂಡು, ಹೆಂಡತಿಯ ಎರಡನೇ ಲಿಖಿತ ಹೇಳಿಕೆಯನ್ನು ನಿರ್ಲಕ್ಷಿಸಿತು. ಅದೇ ದಿನ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಪತಿಯ ಅರ್ಜಿಯನ್ನು ಪುರಸ್ಕರಿಸಿತು. ಈ ತೀರ್ಪನ್ನು ಪತ್ನಿಯು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಳು.