ಸಾಧನೆಯಲ್ಲಿ ತಮ್ಮ ಮಕ್ಕಳಿಂದ ಅದ್ವಿತೀಯ ಪ್ರಗತಿಯನ್ನು ಮಾಡಿಸಿಕೊಂಡ ಏಕಮೇವಾದ್ವಿತೀಯ ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ಓದುಗರಿಗೆ ತಮ್ಮ ಮಕ್ಕಳ ಮೇಲೆ ಸಂಸ್ಕಾರಗಳನ್ನು ಹೇಗೆ ಮಾಡಬೇಕು? ಎಂಬುದನ್ನು ತಿಳಿದುಕೊಳ್ಳಲು ಉಪಯುಕ್ತ ಲೇಖನಮಾಲೆ!

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

೧೯.೯.೨೦೨೧ ರಂದು ಅನಂತಚತುರ್ದಶಿ ಇತ್ತು. ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ಈ ದಿನ ಅನ್ನಸಂತರ್ಪಣೆಯನ್ನು ಮಾಡುತ್ತಿದ್ದರು. ಮಧ್ಯಪ್ರದೇಶದ ಇಂದೂರನಲ್ಲಿರುವ ಭಕ್ತವಾತ್ಸಲ್ಯ ಆಶ್ರಮದಲ್ಲಿ ಪ.ಪೂ. ಶ್ರೀ ಅನಂತಾನಂದ ಸಾಯೀಶರ (ಪ.ಪೂ.ಬಾಬಾರವರ ಗುರುಗಳು) ಹೆಸರಿನಲ್ಲಿ ನಡೆಯುತ್ತಿದ್ದ ಈ ಅನ್ನಸಂತರ್ಪಣೆ ಎಂದರೆ ಪ.ಪೂ. ಬಾಬಾರವರ ಶಿಷ್ಯರು ಮತ್ತು ಭಕ್ತರಿಗೆ ಆನಂದದ ಪರ್ವವೇ ಆಗಿರುತ್ತಿತ್ತು.  ಇಂತಹುದೇ ಒಂದು ಆನಂದದ ಪರ್ವವು ನನ್ನ ಜೀವನದಲ್ಲಿಯೂ ಬಂದಿತ್ತು. ಅದೆಂದರೆ ಪ.ಪೂ. ಬಾಬಾರವರು ೧೯೮೭ ನೇ ಇಸವಿಯಲ್ಲಿ ನನ್ನ ತಂದೆ ತೀ. (ತೀರ್ಥರೂಪ) ದಾದಾ ‘ಸಂತರಾಗಿದ್ದಾರೆ ಎಂದು ಹೇಳಿದ್ದರು. ಹೀಗೆ ಸಂತಪದವಿಯಲ್ಲಿ ವಿರಾಜಮಾನರಾಗಿರುವ ಪೂ.ದಾದಾ (ಪೂ.ಬಾಳಾಜಿ ವಾಸುದೇವ ಆಠವಲೆ) ರವರ ಬಗ್ಗೆ ಎಲ್ಲರಿಗೂ ಪರಿಚಯವಾಗಬೇಕೆಂದು ಈ ಲೇಖನಮಾಲೆಯನ್ನು ಈ ವಾರದಿಂದ ಪ್ರಾರಂಭಿಸುತ್ತಿದ್ದೇವೆ.

ಸಂಕಲನಕಾರರು : (ಪರಾತ್ಪರ ಗುರು) ಡಾ. ಜಯಂತ ಆಠವಲೆ

ಮನೋಗತ

‘ತೀ. ದಾದಾರವರ (ನನ್ನ ತಂದೆಯವರ) ಲೇಖನಗಳ ಆಧಾರದಲ್ಲಿ ನಾನು ಸಂಕಲನ ಮಾಡಿದ ಮತ್ತು ೨೦೧೪ ನೇ ಇಸವಿಯಲ್ಲಿ ಪ್ರಕಟಿಸಲಾದ ‘ಸುಗಮ ಅಧ್ಯಾತ್ಮಶಾಸ್ತ್ರ’ ಎಂಬ ೫ ಗ್ರಂಥಗಳ (೪ ಮರಾಠಿ ಮತ್ತು ೧ ಆಂಗ್ಲ ಭಾಷೆಯ) ಗ್ರಂಥಮಾಲೆಯನ್ನು ಮತ್ತೊಮ್ಮೆ ಓದುವಾಗ ನನಗೆ ಅವರ ಅನೇಕ ವೈಶಿಷ್ಟ್ಯಗಳು ಗಮನಕ್ಕೆ ಬಂದವು.

ನನ್ನ ಗುರುಗಳಾದ ಪ.ಪೂ.ಭಕ್ತರಾಜ ಮಹಾರಾಜರು ನನ್ನ ತಂದೆಯವರ ಸಂದರ್ಭದಲ್ಲಿ ಯಾವಾಗಲೂ ‘ಅವರಂತೂ ಸಂತರೇ ಆಗಿದ್ದಾರೆ!’ ಎಂದು ಹೇಳುತ್ತಿದ್ದರು, ಅವರು ಯಾವಾಗಲೂ ನನ್ನ ತಂದೆಯವರನ್ನು ಮಂಚದ ಮೇಲೆ ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಳ್ಳುತ್ತಿದ್ದರು. ನನ್ನ ತಂದೆಯವರಿಂದಾಗಿ ನನ್ನ ತಾಯಿಯೂ ಸಂತಪದವಿಯನ್ನು ತಲುಪಿದರು.

ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪೂ. ಬಾಳಾಜಿ ಆಠವಲೆ ಮತ್ತು ತಾಯಿ ಪೂ. (ಸೌ.) ನಲಿನಿ ಆಠವಲೆ

೧. ಸಂತರಾದ ತೀ. ದಾದಾ ಮತ್ತು ಸಂತರಾದ ಸೌ. ತಾಯಿ ಇವರಿಂದಾಗಿ ಅವರ ಐದೂ ಮಕ್ಕಳ ಸಾಧನೆಯಲ್ಲಿ ಆಗಿರುವ ಕಲ್ಪನಾತೀತ ಪ್ರಗತಿ !

ತೀ. ದಾದಾ ಮತ್ತು ಸೌ. ತಾಯಿಯವರಿಂದಾಗಿ ನಮ್ಮ ಮನೆಯ ವಾತಾವರಣವು ಆಧ್ಯಾತ್ಮಿಕವಾಗಿತ್ತು. ಅವರ ದಿನನಿತ್ಯದ ಸಹಜ ನಡೆನುಡಿಗಳಿಂದಲೂ ನಮ್ಮ ಮೇಲೆ ಸಾಧನೆಯ ಸಂಸ್ಕಾರಗಳಾದವು. ಅವರ ಸಂಸ್ಕಾರಗಳಿಂದಾಗಿಯೇ ನನ್ನ ಎಲ್ಲ ಸಹೋದರರ ಸಾಧನೆಯಲ್ಲಿ ಅಪ್ರತಿಮ ಪ್ರಗತಿಯಾಗಿದೆ.

ಹಿಂಬದಿ ನಿಂತವರಲ್ಲಿ (ಎಡದಿಂದ) ಪರಾತ್ಪರ ಗುರು ಡಾ. ಆಠವಲೆಯವರ ಕಿರಿಯ ತಮ್ಮ ೧. ಡಾ. ವಿಲಾಸ ೨. ಡಾ. ಸುಹಾಸ ಕುಳಿತವರಲ್ಲಿ (ಎಡದಿಂದ) ೩. ಸ್ವತಃ ಪರಾತ್ಪರ ಗುರು ಡಾ. ಆಠವಲೆ ೪. ಹಿರಿಯ ಅಣ್ಣ ಸದ್ಗುರು ಡಾ ವಸಂತ ೫. ಶ್ರೀ. ಅನಂತ. (೨೦೦೨ ವರ್ಷ)

೧ ಅ. ನನ್ನ ನಾಲ್ಕು ಮಂದಿ ಸಹೋದರರಲ್ಲಿ ಇಬ್ಬರು ಸಹೋದರರು ಸಂತರಾಗಿರುವುದು ಮತ್ತು ಇಬ್ಬರು ಶೇ. ೬೦ಕ್ಕಿಂತ ಅಧಿಕ ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವುದು

ಸಾಧಕನು ಶೇ. ೬೦ ರಿಂದ ೬೯ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ ಜನ್ಮ-ಮರಣದ ಚಕ್ರದಿಂದ ಮುಕ್ತನಾಗುತ್ತಾನೆ. ಶೇ. ೭೦ ರಿಂದ ೭೯ ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ ಸಂತನಾಗುತ್ತಾನೆ ಮತ್ತು ಶೇ. ೮೦ ರಿಂದ ೮೯ ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ ಸದ್ಗುರು ಪದವಿಯನ್ನು ಪಡೆಯುತ್ತಾನೆ.

೧. ನನ್ನ ಎಲ್ಲರಿಗಿಂತ ಹಿರಿಯ ಸಹೋದರರಾದ ತೀ. ದಿ. ಡಾ. ವಸಂತ : ಇವರು ೨೦೧೨ ನೇ ಇಸವಿಯಲ್ಲಿ ಸಂತ ಪದವಿಯನ್ನು ಪ್ರಾಪ್ತಮಾಡಿಕೊಂಡರು.

೨. ನನ್ನ ಎರಡನೇಯ ಕ್ರಮಾಂಕದ ಹಿರಿಯ ಸಹೋದರ ತೀ. ಅನಂತ : ಇವರು ೨೦೧೯ ನೇ ಇಸವಿಯಲ್ಲಿ ಸಂತ ಪದವಿಯನ್ನು ಪ್ರಾಪ್ತಮಾಡಿಕೊಂಡರು.

೩. ನನ್ನ ಕಿರಿಯ ಸಹೋದರ ದಿ. ಡಾ. ಸುಹಾಸ : ಇವರು ವರ್ಷ ೨೦೨೧ ನೇ ಇಸವಿಯಲ್ಲಿ  ಶೇ. ೬೪ ಆಧ್ಯಾತ್ಮಿಕ ಮಟ್ಟವನ್ನು ತಲುಪಿದರು.

೪. ನನ್ನ ಎಲ್ಲರಿಗಿಂತ ಕಿರಿಯ ಸಹೋದರ ವಿಲಾಸ : ಇವರ ಆಧ್ಯಾತ್ಮಿಕ ಪ್ರಗತಿಯೂ ಆಗುತ್ತಿದೆ.

ನಾವು ಅನೇಕ ಸಂತರ ಚರಿತ್ರೆಗಳನ್ನು ಓದುತ್ತೇವೆ, ಆದರೆ ಯಾವ ಸಂತರ ಚರಿತ್ರೆಯಲ್ಲಿಯೂ ಅವರ ಎಲ್ಲ ಮಕ್ಕಳು ಸಾಧನೆಯಲ್ಲಿ ಒಳ್ಳೆಯ ಪ್ರಗತಿಯನ್ನು ಮಾಡಿಕೊಂಡಿರುವುದು, ಓದಲು ಸಿಗುವುದಿಲ್ಲ. ಇದರಿಂದ ನನ್ನ ತಂದೆ-ತಾಯಿಯವರ ಅದ್ವಿತೀಯ ವೈಶಿಷ್ಟ್ಯ ಗಮನಕ್ಕೆ ಬರುತ್ತದೆ.

೨. ತೀ. ದಾದಾರವರ (ತಂದೆಯವರ) ಜೊತೆಯಲ್ಲಿರುವ ಸಾಧಕರಿಗೂ ಆಗಿರುವ ಲಾಭ !

ಮುಂಬಯಿಯ ಶೀವ ಎಂಬಲ್ಲಿ ನನ್ನ ಮನೆಯಲ್ಲಿ ಪೂ. ದಾದಾ ಮತ್ತು ಪೂ. ತಾಯಿಯವರು ಇರುವಾಗ ಕೆಲವು ಸಮಯ ಅಲ್ಲಿರುವ ಸಾಧಕರೂ ಅವರ ಸೇವೆಯನ್ನು ಮಾಡಿದರು. ಈ ಸಾಧಕರಿಗೂ ಅವರ ಸತ್ಸಂಗದ ಲಾಭವಾಗಿ ಅವರ ಆಧ್ಯಾತ್ಮಿಕ ಉನ್ನತಿಯೂ ಆಗಿದೆ, ಉದಾ. ಶ್ರೀ. ಸತ್ಯವಾನ ಕದಮ ಮತ್ತು ಕು. ಅನುರಾಧಾ ವಾಡೇಕರ ಇವರಿಬ್ಬರು ಸದ್ಗುರು ಪದವಿಯನ್ನು ಪ್ರಾಪ್ತಮಾಡಿಕೊಂಡಿದ್ದಾರೆ,  ಸೌ. ಭಕ್ತಿ ಖಂಡೆಪಾರಕರ ಮತ್ತು ಶ್ರೀ. ದಿನೇಶ ಶಿಂದೆ ಇವರು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ.

೩. ಸನಾತನ ಸಂಸ್ಥೆಯಲ್ಲಿ ಸಾಧನೆ ಮಾಡುವ ಕೆಲವು ಕುಟುಂಬದವರ ಉದಾಹರಣೆಗಳು !

ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವ ಅನೇಕ ಪರಿವಾರಗಳಲ್ಲಿ ಪೋಷಕರು ಮತ್ತು ಅವರ ಮಕ್ಕಳೂ ಒಳ್ಳೆಯ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುತ್ತಿದ್ದಾರೆ, ಉದಾ.

ಅ. ಪೂ. ಅಶೋಕ ಪಾತ್ರೀಕರರ ಪೂರ್ಣ ಕುಟುಂಬ ಸಾಧನೆಯಲ್ಲಿದೆ. ಅವರ ಇಬ್ಬರು ಪುತ್ರಿಯರು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದು, ಅವರ ಪತ್ನಿ, ಮಗ ಮತ್ತು ಸೊಸೆ ಇವರೂ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದಾರೆ.

ಆ. ಪೂ. (ಶ್ರೀಮತಿ) ರಾಧಾ ಪ್ರಭು ಇವರ ಸಂಪೂರ್ಣ ಕುಟುಂಬ ಸಾಧನೆಯಲ್ಲಿದೆ. ಅವರ ಮಗ, ಹಾಗೆಯೇ ಇಬ್ಬರು ಸೊಸೆಯಂದಿರು ಶೇ. ೬೦ ಕ್ಕಿಂತ ಅಧಿಕ ಮಟ್ಟದವರಾಗಿದ್ದು, ಅವರ ಮರಿಮಗ ಪೂ. ಭಾರ್ಗವರಾಮರು ಸನಾತನದ ಮೊದಲ ಬಾಲ ಸಂತರಾಗಿದ್ದಾರೆ. ಅವರ ಮೊಮ್ಮಗ ಮತ್ತು ಮೊಮ್ಮಗನ ಪತ್ನಿಯೂ ಸಾಧನೆಯಲ್ಲಿದ್ದಾರೆ.

ಇ. ಪೂ. (ಶ್ರೀಮತಿ) ನಿರ್ಮಲಾ ದಾತೆಯವರ ಸಂಪೂರ್ಣ ಕುಟುಂಬ ಸಾಧನೆಯಲ್ಲಿದೆ. ಅವರ ಹಿರಿಯ ಮಗ, ಹಿರಿಯ ಸೊಸೆ, ಹಾಗೆಯೇ ಮಗಳು ಶೇ. ೬೦ ಕ್ಕಿಂತ ಅಧಿಕ ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಂಡಿದ್ದು, ಅವರ ಕಿರಿಯ ಮಗ ಮತ್ತು ಕಿರಿಯ ಸೊಸೆಯೂ ಪೂರ್ಣವೇಳೆ ಸಾಧನೆಯಲ್ಲಿದ್ದಾರೆ.

ಈ. ಪೂ.(ಶ್ರೀಮತಿ) ಸುಶೀಲಾ ಮೋದಿಯವರ ಸಂಪೂರ್ಣ ಕುಟುಂಬ ಸಾಧನೆಯಲ್ಲಿದೆ. ಅವರ ಹಿರಿಯ ಪುತ್ರ, ಕಿರಿಯ ಸೊಸೆ ಹಾಗೆಯೇ ಇಬ್ಬರು ಮೊಮ್ಮಕ್ಕಳು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದವರಾಗಿದ್ದಾರೆ.

ಉ. ಪೂ. ರಮಾನಂದ ಗೌಡ ಇವರ ಪೂರ್ಣ ಕುಟುಂಬ ಸಾಧನೆಯಲ್ಲಿದೆ. ಅವರ ಪತ್ನಿ, ನಾದಿನಿ, ಅತ್ತೆ, ಮಾವ, ಅಲ್ಲದೇ ಚಿಕ್ಕಪ್ಪ, ಚಿಕ್ಕಮ್ಮ, ಅವರ ಇಬ್ಬರು ಮಕ್ಕಳು ಮತ್ತು ಅವರ ಪತ್ನಿಯರು, ಇವರೆಲ್ಲರೂ ಶೇ. ೬೦ ಕ್ಕಿಂತ ಅಧಿಕ ಮಟ್ಟದವರಾಗಿದ್ದಾರೆ. ಪೂ. ಅಣ್ಣನವರ ಇಬ್ಬರು ಮಕ್ಕಳು ಸಹ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ದೈವೀ ಬಾಲಕರಾಗಿದ್ದಾರೆ.

ಸನಾತನದಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿರುವ ಇಂತಹ ಅನೇಕ ಪರಿವಾರಗಳಿದ್ದು, ಅವರೆಲ್ಲರೂ ಒಳ್ಳೆಯ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ಲೇಖನವನ್ನು ಓದಿ ಕೆಲವು ಓದುಗರಿಗಾದರೂ ಸಾಧನೆ ಮಾಡಲು ಮತ್ತು ಕುಟುಂಬದವರಿಂದ ಸಾಧನೆಯನ್ನು ಮಾಡಿಸಿಕೊಳ್ಳಲು ಮಾರ್ಗದರ್ಶನ ಸಿಕ್ಕಿದರೆ, ಈ ಲೇಖನ ಸಾರ್ಥಕವಾಗುವುದು !

– (ಪರಾತ್ಪರ ಗುರು ಡಾ. ಆಠವಲೆ (೧೪.೯.೨೦೨೧)  

(ಮುಂದುವರಿಯುವುದು)