ಭಾರತವು ವ್ಯಾಪಾರ ಸಂಬಂಧಗಳಲ್ಲಿ ಅನುಚಿತವಾಗಿ ವರ್ತಿಸುತ್ತಿದೆ ! – ಡೊನಾಲ್ಡ್ ಟ್ರಂಪ್ ಆರೋಪ

ವಾಷಿಂಗ್ಟನ್ (ಅಮೆರಿಕ) – ಭಾರತದ ನೀತಿಗಳು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳಿಗೆ ಅಡ್ಡಿಯಾಗುತ್ತಿದ್ದು ಭಾರತವು ಅನುಚಿತವಾಗಿ ವರ್ತಿಸುತ್ತಿದೆ, ಎಂದು ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಪ್ರಸ್ತುತ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. “ಮುಂದಿನ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು ಈ ಬಗ್ಗೆ ಚರ್ಚೆ ಮಾಡುವುದಾಗಿ ಅವರು ಹೇಳಿದ್ದಾರೆ. ಆದರೆ, ಈ ಸಭೆ ಎಲ್ಲಿ ನಡೆಯಲಿದೆ ? ಈ ವಿಷಯದ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಅಮೇರಿಕಾದ ಪ್ರಸ್ತುತ ಅಧ್ಯಕ್ಷ ಜೋ ಬೈಡೆನ್ ಅವರು ಸೆಪ್ಟೆಂಬರ್ 21 ರಂದು ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ಇವುಗಳ ನಾಯಕರ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ. ಏಷ್ಯಾ ಖಂಡದಲ್ಲಿ ಚೀನಾದ ಪ್ರಭಾವವನ್ನು ಮುರಿದು ಭಾರತ ತನ್ನದೇ ಆದ ಸ್ಥಾನವನ್ನು ಸೃಷ್ಟಿಸುತ್ತಿದೆ, ಎಂಬ ಭಾವನೆಯನ್ನು ಅಮೆರಿಕದಲ್ಲಿನ ಪರಿಣಿತ ತಂಡದವರು ವ್ಯಕ್ತಪಡಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಅಮೆರಿಕಾದ ಯಾವುದೇ ನಾಯಕರು ಎಂದಿಗೂ ಭಾರತಕ್ಕೆ ನಿಷ್ಠರಾಗಿ ಇರುವುದಿಲ್ಲ, ಇದನ್ನು ಭಾರತೀಯರು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು !