ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂಕರು ಮತ್ತು ಹಿಂದುತ್ವನಿಷ್ಠರಿಗೆ ವಿನಂತಿ
೧. ಸಾಧನೆಯನ್ನು ಮಾಡುವಾಗ ಬರುವ ಅನುಭೂತಿಗಳು ನಾವು ಸಾಧನಾಮಾರ್ಗದಲ್ಲಿ ಯೋಗ್ಯ ರೀತಿಯಲ್ಲಿ ಸಾಗುತ್ತಿರುವುದರ ಪ್ರತೀಕವಾಗಿರುತ್ತದೆ. ಆದುದರಿಂದ ‘ಸಾಧನೆಗಾಗಿ ಏನು ಪ್ರಯತ್ನ ಮಾಡಿದ್ದರಿಂದ ನಮಗೆ ಈ ಅನುಭೂತಿ ಬಂದಿತು ?’, ಎಂದು ತಿಳಿದುಕೊಳ್ಳುವುದು ಮಹತ್ವದ್ದಾಗಿರುತ್ತದೆ. ಅದು ಇತರ ಸಾಧಕರಿಗೂ ತಿಳಿದರೆ ಅವರಿಗೂ ಈ ಅನುಭೂತಿಗಳಿಂದ ಕಲಿಯಲು ಸಿಗುತ್ತದೆ.
೨. ಕೆಲವೊಮ್ಮೆ ನಮಗೆ ಬಂದ ಅನುಭೂತಿ ಇತರರಿಗೂ ಬಂದಿದ್ದರೂ, ‘ಅದು ನಿರ್ದಿಷ್ಟವಾಗಿ ಯಾವ ಕಾರಣದಿಂದ ಬಂದಿದೆ ?’, ಎಂದು ಅವರಿಗೆ ತಿಳಿಯುವುದಿಲ್ಲ. ನಮ್ಮ ಅನುಭೂತಿಯನ್ನು ಓದಿದಾಗ ಅವರಿಗೆ ಅದರ ಕಾರಣ ತಿಳಿಯಬಹುದು.
೩. ಒಬ್ಬ ಸಾಧಕನು ಪ್ರಯತ್ನಗಳ ಒಂದು ಹಂತದಲ್ಲಿ ನಿಂತಿದ್ದರೆ, ಅವನಿಗೆ ಮುಂದಿನ ಹಂತದ ಅನುಭೂತಿಯನ್ನು ಓದಿ ಸಾಧನೆಯನ್ನು ಮಾಡಲು ಸ್ಫೂರ್ತಿ ಸಿಗುತ್ತದೆ.
೪. ಈ ಅನುಭೂತಿಗಳ ಮಾಧ್ಯಮದಿಂದ ಸಮಾಜಕ್ಕೂ ಅಧ್ಯಾತ್ಮವನ್ನು ಬಿಡಿಸಿ ಹೇಳಬಹುದು. ಒಂದೇ ಅನುಭೂತಿ ಅನೇಕ ಸಾಧಕರಿಗೆ ಬಂದಿದ್ದರೆ, ‘ಅಧ್ಯಾತ್ಮದಲ್ಲಿನ ಯಾವುದಾದರೊಂದು ತತ್ತ್ವವು ಹೇಗೆ ಯೋಗ್ಯವಾಗಿದೆ ?’, ಎಂಬುದು ಅದರಿಂದ ಸಿದ್ಧವಾಗುತ್ತದೆ ಮತ್ತು ಅದನ್ನು ಬುದ್ಧಿಜೀವಿಗಳಿಗೆ ಹೇಳಲು ಸಾಧ್ಯವಾಗುತ್ತದೆ.
೫. ಇದರಲ್ಲಿ ಮಹತ್ವದ ಭಾಗವೆಂದರೆ ಅನುಭೂತಿಯನ್ನು ಬರೆದು ಕೊಡುವಾಗ ‘ಗುರುಗಳು ಕಲಿಸಿದಸಾಧನೆ ಮತ್ತು ಅವರ ಕೃಪೆಯಿಂದ ಈ ಅನುಭೂತಿ ಬಂದಿತು’, ಎಂಬ ಕೃತಜ್ಞತಾಭಾವವು ಅದರಿಂದ ವ್ಯಕ್ತವಾಗಬೇಕು. ಇದರಿಂದ ‘ನನ್ನ ಪ್ರಯತ್ನಗಳಿಂದ ನನಗೆ ಈ ಅನುಭೂತಿ ಬಂದಿತು’, ಎಂಬ ಕರ್ತೃತ್ವ ತೆಗೆದುಕೊಳ್ಳಲೂ ಆಗುವುದಿಲ್ಲ.’
– (ಪರಾತ್ಪರ ಗುರು) ಡಾ. ಆಠವಲೆ (೨.೮.೨೦೨೧)
ಲೇಖನವನ್ನು ಕಳುಹಿಸಲು ಬೇಕಾದ ಗಣಕೀಯ ವಿಳಾಸ : [email protected] ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ೨೪/ಬಿ, ಸನಾತನ ಆಶ್ರಮ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ – ೪೦೩೪೦೧ |