ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಸಾಧನೆಯ ಮಹತ್ವ

‘ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ‘ರೋಗವೇ ಬರದಂತೆ’ ಕಾಳಜಿ ವಹಿಸುವುದು ಹೆಚ್ಚು ಯೋಗ್ಯ’,’ (Prevention is better than cure)’ ಎಂಬ ಆಶಯದ ನಾಣ್ನುಡಿ ಇದೆ. ಅದರಂತೆ ಅಪರಾಧ ಮಾಡುವ ರಜ-ತಮ ಪ್ರಧಾನ ಅಪರಾಧಿಗಳಿಗೆ ಅಪರಾಧ ಮಾಡಿದ ನಂತರ ಶಿಕ್ಷೆ ನೀಡುವುದಕ್ಕಿಂತ ‘ಅವರಿಂದ ಅಪರಾಧವಾಗದಂತೆ’, ಮೊದಲೇ ತೀವ್ರ ಸಾಧನೆಯನ್ನು ಮಾಡಿಸಿಕೊಳ್ಳಿರಿ !

ಈಶ್ವರಪ್ರಾಪ್ತಿಗಾಗಿ ತನು-ಮನ-ಧನದ ತ್ಯಾಗ ಮಾಡುವುದಿರುತ್ತದೆ

‘ಈಶ್ವರಪ್ರಾಪ್ತಿಗಾಗಿ ತನು-ಮನ-ಧನದ ತ್ಯಾಗ ಮಾಡುವುದಿರುತ್ತದೆ. ಆದುದರಿಂದ ಜೀವನವನ್ನು ಧನ ಗಳಿಸುವುದರಲ್ಲಿಯೇ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಧನದೊಂದಿಗೆ ತನು ಹಾಗೂ ಮನ ಇವುಗಳನ್ನೂ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ’.

ಶ್ರದ್ಧಾಹೀನ ಮತ್ತು ಬುದ್ಧಿವಾದಿ ಸಮಾಜಕ್ಕೆ ವಿಜ್ಞಾನದ ಆಧಾರದಲ್ಲಿ ಅಧ್ಯಾತ್ಮವನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ

ಹಿಂದಿನ ಕಾಲದಲ್ಲಿ ಶಬ್ದಪ್ರಮಾಣ(ಹೇಳಿರುವುದನ್ನು ಪೂರ್ಣವಾಗಿ ಸ್ವೀಕರಿಸುವುದು) ಆಗುತ್ತಿದ್ದುದರಿಂದ ಎಲ್ಲರಿಗೆ ಋಷಿ-ಮುನಿಗಳು ಹಾಗೂ ಗುರುಗಳು ಮುಂತಾದವರು ಹೇಳಿದಂತಹ ಜ್ಞಾನದ ಮೇಲೆ ಶ್ರದ್ಧೆ ಇರುತ್ತಿತ್ತು. ಈಗ ಅವರ ಮೇಲೆ ಶ್ರದ್ಧೆಯನ್ನಿಡದೆ ವಿಜ್ಞಾನದ ಮೇಲೆ ಇಡುತ್ತಿರುವುದರಿಂದ ಸನಾತನ ಸಂಸ್ಥೆ ಹಾಗೂ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡಿ ಅಧ್ಯಾತ್ಮವನ್ನು ಸಿದ್ಧಪಡಿಸಬೇಕಾಗುತ್ತಿದೆ.

ಬುದ್ಧಿಜೀವಿ ಮನುಷ್ಯನಿಗೆ ಬುದ್ಧಿಯಿಂದ ದೇವರನ್ನು ತಿಳಿದುಕೊಳ್ಳಲಿಕ್ಕಾಗಿ ವಿಜ್ಞಾನದ ನಿರ್ಮಿತಿಯಾಗಿದೆ

ಕಾಲಾನುರೂಪ ಮನುಷ್ಯನ ಆಧ್ಯಾತ್ಮಿಕ ಮಟ್ಟವು ಕಡಿಮೆ ಯಾಗಲಾರಂಭಿಸಿದಾಗ ಮನುಷ್ಯನಿಗೆ ಈಶ್ವರನ ಅನುಸಂಧಾನದಲ್ಲಿದ್ದು ಭಾವದ ಸ್ಥಿತಿಗೆ ಹೋಗುವುದು, ದೇವರನ್ನು ಅನುಭವಿಸಲು ಅಸಾಧ್ಯವಾಗತೊಡಗಿತು. ಪ್ರತಿಯೊಂದು ವಿಷಯವು ಬುದ್ಧಿಯ ಮಟ್ಟದಲ್ಲಿ ಅಭ್ಯಾಸವಾಗಲು ಆರಂಭವಾಯಿತು. ಅದುದರಿಂದ ‘ಮನುಷ್ಯನಿಗೆ ಬುದ್ಧಿಯಿಂದಲಾದರೂ ದೇವರನ್ನು ತಿಳಿಯಲಿ’, ಎಂಬುದಕ್ಕಾಗಿ ವಿಜ್ಞಾನದ ನಿರ್ಮಿತಿಯಾಯಿತು.

ವ್ಯವಹಾರ ಹಾಗೂ ಸಾಧನೆ ನಡುವಿನ ವ್ಯತ್ಯಾಸ !

ವ್ಯವಹಾರದಲ್ಲಿ ಹೆಚ್ಚುಹೆಚ್ಚು ಗಳಿಸುವುದಿರುತ್ತದೆ ಆದರೆ ಸಾಧನೆಯಲ್ಲಿ ಸರ್ವಸ್ವದ ತ್ಯಾಗವಿರುತ್ತದೆ; ಹಾಗಾಗಿ ವ್ಯವಹಾರದ ಮನುಷ್ಯನು ದುಃಖದಲ್ಲಿರುತ್ತಾನೆ, ಆದರೆ ಸಾಧಕರ ಆನಂದದಲ್ಲಿರುತ್ತಾರೆ.

ಯಾರಿಗಾದರೂ ಸಹಾಯ ಮಾಡುವಾಗ ‘ಅವನ ಮುಖ್ಯ ಅಡಚಣೆ ಪ್ರಾರಬ್ಧದಿಂದ ಬಂದಿದೆ’, ಎಂದು ಗಮನದಲ್ಲಿಟ್ಟುಕೊಂಡು ಅವನಿಗೆ ಸಾಧನೆಯನ್ನು ಮಾಡಲು ಹೇಳಬೇಕು.

– (ಪರಾತ್ಪರ ಗುರು) ಡಾ. ಆಠವಲೆ