ಗಣೇಶೋತ್ಸವವನ್ನು ಬ್ರಿಟಿಷರು ವಿರೋಧಿಸಿದಂತೆ ಕಾಂಗ್ರೆಸ್ ವಿರೋಧಿಸುತ್ತಿದೆ ! – ಪ್ರಧಾನಿಯಿಂದ ವಾಗ್ದಾಳಿ

ಶ್ರೀ ಗಣೇಶೋತ್ಸವ ದರ್ಶನಕ್ಕಾಗಿ ಮೋದಿ ನ್ಯಾಯಾಧೀಶರ ಮನೆಗೆ ಹೋಗಿದ್ದರಿಂದ ಕಾಂಗ್ರೆಸ್ ಕಿಡಿ ಕಾರಿತ್ತು

ನವ ದೆಹಲಿ – ಬ್ರಿಟಿಷರಂತೆ ಕಾಂಗ್ರೆಸದವರು ಕೂಡ ಗಣೇಶೋತ್ಸವವನ್ನು ವಿರೋಧಿಸುತ್ತಾರೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಪ್ರಧಾನಮಂತ್ರಿ ಮೋದಿ ಇವರು ಸಪ್ಟೆಂಬರ್ ೧೧ ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಯಶವಂತ ಚಂದ್ರಚೂಡು ಇವರ ದೆಹಲಿಯ ನಿವಾಸಕ್ಕೆ ಹೋಗಿ ಶ್ರೀಗಣೇಶನ ದರ್ಶನ ಪಡೆದು ಆರತಿ ಮಾಡಿದರು. ಇದರ ಬಗ್ಗೆ ಕಾಂಗ್ರೆಸ್ ‘ಈ ಭೇಟಿ ಸಂವಿಧಾನ ಬಾಹಿರವಾಗಿದೆ’ ಎಂದು ಟೀಕಿಸಿದೆ. ಅದಕ್ಕೆ ಮೋದಿ ಇವರು ಪ್ರತ್ಯುತ್ತರ ನೀಡಿದ್ದಾರೆ.

ಪ್ರಧಾನಮಂತ್ರಿಗಳು ಮಾತು ಮುಂದುವರೆಸಿ, ಕಾಂಗ್ರೆಸ್ ‘ಒಡೆದಾಳುವ ನೀತಿ’ಯನ್ನು ಅವಲಂಬಿಸಿದ್ದಾರೆ. ಅವರದು ಅಧಿಕಾರ ಪಡೆಯುವ ಪ್ರಯತ್ನವಿದೆ. ಶ್ರೀ ಗಣೇಶನ ಪೂಜೆಯ ಬಗ್ಗೆ ಕೂಡ ಅವರು ಆಕ್ಷೇಪಿಸುತ್ತಾರೆ. ಗಣೇಶೋತ್ಸವ ನಮಗಾಗಿ ಕೇವಲ ಶ್ರದ್ಧೆಯ ವಿಷಯವಷ್ಟೇ ಅಲ್ಲ ಅಥವಾ ಕೇವಲ ಹಬ್ಬವಲ್ಲ. ಗಣೇಶೋತ್ಸವ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಆ ಸಮಯದಲ್ಲಿ ಕೂಡ ಒಡೆದಾಳುವ ನೀತಿಯನ್ನು ಅವಲಂಬಿಸುತ್ತ ನಮ್ಮನ್ನು ಶೋಷಣೆ ಮಾಡಿದ ಬ್ರಿಟಿಷರು ಗಣೇಶೋತ್ಸವವನ್ನು ವಿರೋಧಿಸಿದ್ದರು. ಇಂದಿಗೂ ಕೂಡ ಕೆಲವು ಅಧಿಕಾರದಾಹಿ ಜನರು ನಮ್ಮ ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಶ್ರೀಗಣೇಶನ ಪೂಜೆಯ ಬಗ್ಗೆ ಕೂಡ ಅಕ್ಷೆಪವಿದೆ ಎಂದು ಹೇಳಿದರು.