ಹುಡುಗನಿಗೆ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುವ ಚಟ !
ಜೋಧಪುರ (ರಾಜಸ್ಥಾನ) – ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ (ಪಾರ್ನ್) ನೋಡಿ ೧೩ ವರ್ಷದ ಹುಡುಗನೊಬ್ಬ ನೆರೆಮನೆಯ ೭ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮೊಬೈಲ್ ನಲ್ಲಿ ಆಟದ (ಗೇಮ್) ಆಮಿಷ ಒಡ್ಡಿ ಆರೋಪಿ ಹುಡುಗ ಹುಡುಗಿಯನ್ನು ತನ್ನ ಮನೆಗೆ ಕರೆ ತಂದನು, ಅಲ್ಲೇ ಅವನು ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ ಹುಡುಗನನ್ನು ಬಂಧಿಸಿ ಅವನನ್ನು ಬಾಲಪರಾಧಿ ಕೇಂದ್ರದಲ್ಲಿ ಇರಿಸಿದ್ದಾರೆ. ಜೋಧಪುರದಲ್ಲಿ ಮಕ್ಕಳ ಮೇಲಿನ ಬಲಾತ್ಕಾರದ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇಲ್ಲಿಯವರೆಗೆ ತಿಂಗಳಲ್ಲಿ ೬ಕ್ಕಿಂತಲೂ ಹೆಚ್ಚಿನ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ಹುಡುಗನಿಗೆ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುವ ಚಟವಿತ್ತು. ಅವನು ತುಂಬಾ ಸಮಯ ಅಶ್ಲೀಲ ವಿಡಿಯೋ ನೋಡುತ್ತಿದ್ದನು. ಆರೋಪಿ ಹುಡುಗನು ಅಶ್ಲೀಲ ವಿಡಿಯೋ ನೋಡಿ ಈ ದುಷ್ಕೃತ್ಯ ಮಾಡಿರುವ ಸಂದೇಹವಿದೆ.
ಸಂಪಾದಕೀಯ ನಿಲುವುನಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ಪೋಷಕರು ಗಮನಿಸುತ್ತಿದ್ದಾರೆಯೇ? ಮಕ್ಕಳ ಮೇಲೆ ಯೋಗ್ಯ ಸಂಸ್ಕಾರವಾಗುತ್ತಿದೆಯೇ? ಈ ಬಗ್ಗೆ ಪೋಷಕರು ಯೋಚನೆ ಮಾಡುವುದು ಅಗತ್ಯವಾಗಿದೆ. ಮಕ್ಕಳ ಮೇಲೆ ಸಾಧನೆಯ ಸಂಸ್ಕಾರ ಮಾಡಿದರೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ ! |