ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯ ಸಮಯದಲ್ಲಿ ಮುಸ್ಲಿಮರಿಂದ ಪ್ಯಾಲೆಸ್ತೀನ್ ಧ್ವಜ ಹಾರಾಟ !

ಭೋಪಾಲ (ಮಧ್ಯಪ್ರದೇಶ) – ಈದ್ ಮಿಲಾದ್-ಉನ್-ನಬಿ ಸಂದರ್ಭದಲ್ಲಿ, ಮುಸ್ಲಿಮರು ಸೆಪ್ಟೆಂಬರ್ 16 ರಂದು ಮಧ್ಯಪ್ರದೇಶ ಸೇರಿದಂತೆ ದೇಶದಾದ್ಯಂತ ಅನೇಕ ಸ್ಥಳಗಳಲ್ಲಿ ಮೆರವಣಿಗೆಗಳನ್ನು ನಡೆಸಿದರು. ಈ ಮೆರವಣಿಗೆಗಳಲ್ಲಿ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದವು. ಕೆಲವು ಸ್ಥಳಗಳಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು ಮತ್ತು ಇಸ್ಲಾಮಿಕ್ ರಾಷ್ಟ್ರಗಳ ಧ್ವಜಗಳನ್ನು ಹಾರಿಸಿದರು. ರತ್ಲಾಮ, ಮಂದಸೌರ, ಶ್ಯೊಪುರ, ಮಂಡಲಾ, ಬಾಲಾಘಾಟ್ ಇತ್ಯಾದಿ ಜಿಲ್ಲೆಗಳಲ್ಲಿ ಮತಾಂಧ ಮುಸಲ್ಮಾನರು ಉದ್ಧಟತನದಿಂದ ವರ್ತಿಸಿದರು. ಈ ಎಲ್ಲಾ ಪ್ರಕರಣಗಳಲ್ಲಿ ಪೊಲೀಸರು ಅಪರಾಧ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಲವರನ್ನು ಬಂಧಿಸಲಾಗಿದೆ.

ರತಲಾಮ್‌ನಲ್ಲಿ ಡಿಜೆ (ದೊಡ್ಡ ಧ್ವನಿವರ್ಧಕ ವ್ಯವಸ್ಥೆ) ಮೂಲಕ ಅಕ್ಬರುದ್ದೀನ್ ಓವೈಸಿಯ ಪ್ರಚೋದನಕಾರಿ ಭಾಷಣ

ರತಲಾಮ್ ಜಿಲ್ಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜಗಳನ್ನು ಹಾರಿಸಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಯಿತು. ಈ ಮೆರವಣಿಗೆಯಲ್ಲಿ ಡಿಜೆಯಲ್ಲಿ ಆಕ್ಷೇಪಾರ್ಹ ಭಾಷಣಗಳು ಕೇಳಿಬಂದವು. ಇದರಲ್ಲಿ ಹೆಚ್ಚಿನವು ಎಂ.ಐ.ಎಂ. ಪಕ್ಷದ ಶಾಸಕ ಅಕ್ಬರುದ್ದೀನ್ ಓವೈಸಿಯ ಭಾಷಣಗಳು ಸೇರಿದೆ. ಈ ಹೇಳಿಕೆಗಳಲ್ಲಿ ಓವೈಸಿ ಮುಸ್ಲಿಂ ಜನಸಂಖ್ಯೆಯನ್ನು ಉಲ್ಲೇಖಿಸಿ ಬೀದಿಗಿಳಿಯುವಂತೆ ಪ್ರೇರೇಪಿಸಿರುವುದನ್ನು ಕೇಳಬಹುದಾಗಿದೆ. ರತಲಾಮ ಪೊಲೀಸ್ ಅಧೀಕ್ಷಕ ಅಮಿತ ಕುಮಾರ್ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆವಶ್ಯಕವಿರುವ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆಯನ್ನೂ ನೀಡಿದ್ದಾರೆ.

ಮಂಡಲಾದಲ್ಲಿ ಹಿಂದೂ ಸಂಘಟನೆಗಳಿಂದ ಕ್ರಮಕ್ಕೆ ಆಗ್ರಹ

ಮಧ್ಯಪ್ರದೇಶದ ಮಾಂಡಲಾ-ಬಾಲಾಘಾಟ್‌ನಲ್ಲಿ ನಡೆದ ಈದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜವನ್ನು ಹಾರಿಸಲಾಯಿತು. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಹಿಂದೂ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಧ್ವಜಾ ಹಾರಿಸುತ್ತಿದ್ದ ಫರ್ದೀನ್‌ನನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಬಾಲಘಾಟ್‌ನ ಹಲವೆಡೆ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜಗಳನ್ನು ಹಾರಿಸಲಾಯಿತು.

ಶ್ಯೊಪುರದಲ್ಲಿ ಶಿರಚ್ಛೇದನದ ಘೋಷಣೆ

ಮಧ್ಯಪ್ರದೇಶದ ಶ್ಯೊಪುರದಲ್ಲಿ, ಈದ್ ಮೆರವಣಿಗೆಯಲ್ಲಿ ಮುಸ್ಲಿಮರು ‘ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸಿ) ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿರುವ ವೀಡಿಯೋದಲ್ಲಿ ಕೆಲವರು ದೊಡ್ಡ ಬಿಳಿ ಬಾವುಟ ಹಿಡಿದ ವ್ಯಕ್ತಿಯ ಹಿಂದೆ ಹೋಗುತ್ತಾ ಕೆಲವು ಜನರು ‘ಗುಸ್ತಾಖ್-ಎ-ನಬಿ ಕಿ ಏಕ್ ಸಜಾ, ಸರ್ ತಾನ್ ಸೆ ಜುದಾ, ಸರ್ ತಾನ್ ಸೆ ಜುದಾ’ ಎಂದು ಘೋಷಣೆ ಕೂಗುತ್ತಿರುವುದು ಕಂಡು ಬರುತ್ತಿದೆ. ಈ ಬಿಳಿ ಧ್ವಜದ ಮೇಲೆ ಕಪ್ಪು ಬಣ್ಣದಲ್ಲಿ ಮುದ್ರಿಸಲಾದ ದೊಡ್ಡ ಕತ್ತಿಯನ್ನು ಹೊಂದಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಯ ಸದಸ್ಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲ ಮುಸ್ಲಿಮರು ಹಿಂದೂಗಳ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾರ್ಗಮಧ್ಯೆ ಹಿಂದೂ ಮನೆಗಳ ಮುಂದೆ ಘೋಷಣೆಗಳನ್ನು ಕೂಗಲಾಯಿತು ಮತ್ತು ಪಟಾಕಿ ಸಿಡಿಸಲಾಯಿತು. ಈ ಕೃತ್ಯದಿಂದ ಮಹಿಳೆಯೊಬ್ಬರಿಗೆ ಬೆಂಕಿ ತಗುಲಿ ಗಾಯಗಳಾಗಿವೆ. ಗುಂಪು ಗಲಭೆ ನಿಯಂತ್ರಿಸುವಲ್ಲಿ ವಿಫಲರಾದ ಒಟ್ಟು 5 ಪೊಲೀಸರನ್ನು ಇದುವರೆಗೆ ಅಮಾನತುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆ ನಡೆಯಬಾರದು ಎಂಬುದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತಿದೆ ! ಧ್ವಜವನ್ನು ಹಾರಿಸಿದವರನ್ನು ಬಂಧಿಸಿ ಮತ್ತೆ ಯಾರೂ ಹಾಗೆ ಧೈರ್ಯ ಮಾಡದಂತೆ ಶಿಕ್ಷೆ ವಿಧಿಸುವುದು ಆವಶ್ಯಕವಾಗಿದೆ !