ವಯನಾಡ್‌ನ ಭೂಕುಸಿತ; ಸಹಾಯ ಕಾರ್ಯದ ವೆಚ್ಚದಲ್ಲಿ ಕೇರಳದ ಕಮ್ಯುನಿಸ್ಟ್ ಪಕ್ಷದ ಸರಕಾರದಿಂದ ಹಗರಣ

ತಿರುವನಂತಪುರಂ (ಕೇರಳ) – ಕೇರಳದ ವಯನಾಡ್‌ನಲ್ಲಿ ಭೂಕುಸಿತ ಮತ್ತು ನೆರೆಹಾವಳಿ ಸಂಭವಿಸಿತ್ತು ಇದರ ಸಹಾಯಕ್ಕಾಗಿ ಆಗಿರುವ ವೆಚ್ಚದಲ್ಲಿ ಕೇರಳದ ಕಮ್ಯುನಿಸ್ಟ್ ಸರಕಾರದ ಹಗರಣ ಮಾಡಿದೆ ಎಂದು ಆರೋಪ ಕೇಳಿಬಂದಿದೆ. ಕೇರಳ ಸರಕಾರವು ಒಂದು ಮೃತದೇಹದ ಅಂತ್ಯಸಂಸ್ಕಾರಕ್ಕೆ 75 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ಸಹಾಯ ಸಿಬ್ಬಂದಿಗಳಿಗೆ ಟಾರ್ಚ್‌ಗಳು ಮತ್ತು ರೈನ್‌ಕೋಟ್‌ಗಳಂತಹ ವಸ್ತುಗಳನ್ನು ಖರೀದಿಸಲು 3 ಕೋಟಿ ರೂಪಾಯಿಗಳ ವೆಚ್ಚ ಮಾಡಿದೆ. ಕೇರಳ ಸರಕಾರ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾಖಲೆಗಳಲ್ಲಿ ಈ ಅಂಕಿ ಅಂಶಗಳನ್ನು ನೀಡಿದೆ. ಆದರೆ, ಮುಖ್ಯಮಂತ್ರಿ ಕಚೇರಿ ಮಾತ್ರ ಈ ಅಂಕಿ-ಅಂಶಗಳನ್ನು ಸಲ್ಲಿಸಿರುವ ವರದಿಗಳನ್ನು ನಿರಾಕರಿಸಿದೆ.

1. ಕೇರಳ ಸರಕಾರವು ವಯನಾಡ್‌ನಲ್ಲಿ ನೆರವಿನ ಸಂದರ್ಭದಲ್ಲಿ ಕೇರಳ ಉಚ್ಚ ನ್ಯಾಯಾಲಯದ ಪ್ರತಿಜ್ಞಾ ಪತ್ರ ಸಲ್ಲಿಸಿದೆ. ಈ ಪ್ರತಿಜ್ಞಾ ಪತ್ರದಲ್ಲಿ ಹಣಕಾಸಿನ ವಿವರಗಳನ್ನು ನೀಡಲಾಗಿದೆ. ವಯನಾಡ್‌ ದುರಂತದಲ್ಲಿ ಮರಣ ಹೊಂದಿದವರ ಅಂತ್ಯ ಸಂಸ್ಕಾರಕ್ಕಾಗಿ 2 ಕೋಟಿ 59 ಲಕ್ಷ ರೂಪಾಯಿ ವೆಚ್ಚವಾಗಿದೆಯೆಂದು ಈ ಪ್ರತಿಜ್ಞಾ ಪತ್ರದಲ್ಲಿ ನಮೂದಿಸಲಾಗಿದೆ. ಹಾಗೆಯೇ ಸಹಾಯಕ ಸಿಬ್ಬಂದಿಗಳ ವರೆಗೆ ತಲುಪಲು 4 ಕೋಟಿ ರೂಪಾಯಿಗಳ ವೆಚ್ಚಗಳ ಅಂದಾಜು ನೀಡಲಾಗಿತ್ತು. ಸೈನಿಕರು ಮತ್ತು ಸಹಾಯಕ ಸಿಬ್ಬಂದಿಗೆ ವಸತಿ ಮತ್ತು ಆಹಾರಕ್ಕಾಗಿ 10 ಕೋಟಿ ರೂಪಾಯಿ ವೆಚ್ಚವಾಗಿದೆ. ಪ್ರತಿಜ್ಞಾಪತ್ರದ ಪ್ರಕಾರ ಭೂಕುಸಿತದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು 15 ಕೋಟಿ ರೂಪಾಯಿ ವೆಚ್ಚವಾಗಿದೆ.

2. ಪ್ರತಿಜ್ಞಾ ಪತ್ರದಲ್ಲಿ ಈ ವೆಚ್ಚದಲ್ಲಿ ಗುಡ್ಡಕುಸಿತದಿಂದ ಪಾರಾದ 4 ಸಾವಿರ ಜನರಿಗೆ ಬಟ್ಟೆ ನೀಡಲು ಈ ವೆಚ್ಚ ಮಾಡಲಾಗುವುದು ಎಂದು ಹೇಳಲಾಗಿದೆ. ಜನರ ವೈದ್ಯಕೀಯ ಚಿಕಿತ್ಸೆಗೆ 8 ಕೋಟಿ ರೂಪಾಯಿ, ಪ್ರವಾಹ ಪೀಡಿತ ಪ್ರದೇಶಗಳಿಂದ ನೀರು ತೆಗೆಯಲು 3 ಕೋಟಿ ರೂಪಾಯಿಗಳ ವೆಚ್ಚ ಎಂದು ಅಂದಾಜಿಸಲಾಗಿತ್ತು. ವಾಯುಪಡೆಯ ವಿಮಾನಗಳಿಗೆ 17 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಭಾಜಪ, ಕಾಂಗ್ರೆಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಟೀಕೆ

ಭಾಜಪ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮಾತನಾಡಿ, ಪಿಣರಾಯಿ ವಿಜಯನ್ ಸರಕಾರವು ನಾಚಿಕೆಯಿಲ್ಲದೆ ಈ ವಿಪತ್ತಿನ ಹಣವನ್ನು ದೋಚುವ ಯೋಜನೆಯಾಗಿ ಪರಿವರ್ತಿಸಿದೆ ಎಂದು ಹೇಳಿದರು. ಕೇರಳದ ಜನರು ನಿಸ್ವಾರ್ಥವಾಗಿ ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದರೆ, ದುರಂತವನ್ನು ಕಮ್ಯುನಿಸ್ಟ್ ಸರಕಾರವು ತನ್ನ ಸ್ವಂತ ಲಾಭಕ್ಕಾಗಿ ಬಳಸಿಕೊಂಡಿತು. ಕಾಂಗ್ರೆಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಕೇರಳದ ಕಮ್ಯುನಿಸ್ಟ್ ಸರಕಾರವನ್ನು ಟೀಕಿಸಿವೆ. ಈ ವೇಳೆ ಮುಖ್ಯಮಂತ್ರಿ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಸುದ್ದಿ ತಪ್ಪು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಕೇರಳದ ಉಚ್ಚ ನ್ಯಾಯಾಲಯವು ಈ ಹಗರಣದ ವಿಚಾರಣೆ ನಡೆಸುವ ಆದೇಶವನ್ನು ನೀಡಿ, ಸತ್ಯವನ್ನು ಜನರೆದುರು ತರಬೇಕು ಎಂದು ರಾಷ್ಟ್ರ ಪ್ರೇಮಿ ಜನತೆಗೆ ಅನಿಸುತ್ತದೆ !