ಬಲೂಚಿಸ್ತಾನ: ಪೊಲೀಸ್ ಠಾಣೆಯ ಮೇಲೆ ದಾಳಿ; 9 ಪೊಲೀಸರ ಸಾವು, 5 ಮಂದಿ ನಾಪತ್ತೆ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಲೂಚಿಸ್ತಾನದ ಶಾಂತಿಯನ್ನು ಹಾಳು ಮಾಡಲು ನಾವು ಯಾರಿಗೂ ಬಿಡುವುದಿಲ್ಲ. ಶಾಂತಿಯ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವವರೆಗೆ ಅವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

ಪಾಕಿಸ್ತಾನದಲ್ಲಿ ಭಯೋತ್ಪಾದಕ ರಿಯಾಜ್ ಭಟ್ಕಳನನ್ನು ಹತ್ಯೆಗೈದ ಹಿಂದೂ ಗೂಂಡಾಗಳು!

ಭಾರತೀಯ ಪೊಲೀಸ್ ಸೇವೆಯ (ಇಂಡಿಯನ್ ಪೊಲೀಸ್ ಸರ್ವಿಸ್) ಮಾಜಿ ಅಧಿಕಾರಿ ರಾಜೇಶ ಪಾಂಡೆ ಅವರ ‘ಅಂತಹೀನ’ ಎಂಬ ಪುಸ್ತಕದಲ್ಲಿ ಗೂಂಡಾ ಬಬ್ಲೂ ಶ್ರೀವಾಸ್ತವನ ಉಲ್ಲೇಖ ನೀಡಿ, ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ರಿಯಾಜ್ ಭಟ್ಕಳನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ದಾವೆ ಮಾಡಲಾಗಿದೆ.

ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಗೂಂಡಾಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು

ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು.

ಮಸೀದಿ ಧ್ವನಿವರ್ಧಕಗಳ ಕುರಿತು 2 ವಾರಗಳಲ್ಲಿ ವರದಿ ಸಲ್ಲಿಸಲು ಸೂಚನೆ : Mosque Speaker Complaint

ಮಸೀದಿಗಳಲ್ಲಿ ಅನಧಿಕೃತ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದ ಮಾಲಿನ್ಯದ ಬಗ್ಗೆ ನಾಗರಿಕರು ಪದೇ ಪದೇ ದೂರು ನೀಡಿದರೂ, ಮುಂಬೈ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.

‘ಕಪ್ಪು ಹಣ’ ಆರೋಪ: ಜಿಲ್ಲಾ ಸರಬರಾಜು ಅಧಿಕಾರಿ ವಿರುದ್ಧ ತಾಯಿಯ ದೂರು : Government Officer Case

ಭಾರತದಲ್ಲಿ ಭ್ರಷ್ಟಾಚಾರ ಮಾಡುವವರಿಗೆ ಕುಟುಂಬದಿಂದ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲ, ಇಂತಹ ಅಧಿಕಾರಿಗಳ ಕುಟುಂಬದವರೂ ಕೂಡ ಈ ಕಪ್ಪು ಹಣದ ಲಾಭ ಪಡೆಯುತ್ತಾರೆ; ಇದೇ ಕಾರಣಕ್ಕೆ ಭ್ರಷ್ಟಾಚಾರ ವ್ಯಾಪಕವಾಗಿ ಹರಡುತ್ತಿದೆ.

ಹಾಸನದಿಂದ ಹಿಂದುತ್ವನಿಷ್ಠ ನಾಯಕ ಪುನೀತ್ ಕೆರೆಹಳ್ಳಿ ಬಂಧನ!

ಹಿಂದುತ್ವನಿಷ್ಠ ನಾಯಕ ಮತ್ತು ‘ರಾಷ್ಟ್ರಪಡೆ’ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರು ಪೊಲೀಸರು ಹಾಸನದಿಂದ ಬಂಧಿಸಿದರು. ಮೌಲ್ವಿಯೊಬ್ಬರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಗೃಹಸಚಿವರ ತವರಿನಲ್ಲಿ ಪೊಲೀಸ್ ಎಡವಟ್ಟು: ಪೋಕ್ಸೊ ಆರೋಪಿ ಪರಾರಿ

ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪರಾರಿಯಾದ ಆರೋಪಿಯ ಹೆಸರು ಮಂಜುನಾಥ (ವಯಸ್ಸು 24 ವರ್ಷ) ಆಗಿದೆ. ಒಂದು ವಾರದ ಹಿಂದೆ ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.

ಬಂಗಾಳ: ೯ ಬಾಂಗ್ಲಾದೇಶಿ ವಲಸಿಗರ ಬಂಧನ !

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತರಾದ ವಲಸಿಗರು ಭಾರತದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ರಹಸ್ಯ ಮಾರ್ಗದ ಮೂಲಕ ಮತ್ತೆ ಬಾಂಗ್ಲಾದೇಶಕ್ಕೆ ಮರಳುವ ಸಿದ್ಧತೆಯಲ್ಲಿದ್ದರು.

ತೆಲಂಗಾಣದಲ್ಲಿ ಪೊಲೀಸ್ ಉಪ ಅಧೀಕ್ಷಕನ ೨೦೦ ಕೋಟಿ ರೂಪಾಯಿಗಳ ಅಕ್ರಮ ಆಸ್ತಿ : Telangana DSP Corruption

ತೆಲಂಗಾಣದಲ್ಲಿ ಪೊಲೀಸ್ ಉಪ ಅಧೀಕ್ಷಕನ ೨೦೦ ಕೋಟಿ ರೂಪಾಯಿಗಳ ಅಕ್ರಮ ಆಸ್ತಿ. ಲಂಚ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ನಗರದ ಪೊಲೀಸ್ ಪಡೆಯ ‘ಕಂಪ್ಯೂಟರ್ ಸರ್ವಿಸ್’ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಂಕೀರೆಡ್ಡಿ ಭೀಮ ರೆಡ್ಡಿ ಅವರ ಮನೆ ಸೇರಿದಂತೆ ೧೬ ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಬೆಂಗಳೂರು ಪೊಲೀಸರಿಂದ 12 ಬಾಂಗ್ಲಾದೇಶಿ ನುಸುಳುಕೋರರು ವಶಕ್ಕೆ!

ಬಂಗಾಳವಾಗಿ ಭಾರತಕ್ಕೆ ಪ್ರವೇಶಿಸಿ ಬೆಂಗಳೂರಿನಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದ 12 ಬಾಂಗ್ಲಾದೇಶಿ ನುಸುಳುಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸುಹಾಗ್ ಮೊನ್ಸುರಲಿ ಮತ್ತು ಮುಕುಲ್ ಎಂಬ ಇಬ್ಬರು ಪುರುಷರಾಗಿದ್ದು, ಉಳಿದ 10 ಜನರು ಮಹಿಳೆಯರು ಎಂದು ತಿಳಿದುಬಂದಿದೆ.