ನಾಗಪುರ ಹಿಂಸಾಚಾರದ ಮಾಸ್ಟರ್ ಮೈಡ್ ಫಹೀಮ ಖಾನ ಬಂಧನ!

ಖಾನ ‘ಮೈನಾರಿಟಿ ಡೆಮಾಕ್ರಟಿಕ್ ಪಾರ್ಟಿ’ಯ ನಗರಾಧ್ಯಕ್ಷನಾಗಿದ್ದು, ನಿತಿನ್ ಗಡ್ಕರಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದನು!

ನಾಗಪುರ – ನಾಗಪುರ ಹಿಂಸಾಚಾರದ ಸೂತ್ರಧಾರ ‘ಮೈನಾರಿಟಿ ಡೆಮಾಕ್ರಟಿಕ್ ಪಾರ್ಟಿ’ಯ ನಗರ ಅಧ್ಯಕ್ಷ ಫಹೀಮ ಖಾನ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಖಾನನನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆತ ಸುಮಾರು 500 ಜನರನ್ನು ಒಟ್ಟುಗೂಡಿಸಿ ಪ್ರಚೋದಿಸಿದ್ದಾನೆ. ಇದರಿಂದ ಗೊಂದಲ ಮತ್ತು ಹಿಂಸಾತ್ಮಕ ಸಂಘರ್ಷ ಉಂಟಾಯಿತು. ಮತಾಂಧರು ಕೊಡಲಿ, ಕಲ್ಲು, ದೊಣ್ಣೆ ಮತ್ತು ಇತರ ಆಯುಧಗಳನ್ನು ಬಳಸಿ ಭಯ ನಿರ್ಮಿಸಿದರು. ಖಾನ್‌ನ ಭಾಷಣದ ಉದ್ದೇಶ ಸಾಮಾಜಿಕ ಸೌಹಾರ್ದತೆಯನ್ನು ಹಾಳು ಮಾಡುವುದು ಮತ್ತು ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸುವುದು ಆಗಿತ್ತು, ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಫಹೀಮ ಖಾನ್‌ನ ಭಾವಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಆತ 2024 ರ ಲೋಕಸಭಾ ಚುನಾವಣೆಯಲ್ಲಿ ನಾಗಪುರ ಕ್ಷೇತ್ರದಿಂದ ಕೇಂದ್ರ ಸಚಿವ ನಿತಿನ ಗಡಕರಿ ವಿರುದ್ಧ ಸ್ಪರ್ಧಿಸಿದ್ದನು.

ಗಲಭೆಕೋರರಿಂದ ಮಹಿಳಾ ಪೊಲೀಸ್ ಅಧಿಕಾರಿಗಳ ಮೇಲೆ ಲೈಂಗಿಕ ದೌರ್ಜನ್ಯ!

ಪ್ರಾಥಮಿಕ ವರದಿಯ ಪ್ರಕಾರ, ಕತ್ತಲೆಯ ಲಾಭ ಪಡೆದು ‘ರಾಪಿಡ್ ರೆಸ್ಪಾನ್ಸ್ ಟೀಮ್’ ನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸಮವಸ್ತ್ರವನ್ನು ಎಳೆಯಲು ಪ್ರಯತ್ನಿಸಲಾಯಿತು, ಇತರ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೋಡಿ ಅಶ್ಲೀಲ ಹಾವಭಾವಗಳನ್ನು ಮಾಡಲಾಯಿತು ಮತ್ತು ಅವರ ಮೇಲೆ ಅವಾಚ್ಯ ಪದಗಳಿಮದ ಟೀಕಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶಪೇಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಮಹಿಳಾ ಪೊಲೀಸ್ ಅಧಿಕಾರಿಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದವರಿಗೆ ಷರಿಯಾ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕೆಂದು ಯಾವುದೇ ಮುಸ್ಲಿಂ ನಾಯಕರು ಅಥವಾ ಮೌಲ್ವಿಗಳು ಏಕೆ ಒತ್ತಾಯಿಸುತ್ತಿಲ್ಲ?

ಇತರ ಘಟನೆಗಳು!

1. ನಾಗಪುರ ನಗರದಲ್ಲಿ ಕರ್ಫ್ಯೂ ಇರುವುದರಿಂದ 200 ಶಾಲೆಗಳನ್ನು ಮುಚ್ಚಲಾಗಿದೆ.

2. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ 46 ಶಂಕಿತರನ್ನು ಬಂಧಿಸಿದ್ದಾರೆ. ಈ ಶಂಕಿತರ ವಿರುದ್ಧ ಗಣೇಶಪೇಠ ಮತ್ತು ತಹಸಿಲ್ ಪೊಲೀಸ್ ಠಾಣೆಗಳಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಹಿಳೆಯರನ್ನು ಚುಡಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡುತ್ತೇವೆ! – ಮನೀಷಾ ಕಾಯಂದೆ, ಶಿವಸೇನೆ ನಾಯಕಿ

ಕೆಲವು ಮಾಧ್ಯಮಗಳ ಮೂಲಕ ಮಹಿಳಾ ಪೊಲೀಸರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನಮಗೆ ತಿಳಿಯಿತು. ಇದನ್ನು ನಾವು ಸಹಿಸುವುದಿಲ್ಲ. ಈ ಹಿಂದೆ ಮುಂಬಯಿಯ ಆಜಾದ್ ಮೈದಾನ ಗಲಭೆಯಲ್ಲಿಯೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣ ನಡೆದಿತ್ತು. ಇಂತಹ ವಿಷಯಗಳು ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ. ನಾವು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಶಿವಸೇನೆ ಮಹಿಳಾ ನಾಯಕಿ ಶಾಸಕಿ ಮನೀಷಾ ಕಾಯಂದೆ ತಿಳಿಸಿದರು. ಅವರು ಮುಂಬಯಿಯಲ್ಲಿ ಬಜೆಟ್ ಅಧಿವೇಶನದ ಕಾಲಾವಧಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

 

ಸಂಪಾದಕೀಯ ನಿಲುವು

ಫಹೀಮ ಖಾನನ ಬೆಂಬಲಕ್ಕೆ ಯಾರು ನಿಂತಿದ್ದರು, ಯಾರ ಆದೇಶದ ಮೇರೆಗೆ ಆತ ಈ ಗಲಭೆ ಸೃಷ್ಟಿಸಿದನು, ಇದರ ಮೂಲಕ್ಕೆ ಹೋಗಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರ ಹೆಸರುಗಳನ್ನು ಸಾರ್ವಜನಿಕ ಗೊಳಿಸಬೇಕು!