ನಾಗಪುರ ಗಲಭೆ : ಪೊಲೀಸರ ಮೇಲೆ ದಾಳಿ ನಡೆಸುವವರನ್ನು ಬಿಡುವುದಿಲ್ಲ ! – ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್

ನಾಗಪುರ ಗಲಭೆ ಪ್ರಕರಣ

ಮುಂಬಯಿ – ನಾಗಪುರದಲ್ಲಿ ನಡೆದ ಗಲಭೆ ಸುನಿಯೋಜಿತವಾಗಿತ್ತು; ಅಲ್ಲಿ ಒಂದು ಟ್ರ್ಯಾಲಿ ತುಂಬಾ ಕಲ್ಲುಗಳು ಸಿಕ್ಕಿವೆ. ಕೆಲವು ಜನರು ತಮ್ಮ ಮನೆಯ ಮೇಲೆ ಕಲ್ಲುಗಳನ್ನು ಸಂಗ್ರಹಿಸಿಟ್ಟಿದ್ದರು. ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಕೂಡ ವಶಪಡಿಸಿಕೊಳ್ಳಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಕೆಲವು ನಿಶ್ಚಿತ ಮನೆಗಳು, ಹಾಗೂ ಕಂಪನಿಗಳನ್ನು ಗುರಿ ಮಾಡಲಾಗಿದೆ. ಇದರಲ್ಲಿ ೩ ಪೊಲೀಸರು ಗಾಯಗೊಂಡಿದ್ದು ಪೊಲೀಸ ಉಪಾಯುಕ್ತರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದಾರೆ. ಪೊಲೀಸರ ಮೇಲೆ ದಾಳಿ ನಡೆಸುವವರು ಯಾರೇ ಆಗಿದ್ದರು, ಅವರನ್ನು ಬಿಡುವುದಿಲ್ಲ. ಈ ಘಟನೆಯಲ್ಲಿ ವಾಹನಗಳನ್ನು ಸುಟ್ಟು ಹಾಕಲಾಯಿತು. ಸಂಪೂರ್ಣ ಘಟನೆಯಲ್ಲಿ ೩೩ ಪೊಲೀಸರು ಗಾಯಗೊಂಡಿದ್ದಾರೆ. ಒಟ್ಟು ೫ ನಾಗರೀಕರು ಗಾಯಗೊಂಡಿದ್ದಾರೆ. ಮೂವರಿಗೆ ಚಿಕಿತ್ಸೆ ನೀಡಿ ವಾಪಸ್ ಮನೆಗೆ ಕಳುಹಿಸಲಾಗಿದೆ. ಗಾಯಗೊಂಡಿರುವ ಇಬ್ಬರು ಸದ್ಯ ಆಸ್ಪತ್ರೆಯಲ್ಲಿದ್ದು ಒಬ್ಬರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಪಡಣವೀಸ್ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಮಾತು ಮುಂದುವರಿಸಿ,

೧. ಈ ಘಟನೆಯ ಬಳಿಕ ೩ ಪ್ರಕರಣಗಳನ್ನು ದಾಖಲಿಸಲಾಗಿದ್ದು ೨ ದೂರುಗಳು ದಾಖಲಾಗಿವೆ. ೧೧ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ.

೨. ಪ್ರವೇಶದ ಸ್ಥಳದಲ್ಲಿ ನಿಷೇಧಿಸಲಾಗಿದೆ. ತಹಸೀಲ್, ಕೋತವಾಲಿ, ಗಣೇಶಪೇಟ, ಪಾಚಪಾವಲಿ, ಲಕಡಗಂಜ, ಶಾಂತಿನಗರ, ಸಕ್ಕರದರ, ನಂದನವನ, ಇಮಾಮವಾಡ, ಯಶೋದಾ ನಗರ, ಕಪಿಲನಗರ ಈ ಪೊಲೀಸ ಠಾಣೆಗಳ ಪ್ರದೇಶಗಳಲ್ಲಿ ನಿಷೇಧ ಹೇರಲಾಗಿದೆ. ರಾಜ್ಯ ಮೀಸಲು ಪೊಲೀಸ ಪಡೆಯ ಐದು ತಂಡಗಳನ್ನು ನಾಗಪುರದಲ್ಲಿ ನೇಮಕಗೊಳಿಸಲಾಗಿದೆ.

೩. ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ಪೊಲೀಸರು ಶಾಂತಿ ಸ್ಥಾಪನೆ ಮಾಡುತ್ತಿದ್ದರು. ಅಂತಹ ಸಮಯದಲ್ಲಿ ಪೊಲೀಸರ ಮೇಲೆ ನಡೆದಿರುವ ದಾಳಿ ತಪ್ಪಾಗಿದೆ.

೪. ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ನಾನು ಎಲ್ಲರಿಗೂ ವಿನಂತಿಸಲು ಬಯಸುತ್ತೇನೆ, ಅದೇನೆಂದರೆ, ಈ ಸಮಯದಲ್ಲಿ ಎಲ್ಲಾ ಸಮಾಜದ ಧಾರ್ಮಿಕ ಹಬ್ಬಗಳು ನಡೆಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲರೂ ಸಂಯಮದಿಂದ ಇರಬೇಕು.

ಔರಂಗಜೇಬನ ಗೋರಿಯ ರಕ್ಷಣೆ ಮಾಡಬೇಕಿರುವುದು ದೌರ್ಭಾಗ್ಯ ! – ಮುಖ್ಯಮಂತ್ರಿ

ನಿಜವೆಂದರೆ ಔರಂಗಜೇಬಗೆ ಗೋರಿ ಏಕೆ ಬೇಕಿತ್ತು? ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಅದಕ್ಕೆ ೫೦ ವರ್ಷದ ಹಿಂದಿನಿಂದ ಸಂರಕ್ಷಿತ ಸ್ಥಳ ಎಂದು ಘೋಷಿಸಿದೆ. ಅದರ ರಕ್ಷಣೆ ಮಾಡುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರದ್ದಾಗಿದೆ. ಸಾವಿರಾರು ಜನರನ್ನು ಕೊಂದಿರುವ ಔರಂಗಜೇಬನ ಗೋರಿಯ ರಕ್ಷಣೆ ಮಾಡಬೇಕಾಗಿದೆ, ಇದು ದೌರ್ಭಾಗ್ಯವಾಗಿದೆ, ಎಂದು ಮುಖ್ಯಮಂತ್ರಿ ಫಡಣವೀಸ್ ಅವರು ಈ ವೇಳೆ ವಿಷಾದ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ಹರ್ಷವರ್ಧನ್ ಸಪಕಾಳ ಅವರು ಕ್ಷಮೆ ಯಾಚಿಸಬೇಕು ! – ಉಪಮುಖ್ಯಮಂತ್ರಿ ಏಕನಾಥ ಶಿಂದೆ

ಅತ್ಯಂತ ಕ್ರೂರಿ ಔರಂಗಜೇಬನ ತುಲನೆ ಯಾರ ಜೊತೆಗೆ ಕೂಡ ಮಾಡಲು ಸಾಧ್ಯವಿಲ್ಲ ; ಆದರೆ ಸಪಕಾಳ ಅವರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಔರಂಗಜೇಬನ ಜೊತೆಗೆ ತುಲನೆ ಮಾಡಿದ್ದಾರೆ, ಇದು ಖಂಡನೀಯ. ಈ ರಾಜ್ಯವು ಛತ್ರಪತಿಯ ಆದರ್ಶದ ಮೇಲೆ ನಡೆಯುತ್ತದೆ. ಮುಖ್ಯಮಂತ್ರಿಗಳ ಅವಮಾನವು ಮಹಾರಾಷ್ಟ್ರದ ಅವಮಾನವಾಗಿದೆ. ಪ್ರದೇಶಾಧ್ಯಕ್ಷ ಹರ್ಷವರ್ಧನ ಸಪಕಾಳ ಅವರು ಮಹಾರಾಷ್ಟ್ರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಔರಂಗಜೇಬನು ತನ್ನ ಸಹೋದರನನ್ನು ಕೊಂದಿದ್ದನು. ತಂದೆಯನ್ನು ಬಂಧಿಸಿದ್ದನು. ಕಿರಿಯ ಸಹೋದರನನ್ನು ಹುಚ್ಚ ಎಂದು ಹೇಳಿದ್ದನು. ಛತ್ರಪತಿ ಸಂಭಾಜಿ ಮಹಾರಾಜರಿಗೂ ಕೂಡ ಹಿಂಸೆ ನೀಡಿದ್ದನು. ಆದ್ದರಿಂದ ಔರಂಗಜೇಬನು ಖಂಡಿತವಾಗಿಯೂ ಕ್ರೂರಿ ಆಗಿದ್ದನು. ದೇವೇಂದ್ರ ಫಡಣವೀಸ್ ಅವರ ಸರಕಾರ ಕೂಡ ಅಷ್ಟೇ ಕ್ರೂರ ಪದ್ಧತಿಯಿಂದ ಆಡಳಿತ ನಡೆಸುತ್ತಿದೆ, ಎಂದು ಸಪಕಾಳ ಅವರು ಹೇಳಿಕೆ ನೀಡಿದ್ದರು. ಇದಾದ ಬಳಿಕ ಉಪಮುಖ್ಯಮಂತ್ರಿಗಳು ಸಪಕಾಳ ಅವರ ಮೇಲೆ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ನಾಗಪುರದಲ್ಲಿ ಗಲಭೆಯ ನಂತರದ ಬೆಳವಣಿಗೆಗಳು !

1. ನಾಗಪುರದಲ್ಲಿನ ಗಲಭೆಯ ನಂತರ ಪೊಲೀಸರಿಂದ ತನಿಖೆ, ಹಾಗೆಯೇ ‘ಕೋಂಬಿಂಗ್ ಕಾರ್ಯಾಚರಣೆ’ (ಒಂದೇ ಸ್ಥಳದಲ್ಲಿ ಪೊಲೀಸರಿಂದ ದೊಡ್ಡ ಪ್ರಮಾಣದಲ್ಲಿ ಹುಡುಕಾಟ) ನಡೆಯುತ್ತಿದೆ. ಈ ಪ್ರಕರಣದಲ್ಲಿ 150 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅನೇಕ ಜನರನ್ನು ಬಂಧಿಸಲಾಗಿದೆ. ಪಂಚನಾಮೆಯ ಪ್ರಕ್ರಿಯೆ ನಡೆಯುತ್ತಿದೆ. 1800 ಸಾಮಾಜಿಕ ಮಾಧ್ಯಮಗಳ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಬ್ಯಾರಿಕೇಡ್ಗಳನ್ನು ಅಳವಡಿಸುತ್ತಿದ್ದಾರೆ.

2. ಗುಂಪು ಕ್ರೇನ್ ಮತ್ತು ಜೆಸಿಬಿಗಳನ್ನು ಸುಟ್ಟುಹಾಕಿದ್ದರಿಂದ, ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅನೇಕ ನಾಗರಿಕರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಅವರಿಗೆ ವೈಯಕ್ತಿಕ ಹಾನಿಯಾಗಿದೆ. ನಗರದ ಅನೇಕ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಲಾಗಿದೆ.

3. ಗುಂಪಿನವರು ಮುಖಕ್ಕೆ ಕರವಸ್ತ್ರ ಮತ್ತು ಮಾಸ್ಕ್ ಧರಿಸಿದ್ದರು. ಅವರು ಒಂದು ಕಾರಿನಲ್ಲಿ ದೊಡ್ಡ ಕಲ್ಲು ಎತ್ತಿಹಾಕಿ ಕಾರಿಗೆ ಬೆಂಕಿ ಹಚ್ಚಿದರು. ಕಾರಿಗೆ ಬೆಂಕಿ ಹತ್ತಿದ ನಂತರ, ಪಕ್ಕದ ಹಿಂದೂ ಕುಟುಂಬದ ಮನೆಯ ಗೋಡೆ ಮತ್ತು ಕಿಟಕಿಯು ಬೆಂಕಿಗೆ ಆಹುತಿಯಾಯಿತು. ಬೆಂಕಿಯಿಂದ ಕಿಟಕಿ ಮತ್ತು ಗೋಡೆಯ ಪ್ರದೇಶ ಕಪ್ಪಾಗಿದೆ.

4. ಗಲಭೆಯಿಂದಾಗಿ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿನ ಅನೇಕ ಶಾಲೆಗಳಿಗೆ ಆಕಸ್ಮಿಕ ರಜೆ ನೀಡಲಾಗಿದೆ.

5. ಪರಿಸ್ಥಿತಿಯನ್ನು ನಿಯಂತ್ರಿಸಲು ಮಹಾಲ ಪರಿಸರದಲ್ಲಿನ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸರು ಆದೇಶಿಸಿದರು. ಪೊಲೀಸರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದರಿಂದ ನಾಗರೀಕರು ಪರದಾಡಬೇಕಾಯಿತು. ಪೊಲೀಸರು ಹೆಚ್ಚುವರಿ ಪಡೆಗಳನ್ನು ಕರೆಸಿ ಬಂದೋಬಸ್ತ್ ನಿಯೋಜಿಸಿದರು. ಮಹಾಲ ಪರಿಸರದಲ್ಲಿ ಸುಮಾರು 1 ಸಾವಿರ ಪೊಲೀಸ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

6. ಮಹಾಲ-ಗಾಂಧಿ ಗೇಟ್ ಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಮುಚ್ಚಲಾಗಿದೆ. ಈ ಪ್ರದೇಶದಲ್ಲಿ ಪೊಲೀಸರು ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನೂ ನಿರಾಕರಿಸಿದ್ದಾರೆ. ಪೊಲೀಸರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಪರಿಸರದಲ್ಲಿನ ನಾಗರಿಕರ ಗುಂಪನ್ನು ಚದುರಿಸಿದರು. ಇದರಿಂದ ಅನೇಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರು ಜನರನ್ನು ಚದುರಿಸಿದರು.

7. ಗಲಭೆಯ ನಂತರ ರಸ್ತೆಯಲ್ಲಾದ ಕಸವನ್ನು ಸಂಗ್ರಹಿಸಿ ನಾಗಪುರ ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ರಾತ್ರಿ 1 ರಿಂದ ಬೆಳಿಗ್ಗೆ 4 ರವರೆಗೆ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಈ ಕಸದಲ್ಲಿ ಹೆಚ್ಚಿನ ಪ್ರಮಾಣದ ಕಲ್ಲುಗಳು ಮತ್ತು ಗಾಜುಗಳು ಇದ್ದವು.